ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಸೌರವ್ ಗಂಗೂಲಿ ಶತಕ ಬಾರಿಸಿದ್ದ ದಿನವಿದು

Sourav Ganguly smashed ton on Test debut at Lord’s in 1992

ಕೋಲ್ಕತ್ತಾ, ಜೂನ್ 22: 1996ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಾಗ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಮೊದಲ ಟೆಸ್ಟ್‌ನಲ್ಲಿ ಆಡಿಸಿರಲಿಲ್ಲ. ಆ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ ಸೋಲನುಭವಿಸಿತ್ತು.

WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!

ಆದರೆ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಗಂಗೂಲಿಗೆ ಅವಕಾಶ ನೀಡಲಾಗಿತ್ತು. ಬಂಗಾಳ ಹುಲಿ ದಾದಾ ಟೆಸ್ಟ್ ಕ್ರಿಕೆಟ್‌ಗೆ ಅಂದು ಪಾದಾರ್ಪಣೆ ಮಾಡಿದ್ದರು. ಬರೀ ಪಾದಾರ್ಪಣೆ ಮಾಡಿದ್ದಷ್ಟೇ ಅಲ್ಲ, ಮೊದಲ ಟೆಸ್ಟ್ ಪಂದ್ಯದಲ್ಲೇ ಗಂಗೂಲಿ ಆಕರ್ಷಕ ಶತಕ ಬಾರಿಸಿದ್ದರು. ಗಂಗೂಲಿ ಶತಕದ ನೆರವಿನಿಂದ ಆವತ್ತಿನ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು.

ಭಾರತೀಯ ಕ್ರಿಕೆಟ್‌ನಲ್ಲಿ ಗಂಗೂಲಿಗಿಂತಲೂ ದ್ರಾವಿಡ್ ಬೀರಿದ ಪರಿಣಾಮ ದೊಡ್ಡದು: ಗಂಭೀರ್ಭಾರತೀಯ ಕ್ರಿಕೆಟ್‌ನಲ್ಲಿ ಗಂಗೂಲಿಗಿಂತಲೂ ದ್ರಾವಿಡ್ ಬೀರಿದ ಪರಿಣಾಮ ದೊಡ್ಡದು: ಗಂಭೀರ್

ಅಂದ್ಹಾಗೆ, ಗಂಗೂಲಿ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ್ದು ಜೂನ್ 22ರ ಇದೇ ದಿನ. ಅಂದರೆ ಸುಮಾರು 24 ವರ್ಷಗಳ ಹಿಂದೆ ಗಂಗೂಲಿ ವೃತ್ತಿ ಜೀವನದ ಮೊದಲ ಟೆಸ್ಟ್‌ನಲ್ಲಿ ಶತಕ ಪೂರೈಸಿ ಮಿನುಗಿದ್ದರು. ಆವತ್ತು ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ದಾದಾ 301 ಎಸೆತಗಳಲ್ಲಿ 131 ರನ್ ಬಾರಿಸಿದ್ದರು. ಅಂದಿನ ಪಂದ್ಯದಲ್ಲಿ ಗಂಗೂಲಿ ಬಿಟ್ಟರೆ ಗಮನಾರ್ಹ ರನ್ ಗಳಿಸಿದ್ದು ರಾಹುಲ್ ದ್ರಾವಿಡ್ ಮಾತ್ರ (95 ರನ್, 267 ಎಸೆತ).

ಐಪಿಎಲ್‌ಗೆ ಶೀಘ್ರ ಕಮ್‌ಬ್ಯಾಕ್‌ ಮಾಡುವ ಸುಳಿವಿತ್ತ ಎಸ್‌ ಶ್ರೀಶಾಂತ್ಐಪಿಎಲ್‌ಗೆ ಶೀಘ್ರ ಕಮ್‌ಬ್ಯಾಕ್‌ ಮಾಡುವ ಸುಳಿವಿತ್ತ ಎಸ್‌ ಶ್ರೀಶಾಂತ್

ಟಾಸ್ ಗೆದ್ದಿದ್ದ ಮೊಹಮ್ಮದ್ ಅಝರುದ್ದೀನ್ ನಾಯಕತ್ವದ ಭಾರತ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 344-10 (130.3) ಸ್ಕೋರ್ ಮಾಡಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 429-10 (169.3) ಸ್ಕೋರ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 278-9 (121) ಸ್ಕೋರ್ ಮಾಡುವುದರೊಂದಿಗೆ ಈ ಪಂದ್ಯ ಡ್ರಾ ಅನ್ನಿಸಿತ್ತು. ಇದರೊಂದಿಗೆ 3 ಪಂದ್ಯಗಳ ಈ ಟೆಸ್ಟ್ ಸರಣಿ 1-0ಯಿಂದ ಇಂಗ್ಲೆಂಡ್ ವಶವಾಗಿತ್ತು.

Story first published: Tuesday, June 23, 2020, 10:17 [IST]
Other articles published on Jun 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X