ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್‌ ಫಾರ್ಮ್‌ಗೆ ಮರಳಲು ಅತ್ಯುತ್ತಮ ಸಲಹೆಯಿತ್ತ ಯುವರಾಜ್!

ಪಂತ್ ಹೊಗಳುವ ಬರದಲ್ಲಿ ಧೋನಿಯನ್ನು ತೆಗಳಿದ ಯುವಿ. | Yuvraj Singh | Oneindia Kannada
Rishabh Pant is work in progress, dont suppress him: Yuvraj Singh

ನವದೆಹಲಿ, ಸೆಪ್ಟೆಂಬರ್ 24: ರಿಷಬ್ ಪಂತ್ ಫಾರ್ಮ್ ಕಳೆದುಕೊಂಡಿದ್ದಾರೆ, ನೀರಸ ಆಟ ಪ್ರದರ್ಶಿಸುತ್ತಿದ್ದಾರೆ ಎಂದು ಕ್ರಿಕೆಟ್‌ ವಲಯ ಟೀಕಿಸುತ್ತಿರುವ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಪಂತ್‌ ಬೆಂಬಲಕ್ಕೆ ನಿಂತಿದ್ದಾರೆ.

ಭಾರತ ಟಿ20 ವಿಶ್ವಕಪ್‌ ಗೆದ್ದಿದ್ದು, ಧೋನಿ ಯುಗ ಶುರುವಾಗಿದ್ದು ಇದೇ ದಿನ!ಭಾರತ ಟಿ20 ವಿಶ್ವಕಪ್‌ ಗೆದ್ದಿದ್ದು, ಧೋನಿ ಯುಗ ಶುರುವಾಗಿದ್ದು ಇದೇ ದಿನ!

ರಿಷಬ್ ಪಂತ್‌ ನನ್ನು ಕುಗ್ಗಿಸುವ ಬದಲು ಆತನ ಮನಸ್ಥಿತಿ ಅರ್ಥ ಮಾಡಿಕೊಂಡು ಸ್ವಾಭಾವಿಕ ಆಟವನ್ನು ಹೊರಗೆಳೆಯಲು ಪ್ರಯತ್ನಿಸಬೇಕು ಎಂದು ಯುವರಾಜ್‌ ಸಿಂಗ್‌ ಅಭಿಪ್ರಾಯಿಸಿದ್ದಾರೆ. ಹೆಚ್ಚಿನ ಪಂದ್ಯಗಳಲ್ಲಿ ಆಪ್ರಮಣಕಾರಿ ಆಟಕ್ಕೆ ಮುಂದಾಗುವ ರಿಷಬ್ ಪಂತ್‌ ಶಾಟ್‌ ಆಯ್ಕೆಯ ವೇಳೆ ಎಡವುತ್ತ ಕ್ರಿಕೆಟ್‌ ಅಭಿಮಾನಿಗಳನ್ನು ನಿರಾಸೆಗೀಡು ಮಾಡುತ್ತಿದ್ದಾರೆ, ಟೀಕೆಗೂ ಒಳಗಾಗುತ್ತಿದ್ದಾರೆ.

ಶೇನ್ ವಾರ್ನ್‌ಗೆ 12 ತಿಂಗಳು ಡ್ರೈವಿಂಗ್ ನಿಷೇಧ, ವಕೀಲರ ಪ್ರತಿಕ್ರಿಯೆ ಏನು?ಶೇನ್ ವಾರ್ನ್‌ಗೆ 12 ತಿಂಗಳು ಡ್ರೈವಿಂಗ್ ನಿಷೇಧ, ವಕೀಲರ ಪ್ರತಿಕ್ರಿಯೆ ಏನು?

ವಿಶ್ವಕಪ್‌ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದ 3ನೇ ಟಿ20ಯಲ್ಲಿ ಅರ್ಧ ಶತಕ (65 ರನ್, 42 ಎಸೆತ) ಬಾರಿಸಿದ್ದು ಬಿಟ್ಟರೆ, ಪಂತ್‌ ಉಳಿದೆಲ್ಲಾ ಪಂದ್ಯಗಳಲ್ಲಿ ಬೆರಳೆನಿಕೆಯ ರನ್ ಗಳಿಸಿದ್ದರು.

ಪಂತ್‌ ಕುರಿತು ಚರ್ಚೆ

ಪಂತ್‌ ಕುರಿತು ಚರ್ಚೆ

ಕ್ರಿಕೆಟ್‌ನಿಂದ ಮಾಜಿ ನಾಯಕ ಎಂಎಸ್ ಧೋನಿ ತಾನಾಗಿಯೇ ಅಲಭ್ಯರಾಗುತ್ತಿರುವುದರಿಂದ ಧೋನಿ ಸ್ಥಾನಕ್ಕೆ ಪಂತ್‌ ತರುವತ್ತ ಬಿಸಿಸಿಐ ಯೋಚಿಸಿತ್ತು. ಆದರೆ ಪಂತ್‌ ನಿಜಕ್ಕೂ ಧೋನಿ ಸ್ಥಾನಕ್ಕೆ ಅಂದರೆ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಕಮ್ ಬ್ಯಾಟ್ಸ್‌ಮನ್‌ಗೆ ಸೂಕ್ತವೆ ಎಂಬ ಚರ್ಚೆಗಳೀಗ ಶುರುವಾಗಿದೆ.

ಧೋನಿಗೂ ಪಂತ್‌ಗೂ ಹೋಲಿಕೆ

ಧೋನಿಗೂ ಪಂತ್‌ಗೂ ಹೋಲಿಕೆ

ಎಂಎಸ್ ಧೋನಿಗೂ ರಿಷಬ್ ಪಂತ್‌ಗೂ ಹೋಲಿಸುತ್ತಿರುವ ಬಗ್ಗೆ ಮಾತನಾಡಿದ ಯುವಿ, 'ಧೋನಿಯೂ ಒಂದೇ ದಿನದಲ್ಲಿ ಬೆಳೆದು ನಿಂತಿಲ್ಲ. ಧೋನಿ ಪ್ರಭಾವಬೀರಲು ಕೆಲ ವರ್ಷ ತೆಗೆದುಕೊಂಡಿದ್ದಾರೆ. ಪಂತ್‌, ಧೋನಿ ಜಾಗ ಆವರಿಸಲೂ ಕೆಲ ವರ್ಷಗಳು ಬೇಕಾಗಬಹುದು,' ಎಂದರು.

ನಡವಳಿಕೆಯನ್ನು ಅವಲಂಭಿಸಿದೆ

ನಡವಳಿಕೆಯನ್ನು ಅವಲಂಭಿಸಿದೆ

ಮಾತು ಮುಂದುವರೆಸಿದ ಸಿಂಗ್, 'ಪಂತ್‌ನಿಂದ ಆತನ ಅತ್ಯುತ್ತಮ ಆಟವನ್ನು ಹೇಗೆ ಹೊರಗೆಳೆಯಬೇಕನ್ನೋದು ಆತನ ನಡವಳಿಕೆಯನ್ನು ಅವಲಂಭಿಸಿದೆ. ಮೊದಲು ನೀವು ಆತನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಬಳಿಕ ಮುಂದಡಿಯಿಡಬೇಕು. ನೀವಾತನನ್ನು ಕುಗ್ಗಿಸಿದರೆ ಆತನಿಂದ ಅತ್ಯುತ್ತಮ ಪ್ರದರ್ಶನ ಹೊರ ತೆಗೆಯಲು ಸಾಧ್ಯವಿಲ್ಲ,' ಎಂದು ವಿವರಿಸಿದರು.

ಬದಲಾವಣೆ ತರಬಲ್ಲದು

ಬದಲಾವಣೆ ತರಬಲ್ಲದು

'ಹೌದು ಆತನಿಗೆ ಈಗಾಗಲೇ ಒಂದಿಷ್ಟು ಅವಕಾಶ ನೀಡಲಾಗಿದೆ. ಆದರೆ ಇಷ್ಟರಲ್ಲೇ ಆತನ ಬೆಸ್ಟ್ ಆಟ ಹೊರಗೆಳೆಯಬಹುದು ಎಂದು ಹೇಗೆ ಹೇಳಲು ಸಾಧ್ಯ? ತಂಡದಲ್ಲಿನ ಕೋಚ್‌ಗಳು, ನಾಯಕ ಸೇರಿದಂತೆ ವ್ಯಕ್ತಿಗಳ ಮಾರ್ಗದರ್ಶನ ಆತನಲ್ಲಿ ಮಹತ್ವದ ಬದಲಾವಣೆ ತರಬಲ್ಲದು,' ಎಂದು ಯುವರಾಜ್ ಸಿಂಗ್ ತಿಳಿಸಿದರು.

Story first published: Tuesday, September 24, 2019, 18:36 [IST]
Other articles published on Sep 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X