ಯಶಸ್ವಿ ಆಟಗಾರರು ಮಾತ್ರವೇ ಸಂಭ್ರಮಿಸಬಹುದಾ?: ಟೀಕೆಗಳಿಗೆ ರಿಯಾನ್ ಪರಾಗ್ ಉತ್ತರ

ಅಸ್ಸಾಮ್ ಮೂಲದ ಯುವ ಆಟಗಾರ ರಿಯಾನ್ ಪರಾಗ್ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸಾಕಷ್ಟು ಸದ್ದು ಮಾಡಿರುವ ಆಟಗಾರ. ಯುವ ಆಲ್‌ರೌಂಡರ್ ಆಗಿ ಭರವಸೆ ಮೂಡಿಸಿರುವ ಈ ಕ್ರಿಕೆಟಿಗ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಆವೃತ್ತಿಯ ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ರಿಯಾನ್ ಪರಾಗ್ ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಪರವಾಗಿ ತಾನು ಖಂಡಿತಾ ಆಡಲಿದ್ದೇನೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಐಪಿಎಲ್‌ನಲ್ಲಿ ತಮ್ಮ ಮೇಲಿನ ಟೀಕೆಗಳಿಗೂ ಪ್ರತ್ಯುತ್ತರವನ್ನು ನೀಡಿದ್ದಾರೆ.

ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಅಂತ್ಯವಾಗಿರುವ ಲಿಸ್ಟ್ ಎ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ರಿಯಾನ್ ಪರಾಗ್ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಟೂರ್ನಿಯಲ್ಲಿ ಮೂರು ಶತಕಗಳ ಸಹಿತ ರಿಯಾನ್ ಪರಾಗ್ 552 ರನ್‌ಗಳನ್ನು ಗಳಿಸಿದ್ದಾರೆ.

ಮುಂದಿನ ವರ್ಷಗಳಲ್ಲಿ ಖಂಡಿತಾ ಭಾರತದ ಪರ ಆಡುತ್ತೇನೆ

ಮುಂದಿನ ವರ್ಷಗಳಲ್ಲಿ ಖಂಡಿತಾ ಭಾರತದ ಪರ ಆಡುತ್ತೇನೆ

ನ್ಯೂಸ್‌ 18 ಕ್ರಿಕೆಟ್ ನೆಕ್ಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ರಿಯಾನ್ ಪರಾಗ್ ಮುಂಬರುವ ವರ್ಷಗಳಲ್ಲಿ ಭಾರತ ತಂಡದ ಪರವಾಗಿ ಆಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ನಾನು ನನ್ನ ಮೇಲೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇನೆ. ನಾನು ಮುಂಬರುವ ವರ್ಷಗಳಲ್ಲಿ ಖಂಡಿತವಾಗಿಯೂ ಭಾರತ ತಂಡದ ಪರವಾಗಿ ಆಡುವ ವಿಶ್ವಾಸವನ್ನು ಹೊಂದಿದ್ದೇನೆ. ಅದಕ್ಕೆ ಪೂರಕವಾಗಿ ನಾನು ನನ್ನ ತಯಾರಿ ನಡೆಸುತ್ತಿದ್ದೇನೆ. ಈಗ ನನ್ನ ಚಿತ್ತ ಅದರತ್ತ ಮಾತ್ರವೇ ನೆಟ್ಟಿದೆ" ಎಂದಿದ್ದಾರೆ ರಿಯಾನ್ ಪರಾಗ್.

ವಿಚಿತ್ರ ಸಂಭ್ರಮಾಚರಣೆಯಿಂದ ಸುದ್ದಿ

ವಿಚಿತ್ರ ಸಂಭ್ರಮಾಚರಣೆಯಿಂದ ಸುದ್ದಿ

ಐಪಿಎಲ್‌ನಲ್ಲಿ ಕಳೆದ ಕೆಲ ಆವೃತ್ತಿಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವ ರಿಯಾನ್ ಪರಾಗ್ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಟಕ್ಕಿಂತ ಹೆಚ್ಚಾಗಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ವಿಚಿತ್ರವಾಗಿ ಸಂಭ್ರಮಾಚರಣೆಗಳನ್ನು ಮಾಡುತ್ತಾ, ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ ಈ ಆಟಗಾರ. ಈ ಸಂದರ್ಭದಲ್ಲಿ ಈ ವಿಚಾರವಾಗಿಯೂ ಮಾತನಾಡಿರುವ ರಿಯಾನ್ ಪರಾಗ್ ಟೀಕೆಗಳ ಹೊರತಾಗಿಯೂ ನಾನು ಭಿನ್ನವಾಗಿ ಸಂಭ್ರಮಿಸುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

IND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ

ಯಶಸ್ವಿ ಆಟಗಾರರು ಮಾತ್ರವೇ ಸಂಭ್ರಮಿಸಬೇಕಾ?

ಯಶಸ್ವಿ ಆಟಗಾರರು ಮಾತ್ರವೇ ಸಂಭ್ರಮಿಸಬೇಕಾ?

"ಭಾರತದಲ್ಲಿ ಕ್ರಿಕೆಟ್ ವಿಚಾರವಾಗಿ ಒಂದು ಭಾವನೆಯಿದೆ. ನೀವು ಕ್ರಿಕೆಟನ್ನು ಹೀಗೆ ನಿರ್ದಿಷ್ಟ ರೀತಿಯಲ್ಲಿಯೇ ಆಡಬೇಕು ಎಂಬ ಭಾವನೆಯಿದೆ. ಕ್ರಿಕೆಟ್‌ಗೆ ನಿಯಮಗಳು ವೆ. ಇನ್ನು ಇಲ್ಲಿ ಯಶಸ್ವಿ ಆಟಗಾರರು ಮಾತ್ರವೇ ಸಂಭ್ರಮಾಚರಣೆಯನ್ನು ಮಾಡಬಹುದು. ಉಳಿದಂತೆ ನೀವು ಇದನ್ನು ಮಾಡಬಹುದು, ನೀವು ಅದನ್ನು ಮಾಡಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ನಾನು ಕ್ರಿಕೆಟನ್ನು ಇಷ್ಟ ಪಟ್ಟು ಆಡಲು ಆರಂಭಿಸಿದ್ದೆ ಮತ್ತು ಅದನ್ನು ನಾನು ಆನಂದಿಸುತ್ತೇನೆ. ಶಾಲಾ ಕ್ರಿಕೆಟ್ ಆಗಿರಬಹುದು ಅಥವಾ ಐಪಿಎಲ್ ಆಗಿರಬಹುದು, ನಾನು ನನ್ನ ಆಟವನ್ನು ಅಥವಾ ನನ್ನ ಸಂಬ್ರಮಿಸುವ ರೀತಿಯನ್ನು ಬದಲಾಯಿಸಲಾರೆ" ಎಂದಿದ್ದಾರೆ ರಿಯಾನ್ ಪರಾಗ್.

ಕ್ರಿಕೆಟನ್ನು ಬಹಳ ಗಂಭೀರ ಆಟವನ್ನಾಗಿಸುತ್ತಿದ್ದಾರೆ

ಕ್ರಿಕೆಟನ್ನು ಬಹಳ ಗಂಭೀರ ಆಟವನ್ನಾಗಿಸುತ್ತಿದ್ದಾರೆ

"ಆಟವನ್ನು ನಾನು ಅನುಭವಿಸುತ್ತಾ ಆನಂದಿಸುತ್ತೇನೆ. ಇತ್ತೀಚೆಗೆ ಜನರು ಕ್ರಿಕೆಟ್‌ನಿಂದ ಮೋಜನ್ನು ಹೊರಗಿಡುತ್ತಿದ್ದಾರೆ. ಈಗ ಕ್ರಿಕೆಟ್ ಬಹಳ ಗಂಭೀರವಾದ ಆಟವಾಗಿದೆ. ಆದರೆ ನಾನು ಕ್ರಿಕೆಟನ್ನು ಬಹಳ ಮೋಜಿನಿಂದಲೇ ಆಡಲು ಬಯಸುತ್ತೇನೆ. ಅದು ಬದಲಾಗುವುದಿಲ್ಲ. ಜನರು ತಮ್ಮ ಅಭಿಪ್ರಾಯಗಳನ್ನು ಬೇಕಾದರೆಬದಲಾಯಿಸಬಹುದು. ಅವರು ಬದಲಾಯಿಸಿಕೊಳ್ಳದಿದ್ದರೂ ಅದು ನನಗೆ ಪರಿಣಾಮ ಬೀರುವುದಿಲ್ಲ, ಯಾಕೆಂದರೆ ನಾನು ನನ್ನ ಮೇಲೆ ಸಾಕಷ್ಟು ಆತ್ಮವಿಶ್ವಾಸವನ್ನು ಹೊಂದಿದ್ದೇನೆ" ಎಂದಿದ್ದಾರೆ ರಿಯಾನ್ ಪರಾಗ್.

For Quick Alerts
ALLOW NOTIFICATIONS
For Daily Alerts
Story first published: Monday, December 5, 2022, 14:53 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X