ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

R. ಅಶ್ವಿನ್‌ರನ್ನ ಏಕದಿನ ತಂಡದಲ್ಲಿ ಸೇರಿಸಿಕೊಂಡಿದ್ದೇ ಸೋಲಿಗೆ ಕಾರಣ: ಸಂಜಯ್ ಮಂಜ್ರೇಕರ್

R ashwin

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ ಸರಣಿ ಸೋತ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯನ್ನ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗದೆ ವೈಟ್ ವಾರ್ಶ ಮುಖಭಂಗ ಎದುರಿಸಿತು. ಟೆಸ್ಟ್ ಸರಣಿಯನ್ನ 1-2 ಅಂತರದಲ್ಲಿ ಸೋತ ಭಾರತ, ಏಕದಿನ ಸರಣಿಯಲ್ಲಿ ಈಗಾಗಲೇ 0-3 ಅಂತರದಲ್ಲಿ ಮುಗ್ಗರಿಸಿತು.

ಪಾರ್ಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 31 ರನ್‌ಗಳಿಂದ ಪಂದ್ಯವನ್ನ ಸೋತರೆ, ಎರಡನೇ ಏಕದಿನ ಪಂದ್ಯದಲ್ಲಿ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯದಲ್ಲಿ ಸ್ವಲ್ಪ ಹೋರಾಟದ ಪ್ರದರ್ಶನ ಕಂಡು ಬಂದರೂ ಸಹ ಭಾರತ ಗೆಲುವಿನ ದಡ ತಲುಪಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ 3-0 ಅಂತರದಲ್ಲಿ ಟೂರ್ನಿ ಗೆದ್ದಿತು.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನ ಪಾಕಿಸ್ತಾನ ಸೋಲಿಸಲಿದೆ: ಶೋಯೆಬ್ ಅಕ್ತರ್ ಭವಿಷ್ಯಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನ ಪಾಕಿಸ್ತಾನ ಸೋಲಿಸಲಿದೆ: ಶೋಯೆಬ್ ಅಕ್ತರ್ ಭವಿಷ್ಯ

ಈ ಏಕದಿನ ಸರಣಿಯಲ್ಲಿ ಐದು ವರ್ಷಗಳ ಬಳಿಕ ಟೀಂ ಇಂಡಿಯಾ ಲಿಮಿಟೆಡ್ ಓವರ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದ ರವಿಚಂದ್ರನ್ ಅಶ್ವಿನ್ ಪ್ರದರ್ಶನ ಕುರಿತಾಗಿ ಮಂಜ್ರೇಕರ್ ಟೀಕಿಸಿದ್ದಾರೆ. ಎರಡು ಏಕದಿನ ಪಂದ್ಯದಲ್ಲಿ ಅಶ್ವಿನ್ ಯಾವುದೇ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಅಶ್ವಿನ್ 53 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್‌ನಲ್ಲಿ ಕೇವಲ 7 ರನ್‌ ಕಲೆಹಾಕಿದ್ರು. ಇನ್ನು ಪಾರ್ಲ್‌ನಲ್ಲೇ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಶ್ವಿನ್ ವಿಕೆಟ್‌ ಕೂಡ ಪಡೆಯಲು ಸಾಧ್ಯವಾಗದೇ 68 ರನ್‌ಗಳನ್ನ ಎದುರಾಳಿಗೆ ಬಿಟ್ಟುಕೊಟ್ಟರು. ಹೀಗಾಗಿ ಸರಣಿ ಸೋತ ಭಾರತ ಅಂತಿಮ ಪಂದ್ಯದಲ್ಲಿ ನಾಲ್ಕು ಬದಲಾವಣೆ ಮಾಡಿತು. ಇದ್ರಲ್ಲಿ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಯಿತು.ಆದ್ರೆ ಈ ಪಂದ್ಯದಲ್ಲೂ ಭಾರತ ಗೆಲ್ಲಲು ಸಾಧ್ಯವಾಗದೇ ನಾಲ್ಕು ರನ್‌ಗಳಿಂದ ಪಂದ್ಯ ಬಿಟ್ಟುಕೊಟ್ಟಿತು.

ಅಶ್ವಿನ್ ಅವರ ಸ್ಥಾನವು ತಂಡಕ್ಕೆ ನೋವುಂಟು ಮಾಡಿದೆ ಮತ್ತು ಏಕದಿನ ಫಾರ್ಮೆಟ್‌ಗೆ ಅವರ ಪುನರಾಗಮನವನ್ನು ವಿಚಿತ್ರವಾಗಿದೆ ಎಂದು ಮಂಜ್ರೇಕರ್ ಉಲ್ಲೇಖಿಸಿದ್ದಾರೆ. ಮೂರು ಪಂದ್ಯಗಳಲ್ಲಿ 73.50 ಸರಾಸರಿಯಲ್ಲಿ ಎರಡು ವಿಕೆಟ್‌ಗಳನ್ನು ಪಡೆದ ಯುಜವೇಂದ್ರ ಚಹಾಲ್ ಏಕದಿನ ಸರಣಿಯಲ್ಲಿನ ಪ್ರದರ್ಶನವನ್ನು ಅವರು ಟೀಕಿಸಿದರು.

"ಕೆಲವು ಕಾರಣಕ್ಕಾಗಿ ಅಶ್ವಿನ್ ವಿಚಿತ್ರವಾಗಿ ಭಾರತದ ಏಕದಿನ ಫಾರ್ಮೆಟ್‌ಗೆ ಮರಳಿದರು. ಅದಕ್ಕೆ ಭಾರತ ಬೆಲೆ ತೆರಬೇಕಾಯಿತು. ಅವರು ಎರಡು ನಿರ್ಣಾಯಕ ಪಂದ್ಯಗಳನ್ನು ಆಡಿದರು, ಹೆಚ್ಚು ಏನನ್ನೂ ಮಾಡಲಿಲ್ಲ. (ಯುಜವೇಂದ್ರ) ಚಾಹಲ್ ಕೂಡ ಯಾವುದೇ ಉತ್ತಮ ಪ್ರದರ್ಶನ ನೀಡಲಿಲ್ಲ. ಪ್ರಸಿದ್ಧ್ ಕೃಷ್ಣ ಅವರನ್ನು ಇನ್ನೂ ಸ್ವಲ್ಪ ಉತ್ತಮ ಆಟವಾಡಬೇಕಿತ್ತು. ಅಲ್ಲದೆ, 50-ಓವರ್‌ಗಳಲ್ಲಿ, ಮೊಹಮ್ಮದ್ ಶಮಿ ಉತ್ತಮ ಆಯ್ಕೆಯಾಗಬಹುದು ಎಂದು ಮಂಜ್ರೇಕರ್ ESPNCricinfo ನಲ್ಲಿ ಹೇಳಿದರು.

ಇನ್ನು ಭುವನೇಶ್ವರ್ ಕುಮಾರ್ ಮತ್ತೆ ಹಳೆ ಫಾರ್ಮ್‌ಗೆ ಮರಳುವುದು ತುಂಬಾನೆ ಕಷ್ಟಸಾಧ್ಯವಾಗಿದೆ. ಆದ್ರೆ ದೀಪಕ್ ಚಹಾರ್ ಪ್ರದರ್ಶನ ಉತ್ತಮವಾಗಿದ್ದು ಭುವಿ ಬದಲು ಅವರ ಆಯ್ಕೆ ಪರಿಗಣಿಸಬಹುದು ಎಂದಿದ್ದಾರೆ.

Union Budget 2022-23: ಕೇಂದ್ರ Budgetನಲ್ಲಿ ನಿರೀಕ್ಷೆ ಇರುವ ಕೆಲವು ಒಳ್ಳೆಯ ಅಂಶಗಳು | Oneindia Kannada

ಈ ದಕ್ಷಿಣ ಆಫ್ರಿಕಾ ಪ್ರವಾಸವು ಪ್ರೋಟೀಸ್ ವಿರುದ್ಧ ಭಾರತ ತಂಡದ ಕಳಪೆ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದು ಮಂಜ್ರೇಕರ್ ಅಂತಿಮವಾಗಿ ತಮ್ಮ ಮಾತನ್ನ ಮುಗಿಸಿದ್ದಾರೆ.

Story first published: Monday, January 24, 2022, 21:54 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X