ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 2022: ಭಾರತದ ಈ ಮಾಜಿ ಆಟಗಾರನನ್ನು ಭೇಟಿ ಮಾಡಬೇಕು ಎಂದ ಕೇಶವ್ ಮಹಾರಾಜ್

South African Spinner Keshav Maharaj Hailed The MS Dhoni For His Contribution

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಾನುವಾರ (ಅಕ್ಟೋಬರ್ 9) ನಡೆಯಲಿರುವ ಮಹೇಂದ್ರ ಸಿಂಗ್ ಧೋನಿ ತವರು ರಾಂಚಿಯಲ್ಲಿ ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ತಯಾರಿ ನಡೆಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಅವರನ್ನು ಶ್ಲಾಘಿಸಿದರು.

ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ನನ್ನ ಮೊದಲ ಆಯ್ಕೆ ಎಂಬುದರಲ್ಲಿ ಸಂದೇಹವಿಲ್ಲ : ಸಾಬಾ ಕರೀಂಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ನನ್ನ ಮೊದಲ ಆಯ್ಕೆ ಎಂಬುದರಲ್ಲಿ ಸಂದೇಹವಿಲ್ಲ : ಸಾಬಾ ಕರೀಂ

ಸೀಮಿತ ಓವರ್ ಗಳ ಪಂದ್ಯದಲ್ಲಿ ಆಲ್‌ರೌಂಡರ್ ಕೇಶವ್ ಮಹಾರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮೂರು ಟಿ20 ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಮೊದಲನೇ ಏಕದಿನ ಪಂದ್ಯದಲ್ಲಿ 8 ಓವರ್ ಗಳಲ್ಲಿ 1 ವಿಕೆಟ್ ಪಡೆದು ಕೇವಲ 23 ರನ್ ನೀಡುವ ಮೂಲಕ ಭಾರತದ ರನ್‌ ಗಳಿಕೆಗೆ ಕಡಿವಾಣ ಹಾಕಿದ್ದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 9 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಸರಣಿಯ ಎರಡನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ತವರು ರಾಂಚಿ. ಈ ಕಾರಣದಿಂದಲೇ ಕೇಶವ್ ಮಹಾರಾಜ್ ಧೋನಿಯವರನ್ನು ನೆನಪು ಮಾಡಿಕೊಂಡಿದ್ದಾರೆ.

ಅವರಿಂದ ಕಲಿಯುವುದು ಬಹಳಷ್ಟಿದೆ

ಅವರಿಂದ ಕಲಿಯುವುದು ಬಹಳಷ್ಟಿದೆ

ಧೋನಿ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕೇಶವ್ ಮಹಾರಾಜ್, "ಅವರೊಂದಿಗೆ ಆಡಲು ನನಗೆ ಅವಕಾಶ ಸಿಕ್ಕಿಲ್ಲ. ಆದರೆ ಅವರೊಂದಿಗೆ ನಾನು ಮಾತನಾಡಲು ಇಷ್ಟಪಡುತ್ತೇನೆ. ಅವರು ವಿಶ್ವ ದರ್ಜೆಯ ಕ್ರಿಕೆಟಿಗ, ವಿಶೇಷವಾಗಿ ನಾಯಕತ್ವದ ದೃಷ್ಟಿಕೋನದಿಂದ ಅವರ ಕೊಡುಗೆ ಬಹಳಷ್ಟಿದೆ. ಮೈದಾನದಲ್ಲಿ ಅವರದ್ದು ಯಾವಾಗಲೂ ಶಾಂತವಾಗಿರುವ ಗುಣ ಸೇರಿದಂತೆ ಅವರಿಂದ ಕಲಿಯಲು ಇನ್ನೂ ಬಹಳಷ್ಟು ವಿಷಯಗಳಿವೆ." ಎಂದು ಹೇಳಿದ್ದಾರೆ.

T20 World Cup: ಪಾಂಡ್ಯ-ಮ್ಯಾಕ್ಸ್‌ವೆಲ್‌ ನಡುವೆ ಈತನೇ ಉತ್ತಮ ಆಲ್‌ರೌಂಡರ್ ಎಂದ ರಿಕಿ ಪಾಂಟಿಂಗ್

ತಬ್ರೈಜ್ ಶಮ್ಸಿ ಉತ್ತಮ ಬೌಲರ್ ಎಂದ ಕೇಶವ್ ಮಹಾರಾಜ್

ತಬ್ರೈಜ್ ಶಮ್ಸಿ ಉತ್ತಮ ಬೌಲರ್ ಎಂದ ಕೇಶವ್ ಮಹಾರಾಜ್

ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲಿ ತಬ್ರೈಜ್ ಶಮ್ಸಿ ಎಂಟು ಓವರ್‌ಗಳಲ್ಲಿ 89 ರನ್‌ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು. ಏಕದಿನ ಮಾದರಿಯಲ್ಲಿ ಎಡಗೈ ಸ್ಪಿನ್ನರ್ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ದಾಖಲೆಯನ್ನು ಶಮ್ಸಿ ತಮ್ಮದಾಗಿಸಿಕೊಂಡರು. ಶಮ್ಸಿ ಬೌಲಿಂಗ್ ಪ್ರದರ್ಶನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಮಹಾರಾಜ್, ಅವರು ಮುಂದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ಹೇಳಿದ್ದಾರೆ.

"ಸರಣಿಯಲ್ಲಿ ಅವರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಅಂಕಿಅಂಶಗಳು ಬೌಲರ್ ನ ನಿಜವಾದ ಸಾಮರ್ಥ್ಯವನ್ನು ನಿಖರವಾಗಿ ಹೇಳುವುದಿಲ್ಲ. ಅದು ಅವರ ಕೆಟ್ಟ ದಿನವಾಗಿತ್ತೆಂದು ನನಗೆ ಅನಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದ ಶಾರ್ದೂಲ್

ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದ ಶಾರ್ದೂಲ್

ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತೀಯ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ತಂಡವು ಎಂಎಸ್ ಧೋನಿ ಉಪಸ್ಥಿತಿಯನ್ನು ಕಳೆದುಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಧೋನಿ ಅನುಭವ ಮತ್ತು ಪ್ರಭಾವ ತಂಡದ ಮೇಲೆ ಅಷ್ಟರ ಮಟ್ಟಿಗಿತ್ತು ಎಂದು ಅವರು ಹೇಳಿದ್ದಾರೆ.

ರಾಂಚಿಯು ಎಂಎಸ್ ಧೋನಿ ಅವರ ತವರೂರು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ, ಅವರು ಭಾರತವನ್ನು ವಿವಿಧ ಸ್ವರೂಪಗಳಲ್ಲಿ ನಾಯಕತ್ವ ವಹಿಸಿದ್ದಾರೆ ಮತ್ತು ಅನೇಕ ಸ್ಮರಣೀಯ ವಿಜಯಗಳನ್ನು ಬರೆದಿದ್ದಾರೆ.

ಅವರ ಅನುಭವ ತಂಡಕ್ಕೆ ಮುಖ್ಯವಾಗಿತ್ತು

ಅವರ ಅನುಭವ ತಂಡಕ್ಕೆ ಮುಖ್ಯವಾಗಿತ್ತು

ಐಪಿಎಲ್‌ನಲ್ಲಿ ಧೋನಿ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ತಂಡಗಳಲ್ಲಿ ಆಡಿರುವ ಠಾಕೂರ್, ಮಾಜಿ ನಾಯಕನ ಬಗ್ಗೆ ಮಾತನಾಡಿದ್ದಾರೆ.

"ಎಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ ಏಕೆಂದರೆ ಅವರ ಅನುಭವವು ತುಂಬಾ ಮುಖ್ಯವಾಗಿದೆ. ಅವರು 300 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಸಾಕಷ್ಟು ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ. ಅವರು ತುಂಬಾ ಅನುಭವಿ ಆಟಗಾರ. ಅಂತಹ ಆಟಗಾರ ಇರುವುದು ಅಪರೂಪ, ಇಡೀ ತಂಡ ಅವರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತದೆ" ಎಂದು ಅವರು ಹೇಳಿದ್ದಾರೆ.

Story first published: Saturday, October 8, 2022, 22:37 [IST]
Other articles published on Oct 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X