ಭಾರತ vs ಇಂಗ್ಲೆಂಡ್: ರೋಹಿತ್ ಶರ್ಮಾ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

Rohit Sharma ಟೆಸ್ಟ್ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟ ಆಡಿದ್ದಾರೆ | Oneindia Kannada

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈವರೆಗೆ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಅಲ್ಲಿನ ಬೌಲರ್‌ಗಳ ದಾಳಿಗೆ ಕಂಗೆಡುತ್ತಿದ್ದ ಭಾರತೀಯ ಬ್ಯಾಟ್ಸ್‌ಮನ್‌ಗಳು ಈ ಬಾರಿಯ ಸರಣಿಯ ಆರಂಭಿಕ ಹಂತದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸಲು ಕಾರಣರಾಗಿದ್ದಾರೆ. ಇದರಲ್ಲಿ ಆರಂಭಿರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ನೀಡಿರುವ ಪ್ರದರ್ಶನ ಗಮನಾರ್ಹವಾಗಿದೆ. ಕೆಎಲ್ ರಾಹುಲ್ ಲಾರ್ಡ್ಸ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದಂಚಿನಲ್ಲಿ ಎಡವಿದರು. ಆದರೆ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ವಿಶೇಷ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಲಾರ್ಡ್ಸ್ ಪಂದ್ಯದ ಮೊದಲ ದಿನದಾಟದ ಬಳಿಕ ಮಾತನಾಡಿರುವ ಮೈಕಲ್ ವಾನ್ ರೋಹಿತ್ ಶರ್ಮಾ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ರೋಹಿತ್ ಶರ್ಮಾ ಅವರು ತಮ್ಮ ಮೊದಲ ವಿದೇಶಿ ಟೆಸ್ಟ್ ಶತಕವನ್ನು ಐದು ಪಂದ್ಯಗಳ ಈ ಸರಣಿಯಲ್ಲಿ ಗಳಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅನುಭವಿ ಆರಂಭಿಕ ಆಟಗಾರ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಸೂಕ್ತವಾದ ತಾಂತ್ರಿಕ ಕೌಶಲ್ಯವನ್ನು ವ್ಯಕ್ತೊಡಿಸುತ್ತಿದ್ದು ಈ ಮೂಲಕ ವಿದೇಶಿ ನೆಲದಲ್ಲಿ ತಮ್ಮ ಶತಕದ ಸಾಧನೆಯನ್ನು ಪೂರೈಸಲಿದ್ದಾರೆ ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟ

ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಭಾರತದ ಪರವಾಗಿ 23ನೇ ಟೆಸ್ಟ್ ಪಂದ್ಯದಲ್ಲಿ ವಿದೇಶಿ ನೆಲದಲ್ಲಿ ಆಡಿದಂತಾಗಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್ ಕೇವಲ 17 ರನ್‌ಗಳ ಅಂತರದಿಂದ ಶತಕವನ್ನು ತಪ್ಪಿಸಿಕೊಂಡರು. ಆರಂಭದಿಂದಲೇ ಅದ್ಭುತವಾಗಿ ಬ್ಯಾಟ್ ಬೀಸಲು ಆರಂಭಿಸಿದ ರೋಹಿತ್ ಸತರಾಗವಾಗಿ ರನ್ ಗಳಿಸುತ್ತಿದ್ದರು. ಆದರೆ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಎಸೆತದ ಮರ್ಮ ಅರಿಯಲು ವಿಫಲವಾದ ಅವರು ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದಾರೆ. ಈ ಮೂಲಕ ಶತಕದ ಅವಕಾಶವನ್ನು ಕಳೆದುಕೊಂಡರು.

"ಭಾರತದ ಆರಂಭಿಕ ಜೊತೆಯಾಟದಲ್ಲಿ ರೋಹಿತ್ ಶರ್ಮಾ ತುಂಬಾ ಆಕ್ರಮಣಕಾರಿಯಾಗಿದ್ದರು. ರೋಹಿತ್ ಶರ್ಮಾ ಇನ್ನೂ ಕೂಡ ವಿದೇಶಿ ಮೈದಾನದಲ್ಲಿ ಶತಕಗಳಿಸದಿರುವುದು ಅಚ್ಚರಿ ಮೂಡಿಸಿದೆ. ಈ ಪಂದ್ಯದಲ್ಲಿ ನಾನು ಕಾಮೆಂಟರಿ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಕಾರ್ಯಕ್ರಮದ ನಿರ್ಮಾಪಕರು ನನ್ನ ಕಿವಿಯಲ್ಲಿ 'ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ತಮ್ಮ ಮೊದಲ ಶತಕಗಳಿಸುವ ಸನಿಹದಲ್ಲಿದ್ದಾರೆ' ಎಂದ ತಿಳಿಸಿದರು. ಆಗ ನನಗೆ ಅಚ್ಚರಿಯಾಯಿತು. ರೋಹಿತ್ ಶರ್ಮಾ ಇನ್ನೂ ಕೂಡ ವಿದೇಶಿ ನೆಲದಲ್ಲಿ ಟೆಸ್ಟ್ ಶತಕವನ್ನು ಬಾರಿಸಲಿಲ್ಲವೇ ಎಂದು. ಆದರೆ ಇದು ಕೇವಲ ಸಮಯದ ಸಂಗತಿ. ಖಂಡಿತಾ ಈ ಸರಣಿಯ್ಲಲಿ ಅವರು ಈ ಸಾಧನೆಯನ್ನು ಮಾಡಲಿದ್ದಾರೆ ಎಂಬ ವಿಶ್ವಾಸ ನನಗಿದೆ. ನನ್ನ ಪ್ರಕಾರ ಆತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ" ಎಂದು ಮೈಕಲ್ ವಾವ್ ವಿವರಿಸಿದ್ದಾರೆ.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

ಲಾರ್ಡ್ಸ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 126 ರನ್‌ಗಳ ಆರಂಭಿಕ ಜೊತೆಯಾಟವನ್ನು ಆಡಿದರು. ಈ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಭಾರತೀಯ ತಂಡ ಅತ್ಯುತ್ತಮ ಆರಂಭವನ್ನು ಪಡೆಯಿತು. ಟೀಮ್ ಇಂಡಿಯಾದ ಪರವಾಗಿ ಕೆಎಲ್ ರಾಹುಲ್ ಮೊದಲ ದಿನ ಅಜೇಯ ಶತಕವನ್ನು ಗಳಿಸಿದ್ದು ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಕೆಎಲ್ ರಾಹುಲ್ ಅಜೇಯ 127 ರನ್‌ಗಳನ್ನು ಮೊದಲ ದಿನ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಮೊದಲ ದಿನ 276 ರನ್‌ಗಳನ್ನು ಗಳಿಸಿದ್ದು ಮೂರು ವಿಕೆಟ್ ಕಳೆದುಕೊಂಡಿದೆ. ಎರಡನೇ ದಿನದ ಆರಂಭದಲ್ಲಿ ಅಜಿಂಕ್ಯ ರಹಾನೆ ಕೆಎಲ್ ರಾಹುಲ್‌ಗೆ ಸಾಥ್ ನೀಡಲಿದ್ದಾರೆ.

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಬಳಗ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್ ಆಡುವ ಬಳಗ:
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 12:26 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X