ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಹತ್ತು ವರ್ಷಗಳಲ್ಲಿ ಈತ ಭಾರತದ ಅತಿ ದೊಡ್ಡ ಟಿ20 ಆಟಗಾರ: ಭವಿಷ್ಯ ನುಡಿದ ರಾಬಿನ್ ಉತ್ತಪ್ಪ

Robin Uthappa huge statement on Rishabh Pant said he will be huge player in next 10 years

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹಿನ್ನಡೆಯನ್ನು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಟೀಮ್ ಇಂಡಿಯಾದಲ್ಲಿ ಸಾಖಷ್ಟು ಬದಲಾವಣೆಗಳು ಆಗಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯಗಳು ಜೋರಾಗಿ ವ್ಯಕ್ತವಾಗುತ್ತಿದೆ. ಅದರಲ್ಲಿ ಪ್ರಮುಖವಾಗಿದ್ದು ಯುವ ಆಟಗಾರ ರಿಷಭ್ ಪಂತ್ ಅವನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಬೇಕು ಎಂಬ ವಿಚಾರವೂ ಒಂದು. ಈ ವಿಚಾರವಾಗಿ ಕನ್ನಡಿಗ ಹಿರಿಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ರಾಬಿನ್ ಉತ್ತಪ್ಪ ರಿಷಭ್ ಪಂತ್ ವಿಚಾರವಾಗಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಅತ್ಯಂತ ದೊಡ್ಡ ಟಿ20 ಆಟಗಾರ ಎನಿಸಿಕೊಳ್ಳಲಿದ್ದಾರೆ ರಿಷಬ್ ಪಂತ್ ಎಂದು ಉತ್ತಪ್ಪ ಹೇಳಿದ್ದಾರೆ. ಆದರೆ ಇದು ಸಾಧ್ಯವಾಗಬೇಕಾದರೆ ಪಂತ್ ಅವರನ್ನು ಆರಂಭಿಕ ಆಟಗಾರನನ್ನಾಗಿ ಕಣಕ್ಕಿಳಿಸಬೇಕು ಎಂದಿದ್ದಾರೆ ರಾಬಿನ್ ಉತ್ತಪ್ಪ.

ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್

ನ್ಯೂಜಿಲೆಂಡ್ ಸರಣಿ ಉಲ್ಲೇಖಿಸಿ ಮಾತನಾಡಿದ ಉತ್ತಪ್ಪ

ನ್ಯೂಜಿಲೆಂಡ್ ಸರಣಿ ಉಲ್ಲೇಖಿಸಿ ಮಾತನಾಡಿದ ಉತ್ತಪ್ಪ

ನ್ಯೂಜಿಲೆಂಡ್ ಹಾಗೂ ಟೀಮ್ ಇಂಡಿಯಾ ನಡುವಿನ ಟಿ20 ಸರಣಿಯ ಹಿನ್ನೆಲೆಯಲ್ಲಿ ರಾಬಿನ್ ಉತ್ತಪ್ಪ 'ಸ್ಪೋರ್ಟ್ಸ್ ಕೀಡಾ' ಜೊತೆಗೆ ಮಾತನಾಡುತ್ತಾ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯಬೇಕು. ಅವರು ಅಗ್ರ ಕ್ರಮಾಂಕದಲ್ಲಿ ಖಂಡಿತವಾಗಿಯೂ ಆಡಬಲ್ಲವರಾಗಿದ್ದಾರೆ. ನನ್ನ ಪ್ರಕಾರ ಟಿ20 ಮಾದರಿಯಲ್ಲಿ ರಿಷಭ್ ಅವರಿಗೆ ಹೆಚ್ಚು ಸೂಕ್ತವೆನಿಸುವ ಕ್ರಮಾಂಕವೇ ಅದಾಗಿದೆ. ಅಗ್ರ ಕ್ರಮಾಂಕದಲ್ಲಿ ಅವರಿಂದ ಅದ್ಭುತ ಇನ್ನಿಂಗ್ಸ್‌ಗಳು ಹೊರಬರುವ ನಿರೀಕ್ಷೆಯಿದೆ" ಎಂದಿದ್ದಾರೆ ರಾಬಿನ್ ಉತ್ತಪ್ಪ.

ಮುಂದಿನ ಹತ್ತು ವರ್ಷಗಳಲ್ಲಿ ದೊಡ್ಡ ಆಟಗಾರನಾಗಲಿದ್ದಾರೆ ಪಂತ್

ಮುಂದಿನ ಹತ್ತು ವರ್ಷಗಳಲ್ಲಿ ದೊಡ್ಡ ಆಟಗಾರನಾಗಲಿದ್ದಾರೆ ಪಂತ್

ಟೆಸ್ಟ್ ಮಾದರಿಯಲ್ಲಿ ಈಗಾಗಲೇ ಮ್ಯಾಚ್ ವಿನ್ನರ್ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ರಿಷಬ್ ಪಂತ್ ಅವರನ್ನು ಟಿ20 ಮಾದರಿಯಲ್ಲಿಯೂ ಮ್ಯಾಚ್ ವಿನ್ನರ್ ಆಟಗಾರ ಎಂದಿದ್ದಾರೆ ರಾಬಿನ್ ಉತ್ತಪ್ಪ. "ಆತ ಮ್ಯಾಚ್ ವಿನ್ನರ್, ಆಟದ ಗತಿಯನ್ನೇ ಬದಲಾಯಿಸುವ ಆಟಗಾರ. ಆತನ ಬ್ಯಾಟಿಂಗ್‌ನಿಂದ ಆತ ಏಕಾಂಗಿಯಾಗಿ ಭಾರತವನ್ನು ಸುಲಭವಾಗಿ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ನನ್ನ ಪ್ರಕಾರ ಆತ ಮುಂದಿನ ಹತ್ತು ವರ್ಷಗಳಲ್ಲಿ ಟಿ20 ಮಾದರಿಯ ಅತ್ಯಂತ ದೊಡ್ಡ ಆಟಗಾರ ಎನಿಸಿಕೊಳ್ಳಲಿದ್ದಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಚುಟುಕು ಮಾದರಿಯಲ್ಲಿ ಮತ್ತೆ ಮತ್ತೆ ವಿಫಲವಾಗುತ್ತಿರುವ ಪಂತ್

ಚುಟುಕು ಮಾದರಿಯಲ್ಲಿ ಮತ್ತೆ ಮತ್ತೆ ವಿಫಲವಾಗುತ್ತಿರುವ ಪಂತ್

ಇನ್ನು ರಿಷಭ್ ಪಂತ್ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಈ ವರ್ಷವೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಆದರೆ ಅಸ್ಥಿರ ಪ್ರದರ್ಶನದಿಂದಾಗಿ ತಂಡದಲ್ಲಿ ಸ್ಥಾನವನ್ನು ಗಟ್ಟಿಗೊಳಿಸಲು ಸಾಕಷ್ಟು ಹಿನ್ನಡೆಯಾಯಿತು. 2022ರಲ್ಲಿ ರಿಷಭ್ ಪಂತ್ 22 ಪಂದ್ಯಗಳನ್ನು ಆಡಿದ್ದು ಇದರಲ್ಲಿ 337 ರನ್‌ಗಳನ್ನು ಗಳಿಸಿದ್ದಾರೆ. ಅವರ ಸರಾಸರಿ 30ಕ್ಕಿಂತ ಕಡಿಮೆಯಿದೆ.

ನ್ಯೂಜಿಲೆಂಡ್ ಸರಣಿಯಲ್ಲಿ ಪಂತ್ ಮಿಂಚುವ ವಿಶ್ವಾಸ

ನ್ಯೂಜಿಲೆಂಡ್ ಸರಣಿಯಲ್ಲಿ ಪಂತ್ ಮಿಂಚುವ ವಿಶ್ವಾಸ

ಭಾರತದ ಹಲವು ಮಾಜಿ ಕ್ರಿಕೆಟಿಗರು ರಿಷಭ್ ಪಂತ್ ಮೇಲೆ ಸಾಕಷ್ಟು ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ರಿಷಭ್ ಪಂತ್‌ಗೆ ಅಗ್ರ ಕ್ರಮಾಂಕ ಸೂಕ್ತ ಎಂಬ ಅಭಿಪ್ರಾಯಗಳು ಜೋರಾಗಿ ವ್ಯಕ್ತವಾಗುತ್ತಿದೆ. ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಮೂವರು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದು ಆ ಕಾರಣದಿಂದಾಗಿ ರಿಷಭ್ ಪಂತ್‌ಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ದೊರೆಯುವ ನಿರೀಕ್ಷೆಯಿದೆ. ಈ ಅವಕಾಶವನ್ನು ಎಡಗೈ ದಾಂಡಿಗ ಯಾವ ರೀತಿಯಾಗಿ ಬಳಸಿಕೊಳ್ಳಲಿದ್ದಾರೆ ಎಂಬುದು ಈಗ ಎಲ್ಲರಿಗೂ ಕುತೂಹಲ ಮೂಡಿಸಿದೆ.

Story first published: Friday, November 18, 2022, 13:13 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X