ಧೋನಿ ನೀಡಿದ ಸಲಹೆಯೇ ಯಶಸ್ಸಿಗೆ ಕಾರಣ ಎಂದ ಶಾರ್ದೂಲ್ ಠಾಕೂರ್

ಟೀಮ್ ಇಂಡಿಯಾದ ವೃಗದ ಬೌಲರ್ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಮೊದಲಿಗೆ ಕಲೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಕ್ಕ ಅವಕಾಶದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಶಾರ್ದೂಲ್ ಬಳಿಕ ಇತ್ತೀಚೆಗೆ ಅಂತ್ಯವಾದ ಇಂಗ್ಲೆಂಡ್ ಸರಣಿಯಲ್ಲಿಯೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಇದೀಗ ಐಪಿಎಲ್‌ಗೆ ಸಜ್ಜಾಗುತ್ತಿರುವ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿ ಸಾಧಿಸುತ್ತಿರುವ ಯಶಸ್ಸಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಿಡಿದ ಸಲಹೆಯೇ ಕಾರಣ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನೀಡಿದ ಸಲಹೆ ಹಾಗೂ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನೀಡಿದ ಪ್ರೋತ್ಸಾಹ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನಿಡಲು ಸಾಧ್ಯವಾಯಿತು ಎಂದಿದ್ದಾರೆ ಶಾರ್ದೂಲ್ ಠಾಕೂರ್. ಇವರ ಪ್ರೋತ್ಸಾಹದ ಕಾರಣದಿಂದಾಗಿ ತಾನು ನಿತ್ಯವೂ ಬೌಲಿಂಗ್ ಅಭ್ಯಾಸದ ಜೊತೆಗೆ ಬ್ಯಾಟಿಂಗ್‌ನತ್ತವೂ ಗಮನಹರಿಸಿದ್ದು ನಿತ್ಯವೂ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸವನ್ನೂ ಮಾಡುವುದಾಗಿ ತಿಳಿಸಿದ್ದಾರೆ. ಈ ಪ್ರಯತ್ನದಿಂದಾಗಿ ಬ್ಯಾಟಿಂಗ್‌ನಲ್ಲಿ ಯಶಸ್ಸು ಸಾಧಿಸಿರುವುದಾಗಿ ತಿಳಿಸಿದ್ದಾರೆ ಶಾರ್ದೂಲ್.

ಟಿ20 ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ನಿರ್ಧಾರ!ಟಿ20 ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ನಿರ್ಧಾರ!

ಶಾರ್ದೂಲ್ ಠಾಕೂರ್‌ಗೆ ಎಂಎಸ್ ಧೋನಿ ಹೊಡೆತಗಳ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ಸಲಹೆಯೊಂದನ್ನು ನೀಡಿದ ವಿಚಾರವನ್ನು ಶಾರ್ದೂಲ್ ವಿವರಿಸಿದ್ದಾರೆ. ಬ್ಯಾಟ್‌ನ ಹಿಡಿತವನ್ನು ಕೆಳಕ್ಕೆ ಇಳಿಸುವ ಮೂಲಕ ಉತ್ತಮ ನಿಯಂತ್ರಣ ಸಾಧಿಸಬಹುದು ಎಂದು ತಿಳಿಸಿದ್ದರು. ಇದ್ನ್ನು ಅಭ್ಯಾಸ ಮಾಡುವ ಜೊತೆಗೆ ತಂಡದ ಮ್ಯಾನೇಜ್‌ಮೆಂಟ್ ಬ್ಯಾಟಿಂಗ್ ಅಭ್ಯಾಸಕ್ಕೆ ಅನುಕೂಲವಾಗಲು ಥ್ರೋ-ಡೌನ್ ತಜ್ಞರಾದ ರಘು ಮತ್ತು ನುವನ್‌ನೊಂದಿಗೆ ಹೆಚ್ಚುವರಿ ಸೆಷನ್‌ಗಳನ್ನು ನೀಡಲು ಅನುಮತಿ ನೀಡಿತ್ತು. ಇದರಿಂದಾಗಿ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡ ಶಾರ್ದೂಲ್ ಠಾಕೂರ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮೂಲಕ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತಿದೆ ಎಂದು ಶಾರ್ದೂಲ್ ವಿವರಿಸಿದ್ದಾರೆ.

ಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳುಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳು

"ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೊಡುಗೆ ಯಾವಾಗಲೂ ತಂಡಕ್ಕೆ ಸಹಾಯ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ 40-50 ರನ್‌ಗಳು ಪಮದ್ಯದ ಫಲಿತಾಂಶದ ಮೇಲೆ ಭಾರೀ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ನಾನು ಟೀಮ್ ಇಂಡಿಯಾ ತಂಡಕ್ಕೆ ಮರಳಿದಾಗ ನಮ್ಮ ಥ್ರೋ-ಡೌನ್ ತಜ್ಞರಾದ ರಘು ಮತ್ತು ನುವಾನ್ ಅವರೊಂದಿಗೆ ಬಹಳ ಅಭ್ಯಾಸ ಮಾಡಿದ್ದೇನೆ. ಅವರು ತುಂಬಾ ವೃಗವಾಗಿ ಚೆಂಡೆಯುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಶಾರ್ದೂಲ್ ಠಾಕೂರ್ ಸಂದರ್ಶನದಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್

ಟೀಮ್ ಇಂಡಿಯಾ ತಂಡದ ಮ್ಯಾನೇಜ್‌ಮೆಂಟ್, ವಿರಾಟ್ ಹಾಗೂ ರೋಹಿತ್ ಶರ್ಮಾ ನನ್ನನ್ನು ಸಾಕಷ್ಟು ಉತ್ತೇಜಿಸಿದ್ದಾರೆ. ಅವರೆಲ್ಲರೂ ನಾನು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳು ಯೋಚಿಸುವ ರೀತಿಯಲ್ಲಿ ಯೋಚಿಸಬೇಕು ಎಂದು ಹೇಳಿದರು. ಒಮ್ಮೆ ನಾನು ಮಹಿ ಭಾಯಿ (ಮಹೇಂದ್ರ ಸಿಂಗ್ ಧೋನಿ) ಕೊಠಡಿಯಲ್ಲಿದ್ದೆ ಈ ಸಂದರ್ಭದಲ್ಲಿ ಅವರ ಬ್ಯಾಟ್ ಹಿಡಿದುಕೊಂಡೆ. ನನ್ನ ಬ್ಯಾಟಿಂಗ್ ಹಿಡಿತ ತುಂಬಾ ಹೆಚ್ಚಾಗಿದೆ ಎಂದ ಅವರು ಶಾಟ್ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ಹಿಡಿತವನ್ನು ಕಡಿಮೆ ಅಂತರದಲ್ಲಿಟ್ಟುಕೊಳ್ಳಲು ಅವರು ನನಗೆ ಸಲಹೆ ನೀಡಿದರು. ಅವರ ಸೂಚನೆಯಂತೆಯೇ ಈಗ ನಾನು ಬ್ಯಾಟ್ ಹಿಡಿಯುತ್ತಿದ್ದು ಅದರಿಂದ ನನ್ನ ಬ್ಯಾಟಿಂಗ್‌ಗೆ ಅನುಕೂಲವಾಗಿದೆ" ಎಂದಿದ್ದಾರೆ ಶಾರ್ದೂಲ್ ಠಾಕೂರ್.

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

ಬುಮ್ರಾರನ್ನು ಎದುರಿಸೋ ತಾಕತ್ತಿರೋದು RCB ಯ ಈ ಆಟಗಾರನಿಗೆ ಮಾತ್ರ | Oneindia Kannada

ಶಾರ್ದೂಲ್ ಠಾಕೂರ್ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಮುಗಿಸಿ ಐಪಿಎಲ್‌ಗೆ ಸಜ್ಜಾಗುತ್ತಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಒಪರ್ ಕಿಂಗ್ಸ್ ಪರವಾಗಿ ಉತ್ತಮ ಪ್ರದರ್ಶನ ನಿಡುವ ಮೂಲಕ ಮಿಂಚಲು ಸಜ್ಜಾಗಿದ್ದಾರೆ. 2020ರ ಆವೃತ್ತಿಯ ಐಪಿಎಲ್‌ನಲ್ಲಿ ಹಿಂದೆಂದೂ ಕಾಣದಷ್ಟು ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 2021ರ ಆವೃತ್ತಿಯಲ್ಲಿ ಅಮೋಘವಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ನಡೆದ ಮೊದಲಾರ್ಧದ 7 ಪಂದ್ಯಗಳ ಪೈಕಿ 5 ಗೆಲುವು ಸಾಧಿಸಿರುವ ಧೋನಿ ಪಡೆಗೆ ಪ್ಲೇಆಫ್ ಅತ್ಯಂತ ಸನಿಹದಲ್ಲಿದೆ. ಈ ಮೂಲಕ ದಾಖಲೆಯ 11ನೇ ಬಾರಿಗೆ ಚೆನ್ನೈ ಪ್ಲೇಆಫ್ ಹಂತಕ್ಕೇರುವ ಅವಕಾಶವಿದೆ. ಮುಂದಿನ ಪಂದ್ಯಗಳಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳನ್ನು ಎದುರಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 16, 2021, 22:33 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X