ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂತ್ ಅರ್ಧಶತಕ, ಇಂಗ್ಲೆಂಡ್ ಲಯನ್ಸ್‌ಗೆ 4ನೇ ಸೋಲುಣಿಸಿದ ಭಾರತ 'ಎ'

Rishabh Pant slams quick-fire fifty ahead of New Zealand T20 series

ತಿರುವನಂತಪುರಂ, ಜನವರಿ 30: ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 4ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಲಯನ್ಸ್‌ಗೆ ಭಾರತ 'ಎ' ತಂಡ 6 ವಿಕೆಟ್ ಸೋಲುಣಿಸಿದೆ. ರಿಷಬ್ ಪಂತ್ ಆಕರ್ಷಕ ಅರ್ಧಶತಕದ (73) ಬೆಂಬಲದೊಂದಿಗೆ ದೇಸಿ ತಂಡ ಪಾರಮ್ಯ ಮೆರೆಯಿತು.

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!

ಪ್ರವಾಸಿ ಇಂಗ್ಲೆಂಡ್ ಲಯನ್ಸ್, ಭಾರತ ಎ ವಿರುದ್ಧ ಒಟ್ಟು 5 ಏಕದಿನ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಲ್ಲಿ 4 ಏಕದಿನ ಪಂದ್ಯಗಳು ಈಗಾಗಲೆ ಮುಕ್ತಾಯಗೊಂಡಿವೆ. ನಾಲ್ಕರಲ್ಲೂ ಭಾರತವೇ ಮೇಲುಗೈ ಸಾಧಿಸಿ, ಈ ಅನಧಿಕೃತ ಏಕದಿನ ಸರಣಿಯಲ್ಲಿ 4-0ಯ ಮುನ್ನಡೆಯಲ್ಲಿದೆ.

'ಐದೇ ನಿಮಿಷ ಟೈಮು ಕೊಡು', ಮದುಮಗಳಲ್ಲಿ ಫುಟ್ಬಾಲಿಗ ವಿನಂತಿ!'ಐದೇ ನಿಮಿಷ ಟೈಮು ಕೊಡು', ಮದುಮಗಳಲ್ಲಿ ಫುಟ್ಬಾಲಿಗ ವಿನಂತಿ!

ಮಂಗಳವಾರ (ಜನವರಿ 29) ನಡೆದ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಲಯನ್ಸ್‌ಗೆ ಆಲ್ಲಿ ಪೋಪ್ 65, ಸ್ಟೀವನ್ ಮುಲ್ಲಾನಿ 58 ರನ್ ಸೇರಿಸಿ ಬಲ ತುಂಬಿದರು. ಇಂಗ್ಲೆಂಡ್ 50 ಓವರ್‌ ಮುಕ್ತಾಯಕ್ಕೆ 8 ವಿಕೆಟ್ ಕಳೆದು 221 ರನ್ ಗಳಿಸಿತು.

222 ರನ್ ಗುರಿ ಬೆನ್ನತ್ತಿದ ಭಾರತ 'ಎ'ಗೆ ಆರಂಭಿಕ ಆಟಗಾರ ಲೋಕೇಶ್ ರಾಹುಲ್ 42, ರಿಕಿ ಭುಯಿ 35 ರನ್ ಕೊಡುಗೆ ನೀಡಿದರು. ಅದರಲ್ಲೂ 5ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಂಡಿದ್ದ ಪಂತ್ (73), 6ನೇ ಕ್ರಮಾಂಕದಲ್ಲಿನ ದೀಪಕ್ ಹೂಡಾ (47) ಅವರ ಅದ್ಭುತ ಜೊತೆಯಾಟ ತಂಡಕ್ಕೆ ಲಭಿಸಿತು.

ಪಂತ್-ಹೂಡಾ ಜೋಡಿ 120 ರನ್ ಜೊತೆಯಾಟದ ಮೂಲಕ ಪಂದ್ಯದ ಮುಕ್ತಾಯದವರೆಗೂ ಕ್ರೀಸ್‌ನಲ್ಲಿ ನಿಂತಿದ್ದು ಪ್ರಮುಖವೆನಿಸಿತು. ಭಾರತ 46.3 ಓವರ್‌ಗೆ 4 ವಿಕೆಟ್ ಕಳೆದು 222 ರನ್ ಗುರಿ ಮುಟ್ಟಿತು.
ಇಂಗ್ಲೆಂಡ್ ಇನ್ನಿಂಗ್ಸ್‌ ವೇಳೆ ಶಾರ್ದೂಲ್ ಠಾಕೂರ್ 49 ರನ್ನಿಗೆ 4 ವಿಕೆಟ್ ಕೆಡವಿ ಮಿಂಚಿದರು. ರಿಷಬ್ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Wednesday, January 30, 2019, 13:00 [IST]
Other articles published on Jan 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X