ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಗಿಸೊ ರಬಾಡ, ಟ್ರೆಂಟ್ ಬೌಲ್ಟ್ ಮಿಸ್ ಮಾಡಿಕೊಂಡಿದೆಯಾ ಆರ್‌ಸಿಬಿ?

RCB Bought Tymal Mills for 12 Crore Right After Watching Rabada and Boult Go for 680k

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕನ್ನಡಿಗರ ಆಕರ್ಷಣೀಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 2017ರಲ್ಲಿ ಇಂಗ್ಲೆಂಡ್‌ನ ಎಡಗೈ ಮಧ್ಯಮ ವೇಗಿ ಟೈಮಲ್ ಮಿಲ್ಸ್ ಸೇರಿಕೊಂಡಿದ್ದರು. ಅದೂ ಆರ್‌ಸಿಬಿ ತಂಡ ಟೈಮಲ್ ಅವರನ್ನು ಭರ್ಜರಿ ಬೆಲೆಗೆ ಖರೀದಿಸಿತ್ತು. ಆದರೆ ಆವತ್ತು ಮಿಲ್ಸ್ ಅವರನ್ನು ಆರಿಸುವ ಬದಲು ಈಗ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ ಕಾಗಿಸೊ ರಬಾಡಾ ಅವರನ್ನು ಅಥವಾ ಮುಂಬೈ ಇಂಡಿಯನ್ಸ್‌ನಲ್ಲಿರುವ ಟ್ರೆಂಟ್‌ ಬೌಲ್ಟ್ ಆರಿಸದಿದ್ದರ ಬಗ್ಗೆ ಆರ್‌ಸಿಬಿಗೆ ವಿಷಾದ ಇರಬಹುದೆ?

ಹೈದರಾಬಾದ್‌ ಪರ ಅತ್ಯಧಿಕ ರನ್ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳುಹೈದರಾಬಾದ್‌ ಪರ ಅತ್ಯಧಿಕ ರನ್ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳು

ಅಂದು ಟೈಮಲ್ ಖರೀದಿಸಲು ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳು ಪೈಪೋಟಿ ನಡೆಸಿದವು. ಆದರೆ ಆರ್‌ಸಿಬಿ ಅತ್ಯಧಿಕ ಮೊತ್ತಕ್ಕೆ ಮಿಲ್ಸ್ ಖರೀದಿಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತ್ತು

ಇದು ಸಾಧ್ಯ! RCB ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು!ಇದು ಸಾಧ್ಯ! RCB ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು!

ಅಂದ್ಹಾಗೆ 2017ರ ಸೀಸನ್‌ನಲ್ಲಿ ಮಿಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದರು. ಬೆಂಗಳೂರು ಪರ 5 ಪಂದ್ಯಗಳನ್ನೂ ಆಡಿದ್ದರು.

ಹಿಂದೆ ಸರಿದಿದ್ದ ಪಂಜಾಬ್

ಹಿಂದೆ ಸರಿದಿದ್ದ ಪಂಜಾಬ್

2017ರಲ್ಲಿನ ಹರಾಜಿನ ವೇಳೆ ಟೈಮಲ್ ಮಿಲ್ಸ್ ಅವರ ಮೂಲಬೆಲೆ 50 ಲಕ್ಷ ರೂ. ಆಗಿತ್ತು. ಮೊದಲಿಗೆ ಮಿಲ್ಸ್ ಖರೀದಿಸಲು ಆಸಕ್ತಿ ತೋರಿದ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು 6 ಕೋಟಿಯ ವರೆಗೆ ಪೈಪೋಟಿ ನಡೆದಿವು. ಬೆಲೆ 7.2 ಕೋಟಿ ರೂ.ಗೆ ಬರುವಾಗ ಪಂಜಾಬ್ ಹಿಂದೆ ಸರಿದಿತ್ತು.

ದೊಡ್ಡ ಮೊತ್ತಕ್ಕೆ ಖರೀದಿ

ದೊಡ್ಡ ಮೊತ್ತಕ್ಕೆ ಖರೀದಿ

ಪಂಜಾಬ್ ಬಿಡ್‌ನಿಂದ ಹಿಂದೆ ಸರಿದಾಗ ಟೈಮಲ್ ಖರೀದಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ಮುಂದೆ ಬಂತು. ಆ ಬಳಿಕ 11 ಕೋ.ರೂ.ಗೆ ಬಿಡ್ ಬೆಳೆದಾಗ ಆರ್‌ಸಿಬಿ ಸ್ಪರ್ಧಿಸಿತು. ಅಂತಿಮವಾಗಿ ಬೆಂಗಳೂರು ಫ್ರಾಂಚೈಸಿ ಮಿಲ್ಸ್ ಅವರನ್ನು 12 ಕೋ.ರೂ. ಖರೀದಿಸಿತ್ತು.

ಮಿಲ್ಸ್ ಮಾಹಿತಿ

ಮಿಲ್ಸ್ ಮಾಹಿತಿ

ಈಗ 28ರ ಹರೆಯದ ಟೈಮಲ್ ಮಿಲ್ಸ್ ಅವರು ಸದ್ಯ ಇಂಗ್ಲೆಂಡ್‌ನ ಕೌಂಟಿ ತಂಡ ಸಸೆಕ್ಸ್ ಪರ ಆಡುತ್ತಿದ್ದರು. ಇಂಗ್ಲೆಂಡ್ ಪರ ಐದು ಟಿ20ಐ ಪಂದ್ಯಗಳನ್ನಾಡಿರುವ ಮಿಲ್ಸ್ 6.79ರ ಎಕಾನಮಿಯಲ್ಲಿ 3 ವಿಕೆಟ್ ಪಡೆದಿದ್ದಾರೆ. ಇನ್ನು 5 ಐಪಿಎಲ್ ಪಂದ್ಯಗಳಲ್ಲಿ 5 ವಿಕೆಟ್ ಉರುಳಿಸಿದ್ದಾರೆ.

ರಬಾಡ, ಬೌಲ್ಟ್

ರಬಾಡ, ಬೌಲ್ಟ್

ಅಂದು ಬಿಡ್ಡಿಂಗ್ ವೇಳೆ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರು 5 ಕೋ.ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದರು. ದಕ್ಷಿಣ ಆಫ್ರಿಕಾ ಮಾರಕ ವೇಗಿ ಕಾಗಿಸೊ ರಬಾಡ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್)ಗೆ ಮಾರಾಟವಾಗಿದ್ದರು. ಈಗ ಇಬ್ಬರೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್‌ಸಿಬಿ ಆವತ್ತು ಮಿಲ್ಸ್‌ ಅವರನ್ನು ದುಬಾರಿ ಬೆಲೆಗೆ ಖರೀದಿಸುವ ಬದಲು ರಬಾಡ ಅಥವಾ ಬೌಲ್ಟ್ ಖರೀದಿಸಿದ್ದರೆ ಅವರ ಅನುಕೂಲ ಈಗ ಪಡೆಯಬಹುದಿತ್ತು.

Story first published: Saturday, October 10, 2020, 2:05 [IST]
Other articles published on Oct 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X