ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Test rankings: ಪೂಜಾರ ಕೆಳಗಿಳಿಸಿ 3ನೇ ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್

Smith overtakes Pujara to move to third spot in ICC Test rankings

ಬರ್ಮಿಂಗ್‌ಹ್ಯಾಮ್‌, ಆಗಸ್ಟ್ 6: ಭಾರತದ ಟೆಸ್ಟ್ ಸ್ಪೆಷಾಲಿಷ್ಟ್ ಚೇತೇಶ್ವರ ಪೂಜಾರ ಅವರನ್ನು ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಕೆಳಗಿಳಿಸಿದ್ದಾರೆ. ಮಂಗಳವಾರ (ಆಗಸ್ಟ್ 6) ಐಸಿಸಿ ಪ್ರಕಟಿಸಿರುವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸ್ಮಿತ್ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್‌ಗೆ ಮನಮುಟ್ಟುವ ಸಂದೇಶ ಬರೆದ ಕೊಹ್ಲಿನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್‌ಗೆ ಮನಮುಟ್ಟುವ ಸಂದೇಶ ಬರೆದ ಕೊಹ್ಲಿ

ಎಜ್‌ಬಾಸ್ಟನ್‌ನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಮೊದಲ ಆ್ಯಷಸ್ ಟೆಸ್ಟ್‌ನಲ್ಲಿ ಸ್ಮಿತ್ ಎರಡೂ ಇನ್ನಿಂಗ್ಸ್‌ಗಳಲ್ಲೂ ಕ್ರಮವಾಗಿ 144, 142 ರನ್ ಬಾರಿಸಿದ್ದರು. ಸ್ಮಿತ್ ಈ ರನ್ ಸಾಧನೆ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಜಿಗಿತ ಕಾಣಲು ನೆರವು ನೀಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧಕ್ಕೀಡಾಗಿದ್ದ ಸ್ಮಿತ್, ನಿಷೇಧದ ಬಳಿಕ ಆ್ಯಷನ್ ಟೆಸ್ಟ್ ಮೂಲಕ ಮೊದಲ ಟೆಸ್ಟ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತದ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದೆ, ದ್ವಿತೀಯ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, 4ನೇ ಸ್ಥಾನದಲ್ಲಿ ಚೇತೇಶ್ವರ್ ಪೂಜಾರ ಇದ್ದಾರೆ.

2003ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಸೋಲಿಗೆ ಕಾರಣ ಕೊಟ್ಟ ಅಖ್ತರ್‌2003ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಸೋಲಿಗೆ ಕಾರಣ ಕೊಟ್ಟ ಅಖ್ತರ್‌

ಆ್ಯಷಸ್ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ, 284+487 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌, 374+146 ರನ್ ಬಾರಿಸಿ, 251 ರನ್ ಸೋಲನುಭವಿಸಿದೆ. ಆಸ್ಟ್ರೇಲಿಯಾ ಇನ್ನಿಂಗ್ಸ್‌ ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 5+1, ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಆಸೀಸ್‌ನ ನಾಥನ್ ಲಿಯಾನ್ 3+6, ಪ್ಯಾಟ್ ಕಮಿನ್ಸ್ 3+3 ವಿಕೆಟ್‌ನೊಂದಿಗೆ ಮಿಂಚಿದರು.

Story first published: Tuesday, August 6, 2019, 17:43 [IST]
Other articles published on Aug 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X