ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆಟಗಾರ ರಿಷಬ್ ಪಂತ್: ವಿವಿಎಸ್ ಲಕ್ಷ್ಮಣ್

IPL 2019 : ಧೋನಿ ನಂತರ ಟೀಂ ಇಂಡಿಯಾದಲ್ಲಿ ಪಂತ್ ಏನ್ಮಾಡ್ತಾರೆ ಗೊತ್ತಾ..? | Oneindia Kannada
Rishabh Pant is the future of Indian cricket: VVS Laxman

ನವದೆಹಲಿ, ಮೇ 10: ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಆದರೆ ಪಂತ್ ಭಾರತೀಯ ಕ್ರಿಕಟ್‌ನಲ್ಲಿ ಭವಿಷ್ಯದ ಆಟಗಾರ ಎನಿಸಲಿದ್ದಾರೆ ಎಂದು 'ವೆರಿವೆರಿ ಸ್ಪೆಷಲ್' ಲಕ್ಷ್ಮಣ್ ಅಭಿಪ್ರಾಯಿಸಿದ್ದಾರೆ.

ಐಪಿಎಲ್ ಕ್ವಾಲಿಫೈಯರ್-2: ಚೆನ್ನೈ vs ಡೆಲ್ಲಿ (ಮೇ 10), Live ಸ್ಕೋರ್‌ಕಾರ್ಡ್

1
45948

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸುತ್ತಿರುವ ಪಂತ್, ಒಟ್ಟು 15 ಪಂದ್ಯಗಳಲ್ಲಿ 163.63 ಸ್ಟ್ರೈಕ್ ರೇಟ್‌ನಲ್ಲಿ 450 ರನ್ ಕಲೆ ಹಾಕಿದ್ದಾರೆ. ಡಿಸಿ ಕ್ವಾಲಿಫೈರ್ -2ಕ್ಕೆ ಅರ್ಹತೆ ಪಡೆದುಕೊಳ್ಳುವಲ್ಲಿ ಪಂತ್ ಕೊಡುಗೆಯೂ ಸೇರಿದೆ.

ಟೈಮ್ಸ್ ಆಫ್ ಇಂಡಿಯಾದ ಅಂಕಣವೊಂದರಲ್ಲಿ ಭಾರತದ ಮಾಜಿ ಆಟಗಾರ ಲಕ್ಷ್ಮಣ್, 'ಸ್ಪಷ್ಟವಾಗಿ ಹೇಳೋದಾದ್ರೆ, ಪಂತ್ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆಟಗಾರ ಅನ್ನಿಸಿದ್ದಾರೆ. ಪಂದ್ಯದ ವೇಳೆ ಆತ ತೋರಿಕೊಳ್ಳುವ ಪ್ರೌಢ ಆಟವೇ ಇದಕ್ಕೆ ಸಾಕ್ಷಿ' ಎಂದು ಬರೆದುಕೊಂಡಿದ್ದಾರೆ.

'ಸರ್ವಕಾಲಿಕ ವಿಶ್ವಕಪ್ XI'ನಿಂದ ಸಚಿನ್ ಬಿಟ್ಟಿದ್ದಕ್ಕೆ ಕಾರಣ ಹೇಳಿದ ಅಫ್ರಿದಿ'ಸರ್ವಕಾಲಿಕ ವಿಶ್ವಕಪ್ XI'ನಿಂದ ಸಚಿನ್ ಬಿಟ್ಟಿದ್ದಕ್ಕೆ ಕಾರಣ ಹೇಳಿದ ಅಫ್ರಿದಿ

ಐಪಿಎಲ್ ಎನಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂತ್ ಕೇವಲ 21 ಎಸೆತಗಳಿಗೆ 49 ರನ್ ಬಾರಿಸಿದ್ದರು. ರಿಷಬ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡಿಸಿ ಫೈನಲ್ ಪ್ರವೇಶದತ್ತ ಮುಖಮಾಡಿದೆ. ಶುಕ್ರವಾರ (ಮೇ 10) ನಡೆಯುವ ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ತಂಡ ಚೆನ್ನೈ ಸೂಪರ್‌ ಕಿಂಗ್ಸ್ ಸವಾಲು ಸ್ವೀಕರಿಸಲಿದೆ.

Story first published: Friday, May 10, 2019, 18:23 [IST]
Other articles published on May 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X