ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಆಸ್ಟ್ರೇಲಿಯಾ ದಿಗ್ಗಜರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಇಂಡಿಯಾ ಲೆಜೆಂಡ್ಸ್

RSWS 2022: India Legends won Semi Final match against Australia Legends by 5 wickets entered Final

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಆವೃತ್ತಿಯಲ್ಲಿಯೂ ಇಂಡಿಯಾ ಲೆಜೆಂಡ್ಸ್ ತಂಡ ಫೈನಲ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಹಾಲಿ ಚಾಂಪಿಯನ್ ಆಗಿರುವ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ಈ ಬಾರಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡವನ್ನು ಎದುರಿಸಿತ್ತು. ಈ ಮುಖಾಮುಖಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಡಿಯಾ ಲೆಜೆಂಡ್ಸ್ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿದೆ.

ಬುಧವಾರ ಆರಂಭಗೊಂದಿದ್ದ ಈ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡಿದ ಕಾರಣದಿಂದಾಗಿ ಗುರುವಾರಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಯಾವುದೇ ಓವರ್‌ಗಳ ಕಡಿತವಿಲ್ಲದೆ ಇಂದು ಪಂದ್ಯ ಮುಂದುವರಿದಿದ್ದು ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ ನೀಡಿದ ಸವಾಲಿನ ಗುರಿಯನ್ನು ಇಂಡಿಯಾ ಲೆಜೆಂಡ್ಸ್ ಮೀರಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಇಂಡಿಯಾ ಲೆಜೆಂಡ್ಸ್ ಪರವಾಗಿ ನಮನ್ ಓಜಾ ಅಜೇಯ 90 ರನ್‌ಗಳ ಕೊಡುಗೆ ನೀಡಿದರೆ, ಇರ್ಫಾನ್ ಪಠಾಣ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!

172 ರನ್‌ಗಳ ಗುರಿ ನೀಡಿದ ಆಸ್ಟ್ರೇಲಿಯಾ ಲೆಜೆಂಡ್ಸ್

172 ರನ್‌ಗಳ ಗುರಿ ನೀಡಿದ ಆಸ್ಟ್ರೇಲಿಯಾ ಲೆಜೆಂಡ್ಸ್

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಲೆಜೆಂಡ್ಸ್ ತಂಡ ಹೇಳಿಕೊಳ್ಳುವಂತಾ ಯಶಸ್ಸು ಆರಂಭದಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟವನ್ನು ನೀಡಿತ್ತು. ನಾಯಕ ಶೇನ್ ವಾಟ್ಸನ್ 21 ಎಸೆತಗಳಲ್ಲಿ 30 ರನ್‌ಗಳಿಸಿದರೆ ಡೂಲನ್ 35 ರನ್‌ಗಳ ಕೊಡುಗೆ ನೀಡಿದರು. ಇನ್ನು ಬೆನ್ ಡಂಕ್ 26 ಎಸೆತಗಳಲ್ಲಿ 46 ರನ್ ಸಿಡಿಸಿ ಮಿಂಚಿದ್ದರು. ಅಂತಿಮ ಹಂತದಲ್ಲಿ ಕ್ಯಾಮರೂನ್ ವೈಟ್ 18 ಎಸೆತಗಳಲ್ಲಿ 30 ರನ್ ಸಿಡಿಸುವ ಮೂಲಕ 172 ರನ್‌ಗಳ ಸವಾಲಿನ ಗುರಿ ನೀಡಲು ಕಾರಣವಾದರು.

ನಮನ್ ಓಜಾ ಏಕಾಂಗಿ ಹೋರಾಟ

ನಮನ್ ಓಜಾ ಏಕಾಂಗಿ ಹೋರಾಟ

ಇನ್ನು ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ ನೀಡಿದ ಸವಾಲಿನ ಮೊತ್ತ ಬೆನ್ನಟ್ಟಿದ ಇಂಡಿಯಾ ಲೆಜೆಂಡ್ಸ್ ತಂಡ ಸಾಧಾರಣ ಆರಂಭವನ್ನು ಪಡೆಯಿತು. ನಾಯಕ ಸಚಿನ್ ತೆಂಡೂಲ್ಕರ್ 10 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ, ಸುರೇಶ್ ರೈನಾ 11 ಯುವರಾಜ್ ಸಿಂಗ್ 18, ಸ್ಟುವರ್ಟ್ ಬಿನ್ನಿ 2, ಯೂಸುಫ್ ಪಠಾಣ್ 1 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮತ್ತೊಂದು ತುದಿಯಲ್ಲಿದ್ದ ಆರಂಭಿಕ ಆಟಗಾರ ಏಕಾಂಗಿಯಾಗಿ ಹೋರಾಟ ನಡೆಸುತ್ತಾ ಬ್ಯಾಟಿಂಗ್ ಮುಂದುವರಿಸಿದ್ದರು.

ಸಾಥ್ ನೀಡಿದ ಇರ್ಫಾನ್ ಪಠಾಣ್

ಸಾಥ್ ನೀಡಿದ ಇರ್ಫಾನ್ ಪಠಾಣ್

ಯೂಸುಫ್ ಪಠಾಣ್ ವಿಕೆಟ್ ಕಳೆದುಕೊಂಡಾಗ ಇಂಡಿಯಾ ಲೆಜೆಂಡ್ಸ್ ತಂಡ 15.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿತ್ತು. ಮುಂದಿನ 26 ಎಸೆತಗಳಲ್ಲಿ 47 ರನ್‌ಗಳನ್ನು ಗಳಿಸುವ ಸವಾಲು ಇಂಡಿಯಾ ಲೆಜೆಂಡ್ಸ್ ಮುಂದಿತ್ತು. ಈ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಇರ್ಫಾನ್ ಪಠಾಣ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಪೋಟಕವಾಗಿ ಬ್ಯಾಟ್ ಬೀಸಿದ ಅವರು ಕೇವಲ 12 ಎಸೆತಗಳಲ್ಲಿ 37 ರನ್‌ಗಳನ್ನು ಸಿಡಿಸಿದರು. ಎರಡು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳನ್ನು ಈ ಇನ್ನಿಂಗ್ಸ್ ಹೊಂದಿತ್ತು. ಇನ್ನು ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿದ ನಮನ್ ಓಜಾ 62 ಎಸೆತಗಳಲ್ಲಿ 90 ರನ್ ಸಿಡಿಸಿ ಗೆಲುವಿನ ರೂವಾರಿಯೆನಿಸಿದರು. ಇನ್ನೂ 4 ಎಸೆತಗಳು ಬಾಕಿಯಿರುವಂತೆಯೇ ಭಾರತ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು ಫೈನಲ್‌ಗೆ ಪ್ರವೇಶ್ ಪಡೆದುಕೊಂಡಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಇಂಡಿಯಾ ಲೆಜೆಂಡ್ಸ್ ಪ್ಲೇಯಿಂಗ್ XI: ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ರಾಜೇಶ್ ಪವಾರ್, ರಾಹುಲ್ ಶರ್ಮಾ, ಮುನಾಫ್ ಪಟೇಲ್, ಅಭಿಮನ್ಯು ಮಿಥುನ್
ಬೆಂಚ್: ಎಸ್ ಬದ್ರಿನಾಥ್, ಮನ್‌ಪ್ರೀತ್ ಗೋನಿ, ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್, ರವಿ ಗಾಯಕ್ವಾಡ್

ಆಸ್ಟ್ರೇಲಿಯಾ ಲೆಜೆಂಡ್ಸ್: ಶೇನ್ ವ್ಯಾಟ್ಸನ್ (ನಾಯಕ), ಅಲೆಕ್ಸ್ ಡೂಲನ್, ಬೆನ್ ಡಂಕ್, ಕ್ಯಾಲಮ್ ಫರ್ಗುಸನ್, ನಾಥನ್ ರಿಯರ್ಡನ್, ಕ್ಯಾಮೆರಾನ್ ವೈಟ್, ಬ್ರಾಡ್ ಹ್ಯಾಡಿನ್ (ವಿಕೆಟ್ ಕೀಪರ್), ಬ್ರೈಸ್ ಮೆಕ್‌ಗೇನ್, ಜೇಸನ್ ಕ್ರೆಜ್ಜಾ, ಡಿರ್ಕ್ ನ್ಯಾನೆಸ್, ಬ್ರೆಟ್ ಲೀ
ಬೆಂಚ್: ಬ್ರಾಡ್ ಹಾಡ್ಜ್, ಚಾಡ್ ಸೇಯರ್ಸ್, ಸ್ಟುವರ್ಟ್ ಕ್ಲಾರ್ಕ್, ಜಾನ್ ಹೇಸ್ಟಿಂಗ್ಸ್, ಜಾರ್ಜ್ ಹಾರ್ಲಿನ್

Story first published: Thursday, September 29, 2022, 19:53 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X