ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವರಿಬ್ಬರಿಂದಾಗಿ ಶಿಖರ್ ಧವನ್ ಸಾಧನೆ ಮರೆಯಾಯಿತು ಎಂದ ರವಿ ಶಾಸ್ತ್ರಿ

Ravi Shastri said Shikhar Dhawan doesnt get the accolades what he deserves

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ದೊಡ್ಡ ಗುರಿಯನ್ನು ನಿಗದಿಪಡಿಸಿದರೂ ಬೌಲಿಂಗ್‌ನಲ್ಲಿ ಎಡವಿತು. ಆರಂಭದಲ್ಲಿ ಬೌಲಿಂಗ್‌ನಲ್ಲಿಯೂ ಯಶಸ್ಸು ಸಾಧಿಸಿದರೂ ಬಳಿಕ ಟೀಮ್ ಇಂಡಿಯಾ ಬೌಲರ್‌ಗಳ ವಿರುದ್ಧ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲಾಥನ್ ಭರ್ಜರಿ ಪ್ರದರ್ಶನ ನೀಡಿದರು. ದ್ವಿಶತಕದ ಜೊತೆಯಾಟ ನೀಡಿದ ಈ ಜೋಡಿ ಅಜೇಯವಾಗುಳಿದು ಕಿವೀಸ್ ಗೆಲುವಿಗೆ ಕಾರಣವಾಯಿತು.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಹಾಗೂ ಹಂಗಾಮಿ ನಾಯಕ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಅದ್ಭುತ ಆರಂಭವನ್ನು ಒದಗಿಸಿದರು. ಶಿಖರ್ ಧವನ್ 72 ರನ್‌ಗಳ ಕೊಡುಗೆ ನೀಡಿದ್ದಲ್ಲದೆ ಒಟ್ಟಾರೆ ಏಕದಿನ ಮಾದರಿಯಲ್ಲಿ 12,000 ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಮಾತನಾಡಿದ್ದು ಶಿಖರ್ ಧವನ್ ಸಾಮರ್ಥ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಇಬ್ಬರು ಶ್ರೇಷ್ಠ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಬ್ಬರದ ಮಧ್ಯೆ ಶಿಖರ್ ಧವನ್ ಸಾಧನೆ ಮರೆಯಾಯಿತು ಎಂದು ನುಡಿದಿದ್ದಾರೆ.

ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ದೊರೆಯಬೇಕಾದ ಗೌರವ ಸಿಗಲಿಲ್ಲ

ದೊರೆಯಬೇಕಾದ ಗೌರವ ಸಿಗಲಿಲ್ಲ

ಟೀಮ್ ಇಂಡಿಯಾದ ಅನುಭವಿ ಆಟಗಾರ ಶಿಖರ್ ಧವನ್ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ ಅನುಭವಿಯಾಗಿ ಶಿಖರ್ ಧವನ್‌ಗೆ ದೊರೆಯಬೇಕಾದ ಗೌರವ ದೊರೆಯಲಿಲ್ಲ ಎಂದು ಹೇಳಿದ್ದಾರೆ. "ಆತನಲ್ಲಿ ಸಾಕಷ್ಟು ಅನುಭವವಿದೆ. ಆತನಿಗೆ ಸಿಗಬೇಕಾದ ಗೌರವ ದೊರೆಯಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಲ್ಲರ ಗಮನ ಕೂಡ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೇಲಿದ್ದ ಕಾರಣ ಧವನ್ ಸಾಧನೆ ಗಣನೆಗೆ ಬಾರಲಿಲ್ಲ. ನೀವು ಏಕದಿನ ಸಾಧನೆಯನ್ನು ನೋಡಿದರೆ ಅವರಿಂದ ಕೆಲ ಅದ್ಬುತ ಇನ್ನಿಂಗ್ಸ್‌ಗಳು ಅಗ್ರ ತಂಡಗಳ ವಿರುದ್ಧವೇ ಬಂದಿದೆ. ಅದು ಕೂಡ ದೊಡ್ಡ ಹಂತದಲ್ಲಿ. ಅದು ನಿಜವಾಗಿಯೂ ವಿಶೇಷವಾದ ಸಾಧನೆ" ಎಂದಿದ್ದಾರೆ ರವಿ ಶಾಸ್ತ್ರಿ.

ಧವನ್ ಕೌಶಲ್ಯದ ಬಗ್ಗೆಯೂ ರವಿ ಶಾಸ್ತ್ರಿ ಮೆಚ್ಚುಗೆ

ಧವನ್ ಕೌಶಲ್ಯದ ಬಗ್ಗೆಯೂ ರವಿ ಶಾಸ್ತ್ರಿ ಮೆಚ್ಚುಗೆ

"ಎಡಗೈ ಆಟಗಾರನನಾಗಿ ಅಗ್ರ ಕ್ರಮಾಂಕದಲ್ಲಿ ಶಿಖರ್ ಧವನ್ ಸಾಕಷ್ಟು ಪರಿಣಾಮಕಾರಿ ಆಟವನ್ನು ಪ್ರದರ್ಶಿಸಿದ್ದಾರೆ. ಅವರು ಸ್ವಾಭಾವಿಕ ಆಟಗಾರನಾಗಿದ್ದು ವೇಗದ ಬೌಲಿಂಗ್ ವಿರುದ್ಧ ಅವರಲ್ಲಿ ಸಾಖಷ್ಟು ಅದ್ಭುತ ಕೌಶಲ್ಯಗಳು ಇದೆ. ಪುಲ್, ಕಟ್, ಡ್ರೈವ್ ಮುಂತಾದ ಸಾಕಷ್ಟು ಹೊಡೆತಗಳು ಅವರಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ಅವರ ಅನುಭವ ಯುವ ಆಟಗಾರರರಿಗೆ ನೆರವಾಗಲಿದೆ" ಎಂದಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ.

ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು

ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು

ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ 7 ವಿಕೆಟ್‌ಗಳ ಅಂತರದ ಬೃಹತ್ ಸೋಲು ಎದುರಾಗಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಶಿಖರ್ ಧವನ್, ಶುಬ್ಮನ್ ಗಿಲ್, ಹಾಗೂ ಶ್ರೇಯಸ್ ಐಯ್ಯರ್ ಅವರ ಅರ್ಧ ಶತಕದ ನೆರವಿನಿಂದ 306 ರನ್‌ಗಳಿಸಿತ್ತು. ಟೀಮ್ ಇಂಡಿಯಾ ಪರವಾಗಿ ಸಂಜು ಸ್ಯಾಮ್ಸನ್ ಹಾಗೂ ವಾಶಿಂಗ್ಟನ್ ಸುಂದರ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಟೀಮ್ ಇಂಡಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಸಾಧಾರಣ ಆರಂಭವನ್ನು ಪಡೆಯಿತು. ಮೊದಲ ಮೂರು ವಿಕೆಟ್‌ಗಳನ್ನು 88 ರನ್‌ಗಳನ್ನು ಗಳಿಸುವಷ್ಟರಲ್ಲಿ ಕಿವೀಸ್ ಪಡೆ ಕಳೆದುಕೊಂಡಿತ್ತು. ಆದರೆ ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲ್ಯಾಥಮ್ ಅಜೇಯ ಪ್ರದರ್ಶನ ನೀಡಿದರು. ಟಾಮ್ ಲಾಥಮ್ 145 ರನ್‌ಗಳ ಅಮೋಘ ಪ್ರದರ್ಶನ ನೀಡಿದರೆ ಕೇನ್ ವಿಲಿಯಮ್ಸನ್ 94 ರನ್‌ಗಳಿಸಿದರು. ಈ ಮೂಲಕ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ನ್ಯೂಜಿಲಂಡ್ ಆಡುವ ಬಳಗ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಬೆಂಚ್: ಮೈಕೆಲ್ ಬ್ರೇಸ್ವೆಲ್, ಜೇಮ್ಸ್ ನೀಶಮ್

ಟೀಮ್ ಇಂಡಿಯಾ ಆಡುವ ಬಳಗ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ಬೆಂಚ್: ದೀಪಕ್ ಹೂಡಾ, ದೀಪಕ್ ಚಹಾರ್, ಕುಲ್‌ದೀಪ್ ಯಾದವ್

Story first published: Friday, November 25, 2022, 16:54 [IST]
Other articles published on Nov 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X