ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಹೊಸ ಕೋಚ್ ಘೋಷಣೆ

RCB Appoints Sanjay Bangar As Head Coach

ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲುವ ಕನಸನ್ನು ನನಸಾಗದೆ ಉಳಿಸಿಕೊಂಡಿರುವ ಆರ್‌ಸಿಬಿಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಆಗಿದೆ. ಆರ್‌ಸಿಬಿ ನಾಯಕತ್ವ ಸ್ಥಾನದಿಂದ ಈಗಾಗಲೇ ಕೆಳಗಿಳಿದ ಕೊಹ್ಲಿ ಬದಲು ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಆದರೆ ಇದರ ನಡುವೆ ಇದೀಗ ಹೊಸ ಕೋಚ್‌ಗೂ ಸಹ ಫ್ರಾಂಚೈಸಿ ಮಣೆ ಹಾಕಿದೆ.

ಹೌದು ಆರ್‌ಸಿಬಿ ಹೊಸ ಕೋಚ್ ಹೆಸರನ್ನು ಘೋಷಣೆ ಮಾಡಿದ್ದು, ತಂಡದ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕಗೊಂಡಿದ್ದಾರೆ. ಈ ಕುರಿತಾಗಿ ಆರ್‌ಸಿಬಿ ಫ್ರಾಂಚೈಸಿ ಖಚಿತಪಡಿಸಿದ್ದು, ಹೆಡ್‌ ಕೋಚ್ ಆಗಿ ಬಂಗಾರ್ ಆಯ್ಕೆಗೊಂಡಿದ್ದಾರೆ. ಇವರು ಮುಂದಿನ ಎರಡು ಐಪಿಎಲ್ ಸೀಸನ್‌ಗಳಲ್ಲಿ ಆರ್‌ಸಿಬಿ ತಂಡದ ಮುಖ್ಯ ಭಾಗವಾಗಲಿದ್ದಾರೆ.

ಈ ಮೊದಲು ಆರ್‌ಸಿಬಿ ತಂಡದಲ್ಲಿ ಸಂಜಯ್ ಬಂಗಾರ್ ಅವರನ್ನು ಬ್ಯಾಟಿಂಗ್ ಸಲಹೆಗಾರರನ್ನಾಗಿ ಆಯ್ಕೆ ಮಾಡಿತ್ತು. ಆದರೆ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಸಂಜಯ್ ಬಂಗಾರ್ ಆರ್‌ಸಿಬಿ ತಂಡದ ಹೆಡ್‌ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಜಯ್ ಬಂಗಾರ್, ''ಮುಖ್ಯ ಕೋಚ್ ಆಗಿ ಆರ್​ಸಿಬಿಯಂತಹ ಅದ್ಭುತ ಫ್ರಾಂಚೈಸಿಯಲ್ಲಿ ಕೆಲಸ ಮಾಡುವುದು ನಿಜಕ್ಕೂ ಉತ್ತಮ ಅವಕಾಶವಾಗಿದೆ. ಅತ್ಯುತ್ತಮ ಆಟಗಾರರು, ಸಿಬ್ಬಂದಿಗಳ ಜೊತೆ ಕೆಲಸ ಮಾಡಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾತುರನಾಗಿದ್ದೇನೆ. ಐಪಿಎಲ್ ಮೆಗಾ ಆಕ್ಷನ್ ಇರುವ ಕಾರಣ ಸಾಕಷ್ಟು ಜವಾಬ್ದಾರಿಗಳಿವೆ. ಫ್ರಾಂಚೈಸಿ ಕಡೆಯಿಂದ ಸಂಪೂರ್ಣ ಬೆಂಬಲವಿದ್ದು ಆರ್​ಸಿಬಿ ತಂಡ ಟ್ರೋಫಿ ಗೆಲ್ಲಲು ಎಲ್ಲ ಶ್ರಮವಹಿಸುತ್ತೇವೆ'' ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ಈ ಹಿಂದೆ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ಪ್ರಾಂಚೈಸಿಯಲ್ಲೂ ಕಾರ್ಯ ನಿರ್ವಹಿಸಿದ್ದರು.

ಇನ್ನು ಸಂಜಯ್ ಬಂಗಾರ್ ಹೆಡ್‌ ಕೋಚ್ ಆಗಿ ಆಯ್ಕೆಗೊಂಡಿರುವುದಕ್ಕೆ ಕ್ರಿಕೆಟ್ ಆಪರೇಷನ್ ಡೈರೆಕ್ಟರ್ ಮೈಕ್ ಹೆಸ್ಸೆನ್ ಕೋಡ ಸಂತೋಷ ವ್ಯಕ್ತಪಡಿಸಿದ್ದಾರೆ. '' ಬ್ಯಾಟಿಂಗ್ ತರಬೇತುದಾರರಾಗಿ ಸಂಜಯ್ ಅವರಿಗೆ ಉತ್ತಮ ಅನುಭವವಿದೆ. ಹೀಗಾಗಿ ಅವರೇ ಮುಖ್ಯ ಕೋಚ್ ಆಗುವುದು ಉತ್ತಮ ಎಂದು ಆರ್​ಸಿಬಿ ಫ್ರಾಂಚೈಸಿ ತೀರ್ಮಾನಿಸಿತು. ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರು ಅದ್ಭುತವಾಗಿ ಕಾರ್ಯನಿರ್ವಹಿಸಿದ್ದರು. ಖಂಡಿತವಾಗಿಯೂ ಅವರ ಅನುಭವ ನಮಗೆ ಸಹಾಯವಾಗಲಿದೆ'' ಎಂದು ಹೆಸ್ಸೆನ್ ಹೇಳಿದ್ದಾರೆ.

ಆರ್‌ಸಿಬಿ ತಂಡದ ಮುಂದಿನ ನಾಯಕ ಯಾರು?

ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹಲವು ವರ್ಷಗಳ ಮುನ್ನೆಡೆದಿದ್ದ ಆರ್‌ಸಿಬಿ ತಂಡಕ್ಕೆ ಮುಂದಿನ ಸಾರಥಿ ಯಾರು ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ಹೀಗಿರುವಾಗ ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ ಹರಾಜು ಪ್ರಕ್ರಿಯೆಯ ಬಳಿಕ ಈ ಕುರಿತಾಗಿ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿದ್ದು ಇವರಿಬ್ಬರ ಪೈಕಿ ಒಬ್ಬರನ್ನು ಗುರಿಯಾಗಿಸಿ ಬಿಡ್ ಮಾಡಲಿದ್ದು, ನಂತರ ನಾಯಕನ ಹೆಸರು ಘೋಷಿಸಲಿದೆ.

Story first published: Tuesday, November 9, 2021, 16:15 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X