ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾ ಅಭಿಮಾನಿಗಳಿಗೆ ಕ್ರಿಕೆಟ್‌ ಪಾಠ ಹೇಳಿಕೊಟ್ಟ ಜಾಂಟಿ ರೋಡ್ಸ್‌!

Rhodes reminds Proteas that ABD doesnt play anymore

ಲಂಡನ್‌, ಜೂನ್‌ 03: ಚೋಕರ್ಸ್‌ ಹಣೆಪಟ್ಟಿ ಕಳಚುತ್ತೇವೆಂಬ ಆತ್ಮವಿಶ್ವಾಸದಲ್ಲಿ ವಿಶ್ವಕಪ್‌ ಅಖಾಡಕ್ಕೆ ಇಳಿದಿರುವ ದಕ್ಷಿಣ ಆಫ್ರಿಕಾ ತಂಡ ಆಡಿದ ಮೊದಲೆರಡು ಪಂದ್ಯಗಳಲ್ಲಿ ಸೋಲುಂಡಿದ್ದು, ಹರಿಣ ಪಡೆಯ ಅಭಿಮಾನಿಗಳಲ್ಲಿ ಆಕ್ರೋಶ ತಂದಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಇನ್ನು ಹಲವು ಅಭಿಮಾನಿಗಳು ಬೇಸರದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸಮಾಜಿಕ ಜಾಲತಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತಂಡದಲ್ಲಿ ಎಬಿ ಡಿ'ವಿಲಿಯರ್ಸ್‌ ಮತ್ತು ಡೇಲ್‌ ಸ್ಟೇನ್‌ ಆಡುತ್ತಿಲ್ಲ. ಅವರ ಮೇಲಿನ ಅವಲಂಬನೆಯನ್ನು ಮರೆಯಬೇಕು ಎಂದು ಎಂದೆಲ್ಲಾ ಅಣಕಿಸಿದ್ದಾರೆ. ಹರಿಣ ಪಡೆಯ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡ'ವಿಲಿಯರ್ಸ್‌ 2 ವರ್ಷಗಳ ಹಿಂದೆಯೇ ನಿವೃತ್ತಿ ಹೊಂದಿದ್ದು, ಡೇಲ್‌ ಸ್ಟೇನ್‌ ಸದ್ಯ ಭುಜದ ಗಾಯದ ಸಮಸ್ಯೆಯಿಂದ ಚೇತರಿಸುತ್ತಿದ್ದಾರೆ.

 2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ? 2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ?

ಇದೇ ವೇಳೆ ಜಾಂಟಿ ರೋಡ್ಸ್‌ ಅಭಿಮಾನಿಗಳಿಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ತಂಡ ಕೂಡ ಡಿ'ವಿಲಿಯರ್ಸ್‌ ನಿವೃತ್ತಿ ಹೊಂದಿರುವ ವಾಸ್ತವವನ್ನು ಕೂಡಲೇ ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಮೊದಲ ಪಂದ್ಯದಲ್ಲಿ 104 ರನ್‌ಗಳಿಂದ ಸೋತ ಹರಿಣ ಪಡೆ, ಬಳಿಕ ಬಾಂಗ್ಲಾದೇಶ ವಿರುದ್ಧ 21 ರನ್‌ಗಳ ಆಘಾತ ಅನುಭವಿಸಿತು.

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

"ತಂಡ ಕೇವಲ ಇಬ್ಬರು ಆಟಗಾರರನ್ನು ಅವಲಂಬಿಸುವುದು ಸಾಧ್ಯವಿಲ್ಲ. ಎಬಿಡಿ ಈಗ ತಂಡದಲ್ಲಿ ಇಲ್ಲ. ಇನ್ನು ತಂಡದ ಹೀನಾಯ ಪ್ರದರ್ಶನಕ್ಕೆ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಕಾರಣ. ಬ್ಯಾಟಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ಕಳಪೆ ಹೊಡೆತಗಳನ್ನಾಡಿದ್ದಾರೆ. ಆದ್ದರಿಂದಲೇ ಸೋಲು ಎದುರಾಗಿದೆ. ದಕ್ಷಿಣ ಆಫ್ರಿಕಾದ ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ಇದೇನು ರಾಕೆಟ್‌ ಸೈನ್ಸ್‌ ಅಲ್ಲ,'' ಎಂದು ರೋಡ್ಸ್‌ ಟ್ವೀಟ್‌ ಮೂಲಕ ಅಭಿಮಾನಿಗಳಿಗೆ ಕ್ರಿಕೆಟ್‌ ಪಾಠ ಮಾಡಿದ್ದಾರೆ.

Story first published: Monday, June 3, 2019, 18:50 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X