SMAT 2021: ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ: ಪಂದ್ಯದ ಆರಂಭ, ನೇರಪ್ರಸಾರದ ಮಾಹಿತಿ

ಸಯ್ಯದ್ ಮುಷ್ತಾಕ್ ಅಲಿ ಟ್ರೋಪಿ ಈಗ ಪ್ರಿ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದೆ. ಕರ್ನಾಟಕ ಸಹಿತ ಆರು ತಂಡಗಳು ಈ ಹಂತದಲ್ಲಿ ಸೆಣೆಸಾಟವನ್ನು ನಡೆಸಲಿದ್ದು ಕ್ವಾರ್ಟರ್ಫೈನಲ್‌ಗೆ ಪ್ರವೇಶಿಸಲು ತೀವ್ರ ಹೋರಾಟವನ್ನು ನಡೆಸಲಿದೆ. ಈ ಕ್ವಾರ್ಟರ್ ಫೈನಲ್ ಪಂದ್ಯಗಳು ಇಂದು (ನವೆಂಬರ್ 16) ನಡೆಯಲಿದೆ.

ಮಹಾರಾಷ್ಟ್ರ, ವಿದರ್ಭ, ಹಿಮಾಚಲ ಪ್ರದೇಶ, ಕೇರಳ, ಕರ್ನಾಟಕ ಹಾಗೂ ಕೇರಳ ತಂಡಗಳು ಈ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲಿದೆ. ಈ ಆರು ತಂಡಗಳು ಮುಖಾಮುಖಿಯಾಗಲಿರುವ ಮೂರು ಪಂದ್ಯಗಳು ಕೂಡ ಇಂದೇ ನಡೆಯಲಿದೆ. ಈ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಲಿದೆ. ಸೋಲು ಕಂಡ ತಂಡ ತನ್ನ ಹೋರಾಟವನ್ನು ಅಂತ್ಯಗೊಳಿಸಲಿದ್ದು ತವರಿಗೆ ವಾಪಾಸಾಗಲಿದೆ.

ಈ ಆರು ತಂಡಗಳ ಪೈಕಿ ವಿದರ್ಭ ಮಾತ್ರವೇ ಅಜೇಯವಾಗಿ ಉಳಿದಿರುವ ತಂಡವಾಗಿದೆ. ಇಂದು ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗೆದ್ದು ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರಿಸುವ ಇರಾದೆಯಲ್ಲಿದೆ ವಿದರ್ಭ. ಎಲ್ಲಾ ಆರು ತಂಡಗಳಿಗೂ ಇಂದಿನ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಹಾಗಾಗಿ ತಮ್ಮ ಎಲ್ಲಾ ಪ್ರಯತ್ನಗಳನ್ನು ಕೂಡ ಇಂದಿನ ಈ ಪ್ರಿ ಕ್ವಾರ್ಟರ್ ಫೈಲ್ ಹಂತದಲ್ಲಿ ತಂಡಗಳು ಮಾಡಲಿದೆ.

ಇನ್ನು ಕರ್ನಾಟಕ ಈ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದೆ. ಮಹಾರಾಷ್ಟ್ರ ಹಾಗೂ ವಿದರ್ಭ ನಡುವಿನ ಪಂದ್ಯ ಬೆಳಿಗ್ಗೆ 8:30ಕ್ಕೆ ಆರಂಭವಾಗಿದ್ದರೆ ಹಿಮಾಚಲ ಪ್ರದೇಶ ಹಾಗೂ ಕೇರಳ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

'ಎಲೈಟ್ ಗ್ರೂಪ್ ಬಿ'ಯಲ್ಲಿ ಇದ್ದ ಕರ್ನಾಟಕ ಲೀಗ್ ಹಂತದಲ್ಲಿ 16 ಅಂಕಗಳನ್ನು ಗಳಿಸುವ ಮೂಲಕ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಕರ್ನಾಟಕ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬೆಂಗಾಲ್ ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಮಾತ್ರವೇ ಕರ್ನಾಟಕ 7 ವಿಕೆಟ್‌ಗಳ ಅಂತರದ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಕೇವಲ 134/8 ರನ್‌ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಯಿತು. ಕರ್ನಾಟಕದ ಪರವಾಗಿ ಮನೀಶ್ ಪಾಂಡೆ ಹಾಘೂ ಕರುಣ್ ನಾಯರ್ ಮಾತ್ರವೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಈ ಗುರಿಯನ್ನು ಬೆಂಗಾಲ್ ತಂಡ 3 ವಿಕೆಟ್ ಕಳೆದುಕೊಂಡು 18 ಓವರ್‌ಗಳಲ್ಲಿ ಗುರಿ ತಲುಪಿತ್ತು.

ನೇರಪ್ರಸಾರದ ಮಾಹಿತಿ:
ಪ್ರೀ ಕ್ವಾರ್ಟರ್ ಫೈನಲ್ 1: ಮಹಾರಾಷ್ಟ್ರ vs ವಿದರ್ಭ ಬೆಳಿಗ್ಗೆ 8:30 (ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ) - ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1HD ಮತ್ತು ಡಿಸ್ನಿ+ ಹಾಟ್‌ಸ್ಟಾರ್.

ಪ್ರೀ ಕ್ವಾರ್ಟರ್ ಫೈನಲ್ 2: ಕರ್ನಾಟಕ vs ಸೌರಾಷ್ಟ್ರ ಮಧ್ಯಾಹ್ನ 1:00 ಗಂಟೆಗೆ (ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ) - ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1HD ಮತ್ತು ಡಿಸ್ನಿ+ ಹಾಟ್‌ಸ್ಟಾರ್.

ಪ್ರೀ ಕ್ವಾರ್ಟರ್ ಫೈನಲ್ 3: ಹಿಮಾಚಲ ಪ್ರದೇಶ vs ಕೇರಳ, ಮಧ್ಯಾಹ್ನ 12:00 ಗಂಟೆಗೆ (ಪಾಲಮ್ ಎ ಸ್ಟೇಡಿಯಂ, ದೆಹಲಿ) - ಡಿಸ್ನಿ+ ಹಾಟ್‌ಸ್ಟಾರ್.

ನೇರಪ್ರಸಾರದ ಮಾಹಿತಿ: ಇನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪ್ರೀ ಕ್ವಾರ್ಟರ್ ಫೈನಲ್‌ನ ಎಲ್ಲಾ ಪಂದ್ಯಗಳು ಕೂಡ ಅಭಿಮಾನಿಗಳಿಗೆ ವೀಕ್ಷಣೆಗೆ ಲಭ್ಯವಿದೆ. ಕರ್ನಾಟಕ ಪಂದ್ಯದ ಲೈವ್ ಸ್ಕೋರ್ ಮಾಹಿತಿ 'ಮೈಖೇಲ್ ಕನ್ನಡ'ದಲ್ಲಿ ಕೂಡ ಪಡೆದುಕೊಳ್ಳಬಹುದು.

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

ಕರ್ನಾಟಕ ಸ್ಕ್ವಾಡ್ ಹೀಗಿದೆ: ಶರತ್ ಬಿಆರ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ರೋಹನ್ ಕದಮ್, ಕರುಣ್ ನಾಯರ್, ರವಿಕುಮಾರ್ ಸಮರ್ಥ್, ಅನಿರುದ್ಧ ಜೋಶಿ, ಕೃಷ್ಣಮೂರ್ತಿ ಸಿದ್ಧಾರ್ಥ್, ಪ್ರವೀಣ್ ದುಬೆ, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಆದಿತ್ಯ ಸೋಮಣ್ಣ, ನಿಹಾಲ್ ಉಳ್ಳಾಲ್, ವಿಜಯಕುಮಾರ್ ವೈಶಾಕ್, ದರ್ಶನ್ ಎಂ.ಬಿ, ಪ್ರತೀಕ್ ಜೈನ್, ಕೆ.ಸಿ ಕರಿಯಪ್ಪ, ವಿ.ಕೌಶಿಕ್, ವಿದ್ಯಾಧರ್ ಪಾಟೀಲ್, ರಿತೇಶ್ ಭಟ್ಕಳ್

For Quick Alerts
ALLOW NOTIFICATIONS
For Daily Alerts
Story first published: Tuesday, November 16, 2021, 9:21 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X