ಆ ದಿನ ಸಚಿನ್ ಎಲ್ಲವನ್ನೂ ಮರೆತು ಸಂಭ್ರಮದಲ್ಲಿ ಕುಣಿದಾಡಿದ್ದರು: ಹರ್ಭಜನ್

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಜೀವನದ ವಿಶೇಷ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಆ ದಿನವನ್ನು ನೆನಪಿಸಿಕೊಂಡಾಗ ನನ್ನ ಮೈ ಈಗಲೂ ರೋಮಾಂಚನವಾಗುತ್ತದೆ ಎಂದಿದ್ದಾರೆ ಹರ್ಭಜನ್ ಸಿಂಗ್. ವಿಶ್ವಕಪ್ ಗೆಲುವಿನ ಸಂದರ್ಭವನ್ನು ಅವರು ನೆನಪಿಸಿಕೊಂಡು ಈ ರೀತಿ ಹೇಳಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹರ್ಭಜನ್ ಸಿಂಗ್ ವಿಶ್ವಕಪ್ ಗೆಲುವಿನ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಆ ದಿನ ನಾನು ಚಾಂಪಿಯನ್ನರಿಗೆ ಕೊಡುವ ಪದಕವನ್ನು ಕೊರಳಿಗೆ ಹಾಕಿಕೊಂಡೇ ಮಲಗಿದ್ದೆ ಬೆಳಗ್ಗೆ ಎದ್ದು ಆ ಪದಕವನ್ನು ನೋಡಿದಾಗ ಮತ್ತೆ ನನ್ನ ಸಂಭ್ರಮ ಹೆಚ್ಚಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಆ ಗೆಲುವಿನ ಸಂದರ್ಭವನ್ನು ಅನುಭವಿಸಿದ ರೀತಿಯನ್ನು ಕೂಡ ಹರ್ಭಜನ್ ಸಿಂಗ್ ಹೇಳಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಆ ಪರಿಯಾಗಿ ಸಂಭ್ರಮಿಸಿದ್ದು ನಾನು ಅವತ್ತೇ ನೋಡಿದ್ದು, ಸುತ್ತಲು ಯಾರಿದ್ದಾರೆ ಯಾರಿಲ್ಲ ಎಂಬ ಪರಿವೆಯೇ ಇಲ್ಲದೆ ಸಚಿನ್ ಆ ಕ್ಷಣವನ್ನು ಅನುಭವಿಸಿದ್ದರು. ಸಚಿನ್ ಹಾಗೆ ಕುಣಿದು ಸಂತಸಪಟ್ಟ ಆ ಸಂದರ್ಭವೂ ನನ್ನ ಕಣ್ಣ ಮುಂದೇ ಹಾಗೆಯೇ ಇದೆ ಎಂದು ಭಜ್ಜಿ ಹೇಳಿಕೊಂಡಿದ್ದಾರೆ.

ಅದು ನಮ್ಮೆಲ್ಲರ ಕನಸಾಗಿತ್ತು. ಎಲ್ಲರೂ ಆ ಕನಸನ್ನು ನನಸುಗೊಳಿಸುವಲ್ಲಿ ಯಶಸ್ವಿಯಾಗಿದ್ದೆವು, ಅದೊಂದು ಮರೆಯಲಾಗದ ಕ್ಷಣ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಎಲ್ಲರ ಮುಂದೆ ಕಣ್ಣೀರಿಟ್ಟ ಮೊದಲ ಸಂದರ್ಭ ಅದು ಎಂದು ಹರ್ಣಜನ್ ಸಿಂಗ್ ಹೇಳಿದ್ದಾರೆ.

ವಿಶ್ವಕಪ್ ಗೆದ್ದ ಸಂದರ್ಭ ನನ್ನ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ಸಂದರ್ಭ ಎಂದು ಸಚಿನ್ ತೆಂಡೂಲ್ಕರ್ ಕೂಡ ಈ ಹಿಂದೆ ಹೇಳಿಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Thursday, April 9, 2020, 15:38 [IST]
Other articles published on Apr 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X