ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮೊತ್ತದ ಏರಿಕೆ

Record Breaking Viewership For IPL 2020

ಈ ಬಾರಿಯ ಐಪಿಎಲ್ ಅನ್ನು ದುಬೈ ನಲ್ಲಿ ಖಾಲಿ ಮೈದಾನದಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದಾಗ ಸಾಕಷ್ಟು ಟೀಕೆಗಳು ಎದುರಾದವು.

'ಜಾಹೀರಾತುಗಳಿಂದ ಹಣ ಮಾಡುವ ಉದ್ದೇಶಕ್ಕಾಗಿಯೇ ಜನರಿಲ್ಲದೆ ಖಾಲಿ ಮೈದಾನಗಳಲ್ಲಿ ಐಪಿಎಲ್ ಆಡಿಸಲಾಗುತ್ತಿದೆ. ಜನರು ನೋಡದ ಐಪಿಎಲ್ ಆಡಿಸಿಯೇನು ಪ್ರಯೋಜನ' ಎಂಬ ಮಾತುಗಳು ಕೇಳಿಬಂದಿದ್ದವು.

ಎಲ್ಲಾ ಟೀಕೆಗಳ ನಡುವೆಯೂ ಬಿಸಿಸಿಐ ಐಪಿಎಲ್ ಅನ್ನು ಆಯೋಜಿಸಿ ಯಶಸ್ವಿಯೂ ಆಯಿತು. ವಿಶೇಷವೆಂದರೆ, ಪ್ರೇಕ್ಷಕರಿಲ್ಲದ ಈ ಐಪಿಎಲ್ ಅನ್ನೇ ಅತಿ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅತಿ ಹೆಚ್ಚು ವೀಕ್ಷಿಸಿದ ಐಪಿಎಲ್ ಟೂರ್ನಿ ಎಂಬ ದಾಖಲೆ ಬರೆದಿದೆ ಐಪಿಎಲ್ 2020.

ಕಳೆದ ಬಾರಿಗಿಂತ 29% ಹೆಚ್ಚು ಜನ ನೋಡಿದ್ದಾರೆ

ಕಳೆದ ಬಾರಿಗಿಂತ 29% ಹೆಚ್ಚು ಜನ ನೋಡಿದ್ದಾರೆ

ಐಪಿಎಲ್ 2019 ಅನ್ನು ಟಿವಿಯಲ್ಲಿ ನೋಡಿದ್ದಕ್ಕಿಂತಲೂ 29% ಹೆಚ್ಚು ಮಂದಿ ಐಪಿಎಲ್ 2020 ಅನ್ನು ಟಿವಿಗಳಲ್ಲಿ ನೋಡಿ ಆನಂದಿಸಿದ್ದಾರೆ. ಕಳೆದ ಬಾರಿಗಿಂತಲೂ 29% ಹೆಚ್ಚು ಮಂದಿಯನ್ನು ಈ ಬಾರಿಯ ಐಪಿಎಲ್ ಆಕರ್ಷಿಸಿದೆ.

'ಅತಿ ಹೆಚ್ಚು ಮಂದಿ ಡ್ರೀಮ್ 11 ನಲ್ಲಿ ತೊಡಗಿದ್ದರು'

'ಅತಿ ಹೆಚ್ಚು ಮಂದಿ ಡ್ರೀಮ್ 11 ನಲ್ಲಿ ತೊಡಗಿದ್ದರು'

ಐಪಿಎಲ್ 2020 ಯ ಮುಖ್ಯ ಸ್ಪಾನ್ಸರ್ ಆಗಿದ್ದ ಡ್ರೀಮ್ 11 ಸಹ ಮ್ಯಾಚ್‌ಗಳ ಸಮಯದಲ್ಲಿ ಅತಿ ಹೆಚ್ಚು ಮಂದಿ ಡ್ರೀಮ್ 11 ಅಲ್ಲಿ ತೊಡಗಿಕೊಂಡಿದ್ದರು, ಮ್ಯಾಚ್‌ಗಳ ಸಮಯದಲ್ಲಿ ಡ್ರೀಮ್ 11 ನಲ್ಲಿ ಅತಿ ಹೆಚ್ಚು ಮಂದಿ ಸಕ್ರಿಯರಾಗಿರುತ್ತಿದ್ದರು ಎಂದಿದ್ದಾರೆ ಡ್ರೀಮ್ 11 ನ ವಿಕ್ರಾಂತ್ ಮೊದಲಿಯಾರ್.

'ಐಪಿಎಲ್ ಅಭಿಮಾನಿಗಳನ್ನು ಒಟ್ಟುಗೂಡಿಸುವ ಯತ್ನ'

'ಐಪಿಎಲ್ ಅಭಿಮಾನಿಗಳನ್ನು ಒಟ್ಟುಗೂಡಿಸುವ ಯತ್ನ'

ಐಪಿಎಲ್, ಭಾರತದಲ್ಲಿ ಫ್ಯಾಂಟಸಿ ಆಟಗಳಿಗೆ ಉತ್ತೇಜನ ನೀಡಿದೆ. ಡ್ರೀಮ್ 11 ತನ್ನ ಐಪಿಎಲ್ ಫ್ಯಾಂಟಸಿ ಆಟಗಳಿಂದ ಐಪಿಎಲ್ ಅಭಿಮಾನಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಮಾಡಿತು ಎಂದಿದ್ದಾರೆ ವಿಕ್ರಾಂತ್ ಮೊದಲಿಯಾರ್.

ಅತಿ ಹೆಚ್ಚು ಸ್ಪಾನ್ಸರ್‌ಶಿಪ್ ದೊರೆತ ಐಪಿಎಲ್

ಅತಿ ಹೆಚ್ಚು ಸ್ಪಾನ್ಸರ್‌ಶಿಪ್ ದೊರೆತ ಐಪಿಎಲ್

ಐಪಿಎಲ್ ಅನ್ನು ಹಾಟ್‌ಸ್ಟಾರ್‌ನಲ್ಲಿ ಸಹ ಅತಿ ಹೆಚ್ಚು ಮಂದಿ ಈ ಬಾರಿ ವೀಕ್ಷಿಸಿದ್ದಾರೆ. ಈ ಬಾರಿ ಅತಿ ಹೆಚ್ಚು ಸ್ಪಾನ್ಸರ್‌ಶಿಪ್‌ ಸಹ ಐಪಿಎಲ್‌ಗೆ ದೊರೆತಿದೆ, ಹಣಕಾಸು ದೃಷ್ಟಿಯಿಂದ ಅತಿ ಹೆಚ್ಚು 'ಯಶಸ್ವೀ' ಐಪಿಎಲ್ ಸಹ ಇದೇ ಎನ್ನಲಾಗುತ್ತಿದೆ.

Story first published: Thursday, November 12, 2020, 20:55 [IST]
Other articles published on Nov 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X