ಕೌಂಟಿ ಕ್ರಿಕೆಟ್‌ನಲ್ಲಿ 11 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಆರ್ ಅಶ್ವಿನ್

Ravichandran Ashwin ಈಗ ಬಿಡುವಿನ ಸಮಯದಲ್ಲಿ ಏನು ಮಾಡುತ್ತಿದ್ದಾರೆ | Oneindia Kannada

ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಭಾರತೀಯ ಆಟಗಾರರ ಬಿಡುವಿನ ಅವಧಿಯಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಕಣಕ್ಕಿಳಿದಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನ ಪಂದ್ಯದಲ್ಲಿ ಸರ್ರೆ ತಂಡದ ಪರವಾಗಿ ಸೋಮರ್ಸೆಟ್ ತಂಡದ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಆಡಲಿಳಿದಿದ್ದಾರೆ. ಈ ಪಂದ್ಯದಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ 11 ವರ್ಷಗಳ ಬಳಿಕ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ ಆರ್ ಅಶ್ವಿನ್.

ಕೌಂಟಿ ಕ್ರಿಕೆಟ್‌ನಲ್ಲಿ 11 ವರ್ಷಗಳ ಬಳಿಕ ಸ್ಪಿನ್ ಬೌಲರ್ ಓವರ್ ಪಂದ್ಯದ ಆರಂಭಿಕ ಓವರ್ ಎಸೆದ ದಾಖಲೆಯನ್ನು ಮಾಡಿದ್ದಾರೆ ಆರ್ ಅಶ್ವಿನ್. ಹೀಗಾಗಿ ಕೌಂಟಿ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಸರ್ರೆ ತಂಡದ ಪರವಾಗಿ ಬೌಲಿಂಗ್ ವೇಳೆ ಅಶ್ವಿನ್ ಆರಂಭಿಕ ಓವರ್ ಎಸೆದಿದ್ದಾರೆ.

ಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಇನ್ನೂ ಸಮಯಾವಕಾಶವಿದ್ದು ಆಟಗಾರರು ಈಗ ವಿರಾಮದಲ್ಲಿದ್ದಾರೆ. ಈ ಅವಧಿಯನ್ನು ಆರ್ ಅಶ್ವಿನ್ ಕೌಂಟಿ ಕ್ರಿಕೆಟ್‌ನಲ್ಲಿ ಭಾಗಿಯಾಗುವ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧತಯನ್ನು ನಡೆಸಿದ್ದಾರೆ. ಸೋಮರ್ಸೆಟ್ ತಂಡದ ನಾಯಕ ಜೇಮ್ಸ್ ಹಿಲ್ಡ್ರೆತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಸರ್ರೆ ತಂಡದ ಪರವಾಗಿ ಮೊದಲ ಓವರ್‌ನಲ್ಲಿ ಬೌಲಿಂಗ್ ದಾಳಿಗೆ ಇಳಿದರು.

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡಿದ ನಂತರ ಟೀಮ್ ಇಂಡಿಯಾ ಟೆಸ್ಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ. ಜುಲೈ 14ರ ವರೆಗೆ ಭಾರತೀಯ ತಂಡದ ಆಟಗಾರರು ಬ್ರೇಕ್ ಪಡೆದಿದ್ದು ನಂತರ ಒಟ್ಟಾಗಲಿದ್ದಾರೆ. ಬಳಿಕ ಕನಿಷ್ಟ ಒಂದು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದೆ.

ಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿರುವ ಭಾರತೀಯ ತಂಡ: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವೃದ್ಧಿಮಾನ್ ಸಾಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್
ಮೀಸಲು ಆಟಗಾರರು: ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಅರ್ಜನ್ ನಾಗ್ವಾಸ್ವಾಲಾ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 12, 2021, 15:00 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X