ಮಹಿಳಾ ಚಾಂಪಿಯನ್ ಶಿಪ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ

Posted By:
Smriti Mandhana, Poonam Yadav star as India win Women's ODI series vs South Africa

ಕಿಂಬರ್ಲಿ, ಫೆಬ್ರವರಿ 07: ಇಲ್ಲಿ ನಡೆದ ಭಾರತ ಮಹಿಳಾ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯ ಗೆಲ್ಲುವ ಮೂಲಕ ಭಾರತಕ್ಕೆ ಸರಣಿ ಗೆಲುವು ಸಾಧಿಸಿದ್ದಲ್ಲದೆ, 2021ರ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಿತು.

ಎರಡನೇ ಏಕದಿನ ಪಂದ್ಯವನ್ನು ಭಾರತವು 178 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ.

ಭಾರತ ಒಡ್ಡಿದ್ದ 303ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ್ತಿ ಲೀ 73ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಉಳಿದಂತೆ ಕಾಪ್ ಅಜೇಯ 17ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲಿಲ್ಲ. ಅಂತಿಮವಾಗಿ 30.5 ಓವರ್ ಗಳಲ್ಲಿ 124 ಸ್ಕೋರಿಗೆ ಆಲೌಟ್ ಆಗಿ ಶರಣಾಯಿತು.

ಭಾರತದ ಪರ ಪೂನಮ್ ಯಾದವ್ ಅವರು 24 ರನ್ನಿಗೆ 4 ವಿಕೆಟ್, ರಾಜೇಶ್ವರಿ ಗಾಯಕ್ವಾಡ್, ಬಿ ಶರ್ಮ ತಲಾ 2 ವಿಕೆಟ್ ಹಾಗೂ ಜೂಲಾನ್ ಗೋಸ್ವಾಮಿ 1 ವಿಕೆಟ್ ಪಡೆದರು.

ವಿಶ್ವದಾಖಲೆ ನಿರ್ಮಿಸಿದ ವೇಗಿ ಜೂಲಾನ್ ಗೋಸ್ವಾಮಿ

ಸ್ಮೃತಿ ಮಂದಾನ ಶತಕ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಆಸರೆಯಾದರು. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಶತಕ ಬಾರಿಸಿದರು. ಸ್ಮೃತಿ ಅವರ 135ರನ್ (14 ಬೌಂಡರಿ, 1 ಸಿಕ್ಸರ್ ) ನೆರವಿನಿಂದ ಭಾರತ 302/3 ಬೃಹತ್ ಮೊತ್ತ ದಾಖಲಿಸಿತು.

ಮೊದಲ ಏಕದಿನ ಪಂದ್ಯದಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸ್ಮೃತಿ ಅವರು 84 ರನ್ ಗಳಿಸಿ ಔಟಾಗಿದ್ದರು.

ಸ್ಮೃತಿ ಮಂದಾನ ಅವರೊಂದಿಗೆ ಅತ್ಯುತ್ತಮ ಜತೆಯಾಟ ಆಡಿದ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 69 ಚೆಂಡು ಎದುರಿಸಿ ಅಜೇಯ 55 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್‌ ಇವೆ.

ಮತ್ತೊಬ್ಬ ಆಟಗಾರ್ತಿ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಮಿಂಚಿನ ಬ್ಯಾಟಿಂಗ್ ನಡೆಸಿ 33 ಬಾಲ್‌ಗೆ 51 ರನ್ ಸಿಡಿಸಿದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, February 7, 2018, 20:19 [IST]
Other articles published on Feb 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ