ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!

Rohit Sharma 2019 most sixes 900 650

ಲೌಡರ್‌ಹಿಲ್‌(ಫ್ಲೋರಿಡಾ), ಆಗಸ್ಟ್‌ 04: ಕಳೆದ ತಿಂಗಳು ವಿಶ್ವಕಪ್‌ ಟೂರ್ನಿಯಲ್ಲಿ ಐದು ಶತಕ ಬಾರಿಸಿ ಅಬ್ಬರಿಸಿದ್ದ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ, ಇದೀಗ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಸಿಕ್ಸರ್‌ಗಳ ವಿಶ್ವದಾಖಲೆಯನ್ನೂ ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿನ ಲೌಡರ್‌ಹಿಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 3 ಸಿಕ್ಸರ್‌ ಬಾರಿಸಿದ ರೋಹಿತ್‌, ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವ ದಾಖಲೆ ಹೊಮದಿದ್ದ ವಿಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ (105 ಸಿಕ್ಸರ್ಸ್‌) ಅವರನ್ನು ಹಿಂದಿಕ್ಕಿದರು.

1
46245

ಈ ಪಂದ್ಯಕ್ಕೂ ಮುನ್ನ 104 ಸಿಕ್ಸರ್‌ಗಳನ್ನು ಸಿಡಿಸಿದ್ದ ರೋಹಿತ್‌, ಭಾನುವಾರದ ಪಂದ್ಯದಲ್ಲಿ 51 ಎಸೆತಗಳಲ್ಲಿ 67 ರನ್‌ ಚೆಚ್ಚಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳು ಮೂಡಿಬಂದವು. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಒಟ್ಟು ಸಿಕ್ಸರ್‌ಗಳ ಗಳಿಕೆಯನ್ನು 107ಕ್ಕೆ ವಿಸ್ತರಿಸಿದರು.

ವೆಸ್ಟ್ ಇಂಡೀಸ್‌ನ ಅನುಭವಿ ಬ್ಯಾಟ್ಸ್‌ಮನ್‌ 39 ವರ್ಷದ ಕ್ರಿಸ್‌ ಗೇಲ್‌, ಭಾರತ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ (103 ಸಿಕ್ಸರ್ಸ್‌) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಕಿಂಗ್‌ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌!ಕಿಂಗ್‌ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌!

ಭಾರತ ತಂಡದ ಪರ 96 ಟಿ20 ಪಂದ್ಯಗಳನ್ನು ಆಡಿರುವ ರೋಹಿತ್‌, ಅಂತಾರಾಷ್ಟ್ರೀಯ ಟಿ20ಯಲ್ಲಿಅತಿ ಹೆಚ್ಚು ರನ್‌ (2422) ಗಳಿಸಿದ ಬ್ಯಾಟ್ಸ್‌ಮನ್‌ ಕೂಡ ಆಗಿದ್ದಾರೆ. ಅಷ್ಟೇ ಅಲ್ಲದೆ ಚುಟುಕು ಕ್ರಿಕೆಟ್‌ನಲ್ಲಿ 4 ಶತಕಗಳನ್ನು ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿರುವ ಬ್ಯಾಟ್ಸ್‌ಮನ್‌ಗಳು.

ರೋಹಿತ್‌ ಶರ್ಮಾ (107 ಸಿಕ್ಸರ್ಸ್)

ರೋಹಿತ್‌ ಶರ್ಮಾ (107 ಸಿಕ್ಸರ್ಸ್)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಸಾಧನೆ
96 ಪಂದ್ಯ
2422 ರನ್‌
118 ಗರಿಷ್ಠ
32.72 ಸರಾಸರಿ
136.91 ಸ್ಟ್ರೈಕ್‌ರೇಟ್‌
04 ಶತಕಗಳು
16 ಅರ್ಧಶತಕಗಳು
215 ಫೋರ್‌ಗಳು
107 ಸಿಕ್ಸರ್ಸ್‌

ಕ್ರಿಸ್‌ ಗೇಲ್‌ (105 ಸಿಕ್ಸರ್ಸ್)

ಕ್ರಿಸ್‌ ಗೇಲ್‌ (105 ಸಿಕ್ಸರ್ಸ್)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗೇಲ್‌ ಸಾಧನೆ
58 ಪಂದ್ಯ
1627 ರನ್‌
117 ಗರಿಷ್ಠ
32.54 ಸರಾಸರಿ
142.84 ಸ್ಟ್ರೈಕ್‌ರೇಟ್‌
02 ಶತಕಗಳು
13 ಅರ್ಧಶತಕಗಳು
138 ಫೋರ್‌ಗಳು
105 ಸಿಕ್ಸರ್ಸ್‌

ಮಾರ್ಟಿನ್‌ ಗಪ್ಟಿಲ್‌ (103 ಸಿಕ್ಸರ್ಸ್)

ಮಾರ್ಟಿನ್‌ ಗಪ್ಟಿಲ್‌ (103 ಸಿಕ್ಸರ್ಸ್)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗಪ್ಟಿಲ್‌ ಸಾಧನೆ
76 ಪಂದ್ಯ
2272 ರನ್‌
105 ಗರಿಷ್ಠ
33.91 ಸರಾಸರಿ
132.71 ಸ್ಟ್ರೈಕ್‌ರೇಟ್‌
02 ಶತಕಗಳು
14 ಅರ್ಧಶತಕಗಳು
200 ಫೋರ್‌ಗಳು
103 ಸಿಕ್ಸರ್‌ಗಳು

ಕಾಲಿನ್‌ ಮನ್ರೊ

ಕಾಲಿನ್‌ ಮನ್ರೊ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮನ್ರೊ ಸಾಧನೆ
52 ಪಂದ್ಯ
1411 ರನ್‌
109* ಗರಿಷ್ಠ
33.59 ಸರಾಸರಿ
161.99 ಸ್ಟ್ರೈಕ್‌ರೇಟ್‌
03 ಶತಕಗಳು
09 ಅರ್ಧಶತಕಗಳು
104 ಫೋರ್‌ಗಳು
92 ಸಿಕ್ಸ್‌ಗಳು

ಬ್ರೆಂಡನ್‌ ಮೆಕಲಮ್‌

ಬ್ರೆಂಡನ್‌ ಮೆಕಲಮ್‌

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೆಕಲಮ್‌ ಸಾಧನೆ
71 ಪಂದ್ಯ
2140 ರನ್‌
123 ಗರಿಷ್ಠ
35.66 ಸರಾಸರಿ
136.21 ಸ್ಟ್ರೈಕ್‌ರೇಟ್‌
02 ಶತಕಗಳು
13 ಅರ್ಧಶತಕಗಳು
199 ಫೋರ್‌ಗಳು
91 ಸಿಕ್ಸರ್‌ಗಳು

Story first published: Sunday, August 4, 2019, 23:26 [IST]
Other articles published on Aug 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X