ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕಕ್ಕೆ ಪಂಜಾಬ್ ಸವಾಲು

SMAT 2022 quarterfinals: Karnataka vs Panjab: Mayank Agarwal-led Karnataka will face Mandeep Singh’s Punjab

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ಮಂಗಳವಾರ ನವೆಂಬರ್ 1ರಂದು ಬಲಿಷ್ಠ ಪಂಬಾಬ್ ತಂಡದ ಸವಾಲನ್ನು ಸ್ವೀಕರಿಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಪಂದ್ಯ ನಡೆಯಲಿದ್ದು ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ಬಲಿಷ್ಠ ಪಂಜಾಬ್ ತಂಡದ ಸವಾಲನ್ನು ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದು ಕುತೂಹಲ ಮೂಡಿಸಿದೆ.

ನಿರ್ಣಾಯಕ ಘಟ್ಟದಲ್ಲಿ ಕರ್ನಾಟಕ ತಂಡಕ್ಕೆ ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್ ಅಲಭ್ಯವಾಗಿದ್ದಾರೆ. ತಂಡದ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಪೈಕಿ ಒಬ್ಬರಾಗಿರುವ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ಕರ್ನಾಟಕದ ಬ್ಯಾಟಿಂಗ್‌ನಲ್ಲಿ ನಾಯಕ ಮಯಾಂಕ್ ಮತ್ತು ಮನೀಶ್ ಪಾಂಡೆ ಮೇಲೆ ಹೆಚ್ಚು ಅವಲಂಬಿತವಾಗಿರಲಿದೆ.

T20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗT20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗ

ಕರ್ನಾಟಕದ ಬೌಲಿಂಗ್ ವಿಭಾಗ ವೇಗಿಗಳಾದ ವಿ.ವೈಶಾಕ್ ಮತ್ತು ವಿ.ಕಾವೇರಪ್ಪ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಇಬ್ಬರು ಕೂಡ ತಲಾ 15 ವಿಕೆಟ್‌ಗಳನ್ನು ಈ ಟೂರ್ನಿಯಲ್ಲಿ ಸಂಪಾದಿಸಿದ್ದು ಈ ಬಾರಿಯ ಟೂರ್ನಿಯಲ್ಲಿ ಅತೀ ಗೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಕೆ.ಗೌತಮ್ ಮತ್ತು ವಿ.ಕೌಶಿಕ್ ತಂಡದ ಮತ್ತಿಬ್ಬರು ಪ್ರಮುಖ ಬೌಲರ್‌ಗಳಾಗಿದ್ದಾರೆ.

ಇತ್ತ ಮನ್‌ದೀಪ್ ಸಿಂಗ್ ನಾಯಕತ್ವದ ಪಂಜಾಬ್ ತಂಡ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಹರಿಯಾಣವನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದೆ. ಪ್ರತಿಭಾನ್ವಿತ ಆರಂಭಿಕ ಆಟಗಾರ ಮತ್ತು ಎಡಗೈ ಸ್ಪಿನ್ನರ್ ಅಭಿಷೇಕ್ ಶರ್ಮಾ ಮತ್ತು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿಕೆಟ್‌ಕೀಪರ್-ಬ್ಯಾಟರ್ ಪ್ರಬ್‌ಸಿಮ್ರಾನ್ ಸಿಂಗ್ ಅವರ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಇದು ಕಾರಣ; ಕೊಹ್ಲಿಯನ್ನು ದೂಷಿಸಿದ ಭುವಿ!IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಇದು ಕಾರಣ; ಕೊಹ್ಲಿಯನ್ನು ದೂಷಿಸಿದ ಭುವಿ!

ಇನ್ನು ಪಂಜಾಬ್ ತಂಡದ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಪ್ರಮುಖ ವಿಕೆಟ್ ಟೇಕರ್ ಸಿದ್ಧಾರ್ಥ್ ಕೌಲ್ (18 ವಿಕೆಟ್), ಬಲ್ತೇಜ್ ಸಿಂಗ್ (12) ಮತ್ತು ಸ್ಪಿನ್ನರ್ ಮಯಾಂಕ್ ಮಾರ್ಕಾಂಡೆ (12) ಈ ಮೂವರು ಎದುರಾಳಿಗಳ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಎಲ್‌ಆರ್ ಚೇತನ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಾಸುಕಿ ಬಿ ಆರ್ ಕೌಶಿಕ್, ಶರತ್ರಾ ವೆಂಕಟ್ ಕೌಶಿಕ್, , ದೇವದತ್ ಪಡಿಕ್ಕಲ್

ಪಂಜಾಬ್ ತಂಡ: ಪ್ರಭಾಸಿಮ್ರಾನ್ ಸಿಂಗ್ (wk), ಮನ್ದೀಪ್ ಸಿಂಗ್ (c), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸನ್ವಿರ್ ಸಿಂಗ್, ರಮಣದೀಪ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಹರ್ಪ್ರೀತ್ ಬ್ರಾರ್, ಮಯಾಂಕ್ ಮಾರ್ಕಾಂಡೆ, ಬಲ್ತೇಜ್ ಸಿಂಗ್, ಅಶ್ವನಿ ಕುಮಾರ್, ಅನ್ಮೋಲ್ ಮಲ್ಹೋತ್ರಾ, ನೆಹಾಲ್ ವಧೇರಾ, ಪುಖ್ರಾಜ್ ಮನ್ , ಗೌರವ್ ಚೌಧರಿ, ಗುರುಕೀರತ್ ಸಿಂಗ್ ಮಾನ್, ಸಿದ್ದಾರ್ಥ್ ಕೌಲ್

Story first published: Tuesday, November 1, 2022, 2:30 [IST]
Other articles published on Nov 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X