ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದು ಹೇಗೆ: ಮೊದಲ ಬಾರಿಗೆ ಬಹಿರಂಗವಾಗಿ ಶ್ರೀಶಾಂತ್ ಹೇಳಿಕೆ

ಐಪಿಎಲ್ ಇತಿಹಾಸದ ಅತ್ಯಂತ ಕಹಿ ಘಟನೆಯೆಂದರೆ ಅದು ಸ್ಪಾಟ್ ಫಿಕ್ಸ್ಂಗ್ ಪ್ರಕರಣ. ಇಡೀ ಕ್ರಿಕೆಟ್ ಜಗತ್ತು ತಲೆ ತಗ್ಗಿಸುವಂತಾ ಘಟನೆ ಐಪಿಎಲ್‌ನಲ್ಲಿ ನಡೆದಿತ್ತು. ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಅಂದಿನ ಭಾರತೀಯ ತಂಡದ ಸ್ಟಾರ್ ಆಟಗಾರನಾಗಿದ್ದ ಎಸ್ ಶ್ರೀಶಾಂತ್ ಸಹಿತ ಮತ್ತಿಬ್ಬರು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಬಂಧನಕ್ಕೊಳಗಾಗಿದ್ದರು. ಈ ಘಟನೆಯ ಬಗ್ಗೆ ಶ್ರೀಶಾಂತ್ ಮಾತನಾಡಿದ್ದು ನಾನು ಯಾಕಾಗಿ 10 ಲಕ್ಷಕ್ಕೆ ಇಂಥಾ ಕೆಲಸ ಮಾಡಲಿ ಎಂದಿದ್ದಾರೆ.

ಎಸ್ ಶ್ರೀಶಾಂತ್ ಭಾರತ ಎರಡು ಭಾರಿ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯನಾಗಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ತಂಡದ ಸದಸ್ಯರಾಗಿದ್ದರು. ಆದರೆ ನಾನು ಅಂಥಾ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬ ಸಂಗತಿಯನ್ನು ಶ್ರೀಶಾಂತ್ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಟಿ20 ವಿಶ್ವಕಪ್ ತಂಡದ ಆಯ್ಕೆಯ ನಿರ್ಧಾರದ ಬಗ್ಗೆ ಗಂಭೀರ ಪ್ರಶ್ನೆ ಮುಂದಿಟ್ಟ ಸೆಹ್ವಾಗ್ಟಿ20 ವಿಶ್ವಕಪ್ ತಂಡದ ಆಯ್ಕೆಯ ನಿರ್ಧಾರದ ಬಗ್ಗೆ ಗಂಭೀರ ಪ್ರಶ್ನೆ ಮುಂದಿಟ್ಟ ಸೆಹ್ವಾಗ್

ಈ ಪ್ರಕರಣದ ಬಗ್ಗೆ ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಈ ಇಡೀ ದೃಷ್ಟಾಂತದ ಬಗ್ಗೆ ಶ್ರೀಶಾಂತ್ ಹೇಳಿದ್ದೇನು? ಮುಂದೆ ಓದಿ..

"ಈ ಘಟನೆಯ ಬಗ್ಗೆ ವಿವರಣೆಯನ್ನು ನೀಡುತ್ತಿರುವ ಮೊದಲ ಸಂದರ್ಶನ ಇದು. ನಾನು ಆ ಒಂದು ಓವರ್‌ನಲ್ಲಿ 14 ರನ್‌ಗಳನ್ನು ನೀಡಿದ್ದೆ. ಐದು ರನ್‌ಗಳೀಗಾಗಿ ನಾಲ್ಕು ಎಸೆತಗಳನ್ನು ಎಸೆದಿದ್ದೆ. ನೋ ಬಾಲ್ ಇಲ್ಲ, ವೈಡ್ ಬಾಲ್ ಇಲ್ಲ. ಆ ಐಪಿಎಲ್ ಆವೃತ್ತಿಯಲ್ಲಿ ನಾನು ಒಂದೇ ಒಂದು ನಿಧಾನದ ಎಸೆತವನ್ನು ಕೂಡ ಎಸೆದಿರಲಿಲ್ಲ. ಕಾಲಿನ ಬೆಳಿಗೆ 12 ಸರ್ಜರಿ ಆಗಿದ್ದರೂ ನಾನು ಪ್ರತಿ ಗಂಟೆಗೆ 130 ಕಿ.ಮೀ ಅಧಿಕ ವೇಗದಲ್ಲಿ ಬಾಲ್ ಎಸೆದಿದ್ದೆ" ಎಂದಿದ್ದಾರೆ ಶ್ರೀಶಾಂತ್. ಈ ಸಂದರ್ಭದಲ್ಲಿ ಗಾಯದಿಂದ ವಾಪಾಸಾಗಿ ಟೀಮ್ ಇಂಡಿಯಾಗೆ ಮರಳಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ ಶ್ರೀಶಾಂತ್.

"2013ರಲ್ಲಿ ನಾನು ಆಗಲೇ ಇರಾನಿ ಟ್ರೋಫಿಯಲ್ಲಿ ಆಡಿದ್ದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲು ಎದುರುನೋಡುತ್ತಿದ್ದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಈ ಸರಣಿಯಲ್ಲಿ ನಾವು ಗೆಲ್ಲು ಬಯಸಿದ್ದೆವು. ಆ ಸರಣಿಯಲ್ಲಿ ಆಡಬೇಕೆಂಬುದು ನನ್ನ ಉದ್ದೇಶವಾಗಿತ್ತು. ಅಂಥಾ ವ್ಯಕ್ತಿ ನಾನು ಹಾಗಿದ್ದ ಮೇಲೆ ನಾನ್ಯಾಕೆ ಇಂಥಾ ಕೆಲಸ ಮಾಡಬಲ್ಲ. ಅದೂ ಕೂಡ 10 ಲಕ್ಷಕ್ಕೆ. ನಾನೇನೂ ದೊಡ್ಡದಾಗಿ ಮಾತನಾಡ್ತಿಲ್ಲ. ಆದರೆ ನಾನು ಪಾರ್ಟಿಯನ್ನು ಮಾಡುತ್ತಿದ್ದಾಗ 2 ಲಕ್ಷ ರೂಪಾಯಿಯ ಬಿಲ್ಲನ್ನು ಹೊಂದಿದ್ದೆ" ಎಂದು ಪ್ರಕರಣದ ಬಗ್ಗೆ ಶ್ರೀಶಾಂತ್ 'ಸ್ಪೋರ್ಟ್ಸ್ ಕೀಡಾ' ಜೊತೆಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.

ನನ್ನ ಪಾರ್ಟಿ ಲೈಫ್ ಕಂಟಕವಾಯಿತು: ಈ ಸಂದರ್ಭದಲ್ಲಿ ಶ್ರೀಶಾಂತ್ "ನಾನು ಈ ಪ್ರಕರಣದಲ್ಲಿ ಸಿಲುಕಲು ತನ್ನ ಪಾರ್ಟಿ ಲೈಫ್ ಕಾರಣವಾಯಿತು. ಅದು ನನ್ನಿಂದಾದ ತಪ್ಪಾಗಿತ್ತು. ನಾನು ನನ್ನ ಜೊತೆಗಿದ್ದವರನ್ನು ನಂಬಿದ್ದೆ. ಅವ್ರೆಲ್ಲರೂ ಕ್ರಿಕೆಟ್‌ಗೆ ಸಂಬಂಧಿಸಿದವರೇ ಆಗಿದ್ದರು. ಆದರೆ ಅವರೆಲ್ಲಾ ಏನೆಲ್ಲಾ ಮಾಡುತ್ತಿದ್ದರು ಎಂದು ನನಗೆ ತಿಳಿದಿರಲಿಲ್ಲ. ಆ ಪ್ರಕರಣದಲ್ಲಿ ನನ್ನ ಜೊತೆಗೆ ಆಗ ನನ್ನ ಗೆಳೆಯನಾಗಿದ್ದವನೇ 'ಬುಕ್ಕಿ' ಎಂದು ಕರೆಸಿಕೊಂಡಿದ್ದ. ಹೊರ ಜಗತ್ತಿಗೆ ನಾನು ಆ ಬುಕ್ಕಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೆ, ಆತನ ಜೊತೆಗೆ ಪ್ರಯಾಣಿಸುತ್ತಿದ್ದೆ ಎಂಬಂತೆ ಬಿಂಬಿತವಾಯಿತು. ಆ ಸಂದರ್ಭದಲ್ಲಿ ನಾನು ಆತನೊಂದಿಗೆ ಇರಲಿಲ್ಲ ಎಂದು ಸಾಬೀತುಪಡಿಸುವುದು ನನಗೆ ಕಷ್ಟವಾಗಿತ್ತು" ಎಂದಿದ್ದಾರೆ ಶ್ರೀಶಾಂತ್.

KL ರಾಹುಲ್ ನಾವೆಲ್ರೂ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡ್ತೇವೆ | Oneindia Kannada

2005ರಲ್ಲಿ ಶ್ರೀಶಾಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾಗ್ಪುದರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. 2007ರ ಟಿ20 ವಿಶ್ವಕಪ್‌ನ ಸದಸ್ಯರಾಗಿದ್ದ ಶ್ರೀಶಾಂತ್ ಫೈನಲ್ ಪಂದ್ಯದಲ್ಲಿ ಮಿಸ್ಬಾ ಉಲ್ ಹಕ್ ಕ್ಯಾಚ್ ಪಡೆಯುವ ಮೂಲಕ ಟ್ರೋಫಿ ಭಾರತವ ವಿಶ್ವಕಪ್ ಎತ್ತಿ ಹಿಡಿದಿತ್ತು. ಅದಾದ ನಾಲ್ಕು ವರ್ಷಗಳ ನಂತರ 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಎತ್ತಿ ಹಿಡಿದಾಗಲೂ ಶ್ರೀಶಾಂತ್ ಭಾರತೀಯ ಕ್ರಿಕೆಟ್ ತಂಡದ ಆಡುವ ಬಳಗದ ಸದಸ್ಯನಾಗಿದ್ದರು. ಒಟ್ಟಾರೆಯಾಗಿ ಶ್ರೀಶಾಂತ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ 169 ವಿಕೆಟ್ ಸಂಪಾದಿಸಿದ್ದಾರೆ ಶ್ರೀಶಾಂತ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, September 28, 2021, 14:33 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X