ಕರಾಚಿ:ಕ್ರಿಕೆಟ್‌ ತಂಡಕ್ಕೆ ಆಯ್ಕೆ ಆಗಲಿಲ್ಲವೆಂದು ಆತ್ಮಹತ್ಯೆ

Posted By:
Son of former Pakistani cricketer commits suicide for not been selected in team

ಕರಾಚಿ, ಫೆಬ್ರವರಿ 21: ಅಂಡರ್‌ 19 ತಂಡಕ್ಕೆ ಆಯ್ಕೆ ಆಗಲಿಲ್ಲವೆಂದು ಬೇಸರಗೊಂಡು ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಮೀರ್ ಹನೀಫ್ ಮಗ ಮಹಮ್ಮದ್ ಜರ್ಯಾಬ್ ನೇ ಮೃತ ಯುವಕ. ಅಂಡರ್‌ 19 ತಂಡಕ್ಕೆ ಆಯ್ಕೆ ಆಗಲೆಂದು ಶ್ರಮಪಟ್ಟಿದ್ದ ಜರ್ಯಾನ್ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಧಾನಗೋಮಡು ಆಯ್ಕೆದಾರರ ಮೇಲೆ ಜಗಳ ವಾಡಿದ್ದ ನಂತರ ರಾತ್ರಿ ಸಮಯ ತನ್ನಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಮೊಹಮ್ಮದ್ ಜರ್ಯಾನ್‌ ಉತ್ತಮ ಆಟಗಾರನಾಗಿದ್ದು ಇವರು ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಕರಾಚಿ ನಗರವನ್ನು ಪ್ರತಿನಿಧಿಸಿದ್ದರು.

'ಕಳೆದ ರಾತ್ರಿ ಜೊತೆಯಾಗಿ ಊಟ ಮಾಡಿದ್ದೆವು. ಮುಹಮ್ಮದ್‌ ತುಂಬ ಒತ್ತಡಕ್ಕೆ ಒಳಗಾಗಿದ್ದ. ಕ್ರಿಕೆಟಿಗರು ನಾಲಾಯಕ್ ವ್ಯಕ್ತಿಗಳು ಎಂದು ಆತ ದೂರಿದ್ದ. ಆಗ ಅವನ ಮನಸ್ಸಿನಲ್ಲಿ ಏನಿತ್ತು ಎಂದು ನನಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ' ಎಂದು ತಂದೆ ಅಮೀರ್ ಹನೀಫ್‌ ಹೇಳಿದ್ದಾರೆ.

'ಎರಡು ತಿಂಗಳ ಹಿಂದೆ ಕರಾಚಿ ಜೂನಿಯರ್ ತಂಡದ ಜೊತೆ ಆತ ಲಾಹೋರ್‌ಗೆ ತೆರಳಿದ್ದ. ಆದರೆ ತೋಳಿನಲ್ಲಿ ನೋವು ಇದೆ ಎಂದು ಹೇಳಿ ಆತನನ್ನು ವಾಪಸ್ ಕಳುಹಿಸಲಾಗಿತ್ತು. ಇದರಿಂದ ಆತ ಬೇಸರಗೊಂಡಿದ್ದ' ಎಂದು ಹನೀಫ್‌ ದೂರಿದರು.

'ಕ್ರಿಕೆಟ್‌ ಅನ್ನು ಆಟವಾಗಿ ಕಾಣಬೇಕು. ನನ್ನ ಮಗನಿಗೆ ಆದ ಗತಿ ಬೇರೆ ಯಾರಿಗೂ ಆಗಬಾರದು' ಎಂದು ಅವರು ನೋವಿನಿಂದ ನುಡಿದಿದ್ದಾರೆ.

Story first published: Wednesday, February 21, 2018, 12:20 [IST]
Other articles published on Feb 21, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ