ಲಿಲ್ಲಿ ದಾಖಲೆ ಧ್ವಂಸ, ತ್ವರಿತಗತಿಯಲ್ಲಿ ಅಶ್ವಿನ್ ಗೆ 300 ವಿಕೆಟ್

Posted By:

ನಾಗ್ಪುರ್, ನವೆಂಬರ್ 27: ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದರು. ಈ ಮೂಲಕ ಡೆನಿಸ್ ಲಿಲ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಡೇಲ್ ಸ್ಟೇನ್ ದಾಖಲೆ ಮುರಿದ ಆರ್ ಅಶ್ವಿನ್

ತ್ವರಿತಗತಿಯಲ್ಲಿ 250 ವಿಕೆಟ್ ಗಳಿಸಿದ್ದ ಅಶ್ವಿನ್ ಅವರು ಈಗ 54 ಪಂದ್ಯಗಳಲ್ಲಿ 300ನೇ ವಿಕೆಟ್ ಕಬಳಿಸಿ ಡೆನ್ನಿಸ್ ಲಿಲ್ಲಿ ದಾಖಲೆ ಮುರಿದರು. ಲಿಲ್ಲಿ ಅವರು 56 ಪಂದ್ಯಗಳಲ್ಲಿ ಈ ಮೈಲಿಗಲ್ಲು ದಾಟಿದ್ದರು.

Ravinchandran Ashwin is the fastest to reach 300 Test wickets

ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಲಹಿರು ಗಮಗೆ ವಿಕೆಟ್ ಪಡೆಯುತ್ತಿದ್ದಂತೆ ಅಶ್ವಿನ್ ಅವರು ಸಾಧನೆ ಮಾಡಿದರು. ಒಟ್ಟಾರೆ, ಪಂದ್ಯದಲ್ಲಿ 8 ವಿಕೆಟ್ ಉರುಳಿಸಿದರು.

ತ್ವರಿತ ಗತಿಯಲ್ಲಿ 2 ಸಾವಿರ ರನ್ 200 ವಿಕೆಟ್ ಕಿತ್ತ ಅಶ್ವಿನ್

ಒಟ್ಟಾರೆ, 54 ಪಂದ್ಯಗಳಿಂದ 7250ರನ್ ನೀಡಿ 7/59 ಶ್ರೇಷ್ಠ ಸಾಧನೆಯೊಂದಿಗೆ 25.30ರಂತೆ 300ವಿಕೆಟ್ ಗಳಿಸಿದ್ದಾರೆ. ಅತಿ ಹೆಚ್ಚು ವಿಕೆಟ್(800) ಗಳಿಸಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು 300ವಿಕೆಟ್ ಗಡಿಯನ್ನು 58 ಟೆಸ್ಟ್ ಪಂದ್ಯಗಳಲ್ಲಿ ದಾಟಿದ್ದರು.

2ನೇ ಟೆಸ್ಟ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಫೆಬ್ರವರಿಯಲ್ಲಿ 45ನೆ ಟೆಸ್ಟ್ ಪಂದ್ಯವನ್ನು ಆಡಿದ್ದ ಅಶ್ವಿನ್ ಅತೀ ವೇಗದಲ್ಲಿ 250 ವಿಕೆಟ್ ಗಳನ್ನು ಕಬಳಿಸಿ ದಾಖಲೆ ಮಾಡಿದ್ದರು.

ಆಶ್ವಿನ್ ಮೈಲಿಗಲ್ಲುಗಳು
* 50 ವಿಕೆಟ್ ಗಳು -9 ಪಂದ್ಯಗಳು
* 100 ವಿಕೆಟ್ ಗಳು-18 ಪಂದ್ಯಗಳು
* 150 ವಿಕೆಟ್ ಗಳು-29 ಪಂದ್ಯಗಳು
* 200 ವಿಕೆಟ್ ಗಳು- 37 ಪಂದ್ಯಗಳು
* 250 ವಿಕೆಟ್ ಗಳು- 45 ಪಂದ್ಯಗಳು
* 275 ವಿಕೆಟ್ ಗಳು-50 ಪಂದ್ಯಗಳು
* 300 ವಿಕೆಟ್ ಗಳು-54 ಪಂದ್ಯಗಳು
(ಒನ್ಇಂಡಿಯಾ ಸುದ್ದಿ)

Story first published: Monday, November 27, 2017, 14:04 [IST]
Other articles published on Nov 27, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ