RSWS 2022 ಫೈನಲ್: ಇಂಡಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್: 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲಿದೆಯಾ ಸಚಿನ್ ಬಳಗ!

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಫೈನಲ್ ಪಂದ್ಯ ಇಂದು ಆಯೋಜನೆಯಾಗಲಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು ಟೂರ್ನಿಯ ಚಾಂಪಿಯನ್ ಪಟ್ಟಕ್ಕಾಗಿ ಕಠಿಣ ಪೈಪೋಟಿಯನ್ನು ನಡೆಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದ ಭಾರತ ಎರಡನೇ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಗೆಲುವು ಸಾಧಿಸಿ ಅಂತಿಮ ಸೆಣೆಸಾಟಕ್ಕೆ ಅರ್ಹತೆ ಪಡೆದುಕೊಂಡಿತ್ತು. ಈ ಮೂಲಕ ಈ ವರ್ಷದ ದಿಗ್ಗಜರ ಸೆಣೆಸಾಟಕ್ಕೆ ತೆರೆ ಬೀಳಲಿದೆ.

ಈ ಟೂರ್ನಿಗೆ ಆರಂಭದಿಂದಲೂ ಮಳೆ ಅಡ್ಡಿಯುಂಟು ಮಾಡಿದ ಪರಿಣಾಮವಾಗಿ ಒಂದಷ್ಟು ಹಿನ್ನಡೆಯಾದರೂ ಒಟ್ಟಾರೆಯಾಗಿ ಯಶಸ್ವಿಯಾಗಿ ನಡೆದಿದೆ. ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಿ ಅವರ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ದೊರೆತಿದ್ದು ಈ ಸೆಣೆಸಾಟವನ್ನು ಆನಂದಿಸಿದ್ದಾರೆ. ಇದೀಗ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

ಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ

ರೋಡ್‌ಸೇಫ್ಟಿ ವರ್ಲ್ಡ್ ಸಿರೀಸ್‌ನ ಫೈನಲ್ ಪಂದ್ಯ ಅಕ್ಟೋಬರ್ 1 ಶನಿವಾರದಂದು ರಾಯ್‌ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸಮಯ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ವೂಟ್ ಅಥವಾ ಜಿಯೋ ಟಿವಿನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಸಂಭಾವ್ಯ ಆಡುವ ಬಳಗ

ಸಂಭಾವ್ಯ ಆಡುವ ಬಳಗ

ಶ್ರೀಲಂಕಾ ಲೆಜೆಂಡ್ಸ್ ಸಂಭಾವ್ಯ ಆಡುವ ಬಳಗ: ಮಹೇಲ ಉದವಟ್ಟೆ, ತಿಲಕರತ್ನೆ ದಿಲ್ಶನ್ (ನಾಯಕ), ಉಪುಲ್ ತರಂಗ (ವಿಕೆಟ್ ಕೀಪರ್), ಜೀವನ್ ಮೆಂಡಿಸ್, ಚಾಮರ ಸಿಲ್ವಾ, ಸನತ್ ಜಯಸೂರ್ಯ, ದಿಲ್ಶನ್ ಮುನವೀರ, ಅಸೆಲಾ ಗುಣರತ್ನೆ, ಇಸುರು ಉದಾನ, ನುವಾನ್ ಕುಲಶೇಖರ, ಇಶಾನ್ ಜಯರತ್ನ

ಇಂಡಿಯಾ ಲೆಜೆಂಡ್ಸ್ ಸಂಭಾವ್ಯ ಆಡುವ ಬಳಗ: ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಮನ್‌ಪ್ರೀತ್ ಗೋನಿ, ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ರಾಜೇಶ್ ಪವಾರ್, ಮತ್ತು ರಾಹುಲ್ ಶರ್ಮಾ

ಪಿಚ್‌ ರಿಪೋರ್ಟ್

ಪಿಚ್‌ ರಿಪೋರ್ಟ್

ರಾಯ್‌ಪುರದಲ್ಲಿ ಈ ಪಂದ್ಯ ನಡೆಯಲಿದ್ದು ಈ ಮೈದಾನ ಬ್ಯಾಟಿಂಗ್‌ಗೆ ಅತ್ಯುತ್ತಮ ವೇದಿಕೆಯಾಗಿದೆ. ಇತ್ತೀಚೆಗೆ ನಡೆದ ಪಂದ್ಯಗಳನ್ನು ನೋಡಿದರೆ ಈ ಮೈದಾನದಲ್ಲಿ 170 ರನ್‌ಗಳನ್ನು ಕೂಡ ಬೆನ್ನಟ್ಟಿದ ಉದಾಹರಣೆಗಳು ಇದೆ. ಇನ್ನು ಇಂಡಿಯಾ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡಗಳಲ್ಲಿ ಸಾಕಷ್ಟು ಸ್ಪೋಟಕ ಆಟಗಾರರ ದೊಡ್ಡ ಪಡೆಯೇ ಇದ್ದು ಈ ಪಂದ್ಯದಲ್ಲಿ ರನ್‌ ಮಳೆಯೇ ಹರಿಯುವ ಸಾಧ್ಯತೆಯಿದೆ.

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್

ಇಂಡಿಯಾ ಲೆಜೆಂಡ್ಸ್: ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಸುಬ್ರಮಣ್ಯಂ ಬದರಿನಾಥ್, ಸ್ಟುವರ್ಟ್ ಬಿನ್ನಿ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್ ಮತ್ತು ರಾಹುಲ್ ಶರ್ಮಾ.

ಶ್ರೀಲಂಕಾ ಲೆಜೆಂಡ್ಸ್: ತಿಲಕರತ್ನೆ ದಿಲ್ಶನ್ (ನಾಯಕ), ಕೌಶಲ್ಯ ವೀರರತ್ನೆ, ಮಹೇಲ ಉದವಟ್ಟೆ, ರುಮೇಶ್ ಸಿಲ್ವಾ, ಅಸೆಲಾ ಗುಣರತ್ನೆ, ಚಾಮರ ಸಿಲ್ವಾ, ಇಸುರು ಉದಾನ, ಚಾಮರ ಕಪುಗೆಡೆರಾ, ಚಮಿಂದಾ ವಾಸ್, ಚತುರಂಗ ಡಿ ಸಿಲ್ವಾ, ಚಿಂತಕ ಜಯಸಿಂಗ್, ಧಮ್ಮಿಕಾ ಪ್ರಸಾದ್, ದಿಲ್ರುವಾನ್ ಪೆರೇರಾ, ದಿಲ್ಶಾನ್ ಮುನವೀರ, ಇಶಾನ್ ಜಯರತ್ನೆ, ಜೀವನ್ ಮೆಂಡಿಸ್, ನುವಾನ್ ಕುಲಸೇಕರ, ಸನತ್ ಜಯಸೂರ್ಯ, ಉಪುಲ್ ತರಂಗ, ತಿಸಾರ ಪೆರೇರಾ

For Quick Alerts
ALLOW NOTIFICATIONS
For Daily Alerts
Story first published: Saturday, October 1, 2022, 12:35 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X