ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾಕ್‌ಡೌನ್ ಸಡಿಲಿಕೆಯಾದ್ರೂ ಅಭ್ಯಾಸಕ್ಕೆ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆಗಿಲ್ಲ ಗ್ರೀನ್ ಸಿಗ್ನಲ್

Rohit Sharma And Ajinkya Rahane Have To Wait For Resume Individual Training

ಮೂರು ಹಂತಗಳ ಕಠಿಣ ಲಾಕ್‌ಡೌನ್‌ನ ನಂತರ ದೇಶದಲ್ಲಿ ನಾಲ್ಕನೇ ಹಂತದಲ್ಲಿ ಸಾಕಷ್ಟು ಸಡಿಲಿಕೆ ಮಾಡಲಾಗಿದೆ. ಇದರಲ್ಲಿ ಕ್ರೀಡಾ ವಿಭಾಗವನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶವನ್ನು ನೀಡಲಾಗಿತ್ತು. ಅದಕ್ಕೆ ಒಂದಷ್ಟು ಶರತ್ತುಗಳನ್ನು ವಿಧಿಸಲಾಗಿದೆ.

ಆದರೆ ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ನಿಯಮ ಸಡಿಲಿಕೆ ಮಾಡಲಾಗಿದ್ದರೂ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಸೇರಿದಂತೆ ಕೆಲ ಆಟಗಾರರಿಗೆ ನಿರಾಸೆ ಮುಂದುವರಿದಿದೆ. ನಾಲ್ಕನೇ ಹಂತದಲ್ಲೂ ಈ ಆಟಗಾರರು ಮೈದಾನಕ್ಕೆ ಅಭ್ಯಾಸಕ್ಕೆ ಇಳಿಯುವಂತಿಲ್ಲ.

ನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳುನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳು

ಹೌದು, ಕೊರೊನಾ ವೈರಸ್‌ನ ಕಾರಣದಿಂದಾಗಿ ಮಹಾರಾಷ್ಟ್ರದ ರೆಡ್‌ ಝೋನ್ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಮುಂದುವರಿಯಲಿದೆ. ಹೀಗಾಗಿ ಮುಂಬೈನಲ್ಲಿ ತಮ್ಮ ನಿವಾಸದಲ್ಲಿರುವ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಇನ್ನೂ ಒಂದಷ್ಟು ಸಮಯಗಳ ಕಾಲ ಕಾಯಲೇ ಬೇಕಿದೆ.

ಮುಂಬೈನಲ್ಲಿ ಕ್ರಿಕೆಟ್‌ ಅಭ್ಯಾಸವನ್ನು ನಡೆಸಲು ಮುಂಬೈ ಕ್ರಿಕೆಟ್ ಅಸೊಸಿಯೇಶನ್ ಮೂರು ವ್ಯವಸ್ಥೆಗಳನ್ನು ಹೊಂದಿದೆ. ವಾಂಖೆಡೆ ಸ್ಟೇಡಿಯಮ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಸಚಿನ್ ತೆಂಡೂಲ್ಕರ್ ಜಿಮ್‌ಖಾನಾ. ಆದರೆ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಮೂರು ಕೇಂದ್ರಗಳು ಕೂಡ ತೆರೆಯುವ ಅವಕಾಶವನ್ನು ಪಡೆದುಕೊಂಡಿಲ್ಲ.

ಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪ

ನಾಲ್ಕನೇ ಲಾಕ್‌ಡೌನ್‌ನಲ್ಲಿ ಕೇಂದ್ರ ಗೃಹ ಇಲಾಖೆ ಕ್ರೀಡಾ ಅಭ್ಯಾಸಗಳನ್ನು ನಡೆಸಲು ಅವಕಾಶವನ್ನು ನೀಡಿತ್ತು. ಯಾವುದೇ ಪ್ರೇಕ್ಷಕರು ಹಾಜರಾಗದೆ ಕಟ್ಟುನಿಟ್ಟಿನ ಕ್ರಮಗಳಲ್ಲಿ ಅಭ್ಯಾಸವನ್ನು ನಡೆಸಬಹುದು ಎಂದು ತಿಳಿಸಿತ್ತು. ನಾಲ್ಕನೇ ಹಂತದ ಲಾಕ್‌ಡೌನ್ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ.

Story first published: Wednesday, May 20, 2020, 21:30 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X