Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿಯಿಂದ ಶಶಾಂಕ್ ಮನೋಹರ್ ನಿರ್ಗಮನ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಿರಾಳತೆ: ಎನ್ ಶ್ರೀನಿವಾಸನ್

Shashank Manohars Exit A Great Relief For Indian Cricket: N Srinivasan

ಐಸಿಸಿ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಿಂದ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದ ಶಶಾಂಕ್ ಮನೋಹರ್ ರಾಜೀನಾಮೆಯನ್ನು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಐಸಿಸಿ ಮತ್ತು ಬಿಸಿಸಿಐ ಮುಖ್ಯಸ್ಥ ಎನ್ ಶ್ರೀನಿವಾಸನ್ ಇದು ಭಾರತೀಯ ಕ್ರಿಕೆಟ್‌ಗೆ ಸಿಕ್ಕ ಬಹುದೊಡ್ಡ ನಿರಾಳತೆ ಎಂದು ಹೇಳಿಕೆ ನೀಡಿದ್ದಾರೆ.

ಶಶಾಂಕ್ ಮನೋಹರ್ ಐಸಿಸಿ ಕಛೇರಿಯನ್ನು ತೊರೆದದ್ದು ಸಂತಸ ತಂದಿದೆ. ಯಾಕೆಂದರೆ ಭಾರತೀಯ ಕ್ರಿಕೆಟ್‌ಗೆ ಆತ ಕಾರ್ಯಾವಧಿಯಲ್ಲಿ ತುಂಬಾ ಘಾಸಿಯಾಗಿದೆ. ತನಗೆ ಮುಂದಿನ ಅವಧಿಗೆ ಮುಂದಿವರಿಯಲು ಯಾವುದೇ ಅವಕಾಶವಿಲ್ಲ ಎಂದು ಶಶಾಂಕ್ ತಿಳಿದಿದ್ದರು. ಹೀಗಾಗಿಯೇ ಅವರು ಓಡಿ ಹೋದರು ಎಂದು ಶ್ರೀನಿವಾಸನ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಸಂಬಂಧಪಟ್ಟ ಪ್ರತಿಯೊಬ್ಬರೂ ಶಶಾಂಕ್ ಮನೋಹರ್ ನಿರ್ಗಮನದಿಂದ ಸಂತಸಗೊಳ್ಳುತ್ತಾರೆ ಎಂದು ನನಗೆ ತಿಳಿದಿದೆ. ನನ್ನ ವೈಯಕ್ತಿಕ ದೃಷ್ಠಿಕೋನದಲ್ಲಿ ಆತನಿಂದ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಹಾನಿಯಾಗಿದೆ ಎಂದು ಶ್ರೀನಿವಾಸನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಭಾರತದ ಆರ್ಥಿಕತೆಗೆ ಶಶಾಂಕ್ ಮನೋಹರ್ ಕಾರಣದಿಂದ ಸಾಕಷ್ಟು ಹಾನಿಯಾಗಿದೆ. ಭಾರತಕ್ಕೆ ಐಸಿಸಿಯಲ್ಲಿದ್ದ ಅವಕಾಶಕ್ಕೆ ಅವರು ಹಾನಿ ಮಾಡಿದ್ದಾರೆ. ಆತ ಭಾರತ ವಿರೋಧಿ ಧೋರಣೆಯನ್ನು ಹೊಂದಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿದ್ದರು. ಮುಂದೆ ಭಾರತೀಯ ಕ್ರಿಕೆಟ್‌ನಲ್ಲಿ ನಾಯಕತ್ವಕ್ಕೆ ಯಾವುದೇ ಅವಕಾಶ ದೊರೆಯುವುದಿಲ್ಲ ಎಂದು ತಿಳಿದು ಈಗ ಓಡಿ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ಶ್ರೀನಿವಾಸನ್.

ಆತನ ನಿರ್ಗಮನ ಭಾರತೀಯ ಕ್ರಿಕೆಟ್‌ಗೆ ಸಿಕ್ಕ ನಿರಾಳತೆ. ಸಂಕಷ್ಟದ ವಿರುದ್ಧ ಆತ ಹೋರಾಡಲು ಬಯಸುವುದಿಲ್ಲ. 2015ರಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಸಿಸಿಐ ತೊರೆದಿದ್ದರು. ಈಗ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಐಸಿಸಿ ತೊರೆಯುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ಈ ನಿರ್ಗಮನ ಖುಷಿ ತಂದಿದೆ. ಈ ರೀತಿಯ ವ್ಯಕ್ತಿಗಳು ಇನ್ನು ಮುಂದೆ ಐಸಿಸಿನಲ್ಲಿ ಇರಲಾರರು ಎಂದು ಮಾಜಿ ಐಸಿಸಿ ಮುಖ್ಯಸ್ಥರೂ ಆಗಿದ್ದ ಎನ್ ಶ್ರೀನಿವಾಸನ್ ಹೇಳಿದ್ದಾರೆ.

Story first published: Saturday, July 4, 2020, 9:48 [IST]
Other articles published on Jul 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+