ಶ್ರೀಲಂಕಾದ ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡ ರೋಹಿತ್ ಶರ್ಮಾ

Posted By:
Rohit Sharma visites his fan house in Sri Lanka

ಕೊಲಂಬೊ, ಮಾರ್ಚ್ 20: ಭಾರತೀಯ ಕ್ರಿಕೆಟಿಗರು ಕ್ರೀಡಾಂಗಣದಲ್ಲಿ ಮಾತ್ರವೇ ಹಿರೋಗಳಲ್ಲ ಕ್ರೀಡಾಂಗಣದ ಹೊರಗೂ ತಮ್ಮ ಸರಳತೆ, ಮಾನವೀಯತೆಗಳಿಂದ ಜನಪ್ರಿಯರು. ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಇಂದಿನ ಯುವ ಆಟಗಾರರು ಪಾಲಿಸುತ್ತಿದ್ದಾರೆ.

ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕ್ರಿಕೆಟಿಗ ರೋಹಿತ್ ಶರ್ಮಾ ಅವರದ್ದು. ಲಂಕಾದಲ್ಲಿ ನಡೆದ ನಿದಹಾಸ್ ಟ್ರೋಫಿಯ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಭಾರತಕ್ಕೆ ಕಪ್ ಗೆದ್ದುಕೊಟ್ಟದ್ದು ಮಾತ್ರವಲ್ಲ ತಮ್ಮ ಮಾನವೀಯತೆ ತುಂಬಿದ ನಡತೆಯಿಂದ ಇಡೀಯ ಶ್ರೀಲಂಕ ಕ್ರಿಕೆಟ್ ಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ.

ರೋಹಿತ್ ಶರ್ಮಾ ಅವರು ಶ್ರೀಲಂಕಾದಲ್ಲಿನ ತಮ್ಮ ಅಭಿಮಾನಿಯ ಮನೆಗೆ ಭೇಟಿ ನೀಡಿ ಅವರ ಆಸೆ ಪೂರೈಸಿದ್ದಾರೆ. ಹೌದು, ಟೂರ್ನಿ ನಡುವೆ ರೋಹಿತ್ ಶರ್ಮಾ ಅವರು ಶ್ರೀಲಂಕಾದ ತಮ್ಮ ಅಭಿಮಾನಿ ಮೊಹಮ್ಮದ್ ನಿಲಮ್ ಅವರ ಮನೆಗೆ ತೆರಳಿ ಅವರ ಕುಟುಂಬದೊಂದಿಗೆ ಸಮಯ ಕಳೆದು ಬಂದಿದ್ದಾರೆ.

ನೋವಿನಿಂದ ವಾಪಾಸ್ಸಾಗಿದ್ದ ಅಭಿಮಾನಿ

ನೋವಿನಿಂದ ವಾಪಾಸ್ಸಾಗಿದ್ದ ಅಭಿಮಾನಿ

ಕಳೆದ ವರ್ಷ ಶ್ರೀಲಂಕಾ ತಂಡವು ಭಾರತ ಪ್ರವಾಸ ಕೈಗೊಂಡಿದ್ದಾಗ ರೋಹಿತ್ ಶರ್ಮಾ ಅವರ ಆಟ ನೋಡಲೆಂದೇ ಮೊಹಮ್ಮದ್ ನಿಲಮ್ ಭಾರತಕ್ಕೆ ಆಗಮಿಸಿದ್ದರು, ರೋಹಿತ್ ಅವರನ್ನು ಭೇಟಿ ಸಹ ಮಾಡಿದ್ದರು. ಆದರೆ ನಿಲಮ್ ಅವರ ತಂದೆಗೆ ತೀವ್ರ ಅನರೋಗ್ಯ ಕಾಣಿಸಿಕೊಂಡ ಕಾರಣ ಎಲ್ಲ ಪಂದ್ಯಗಳನ್ನು ನೋಡಲಾಗದೆ ಶ್ರೀಲಂಕಕ್ಕೆ ವಾಪಾಸ್ ತೆರಳಬೇಕಾಯಿತು.

ಅಭಿಮಾನಿಗೆ ಮಾತು ಕೊಟ್ಟ ರೋಹಿತ್

ಅಭಿಮಾನಿಗೆ ಮಾತು ಕೊಟ್ಟ ರೋಹಿತ್

ನಿಲಮ್ ಅವರ ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಂಡ ರೋಹಿತ್ ಶರ್ಮಾ ನಿಲಮ್ ಅವರಿಗೆ ವಾಪಾಸ್ಸು ತೆರಳಲು ಟಿಕೆಟ್ ಕೊಡಿಸಿದ್ದರು ಜೊತೆಗೆ ಧನ ಸಹಾಯ ಸಹ ಮಾಡಿದ್ದರು. ಅದೇ ಸಮಯದಲ್ಲಿ 'ಶ್ರೀಲಂಕಕ್ಕೆ ಬಂದಾಗ ನಿನ್ನ ಮನೆಗೆ ಬರುತ್ತೇನೆಂದು' ನಿಲಮ್ ಅವರಿಗೆ ರೋಹಿತ್ ಶರ್ಮಾ ಅವರು ಮಾತು ಕೊಟ್ಟಿದ್ದರು. ಈಗ ಕೊಟ್ಟ ಮಾತನ್ನು ಈಡೇರಿಸಿದ್ದಾರೆ.

ಅಭಿಮಾನಿಗಾಗಿ ಟಿಶರ್ಟ್‌

ಅಭಿಮಾನಿಗಾಗಿ ಟಿಶರ್ಟ್‌

ಮೊಹಮ್ಮದ್ ನಿಲಮ್ ಅವರ ಮನೆಗೆ ಭೇಟಿ ನೀಡಿದ್ದ ರೊಹಿತ್ ಶರ್ಮಾ ಅಭಿಮಾನಿಗಾಗಿ ಟಿ-ಶರ್ಟ್‌ಗಳನ್ನು ತಂದು ಕೊಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದ ರೊಹಿತ್ ಶರ್ಮಾ ನಿಲಮ್‌ ಅವರ ಹಳೆಯ ಚಿತ್ರಗಳು, ನಿಲಮ್ ಸಂಗ್ರಹಿಸಿಟ್ಟಿದ್ದ ರೊಹಿತ್ ಶರ್ಮಾ ಅವರ ಬಗೆಗಿನ ಪತ್ರಿಕಾ ವರದಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ನಿಲಮ್ ರೊಹಿತ್ ಶರ್ಮಾ ಅವರಿಗೆ ಸಣ್ಣ ಆನೆಯ ಪುತ್ತಳಿ ನೀಡಿದ್ದಾರೆ.

ಪತ್ರಿಕೆಗಳಲ್ಲಿ ಹೊಗಳಿಕೆಯ ಮಹಾಪೂರ

ಪತ್ರಿಕೆಗಳಲ್ಲಿ ಹೊಗಳಿಕೆಯ ಮಹಾಪೂರ

ರೋಹಿತ್ ಶರ್ಮಾ ಅವರ ನಂ.1 ಅಭಿಮಾನಿ ಆಗಿರುವ ಮೊಹಮ್ಮದ್ ನಿಲಮ್ ಅವರು ರೋಹಿತ್ ಶರ್ಮಾ ಅವರು ತಮ್ಮ ಮನೆಗೆ ಬಂದಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಶ್ರೀಲಂಕಾದ ದಿನಪತ್ರಿಕೆಗಳು ರೋಹಿತ್ ಶರ್ಮಾ ಅವರ ಈ ಗುಣವನ್ನು ಹಾಡಿ ಹೊಗಳಿವೆ. ನಿದಹಾಸ್ ಟೂರ್ನಿಯಲ್ಲಿ ಬಾಂಗ್ಲಾ ಆಟಗಾರರು ತೋರಿದ ದುರ್‌ವರ್ತನೆ ಮತ್ತು ಭಾರತೀಯ ಆಟಗಾರರು ನಡೆದುಕೊಂಡ ರೀತಿಯನ್ನು ಹೋಲಿಸಿ ಚರ್ಚೆಗಳು ನಡೆದಿವೆ.

ಸುಧೀರ್‌ರಿಂದಲೇ ಸಾಧ್ಯವಾಗಿದ್ದು

ಸುಧೀರ್‌ರಿಂದಲೇ ಸಾಧ್ಯವಾಗಿದ್ದು

ಅಂದಹಾಗೆ ಮೊಹಮ್ಮದ್ ನಿಲಮ್‌ ಅವರನ್ನು ರೋಹಿತ್ ಪರಿಚಯ ಮಾಡಿಸಿದ್ದು ಯಾರು ಗೊತ್ತಾ?, ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿ ಸುಧೀರ್. ನಿಲಮ್ ತಂದೆಯ ಆರೋಗ್ಯದ ಬಗ್ಗೆ ರೋಹಿತ್ ಗೆ ತಿಳಿಸಿದ್ದು ಕೂಡಾ ಇದೇ ಸುಧೀರ್.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, March 20, 2018, 15:55 [IST]
Other articles published on Mar 20, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ