ಶ್ರೀಲಂಕಾದ ಉಪುಲ್ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ

ಕೊಲಂಬೋ: ಶ್ರೀಲಂಕಾದ ಅನುಭವಿ ಆಟಗಾರ ಉಪುಲ್ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ (ಫೆಬ್ರವರಿ 23) ನಿವೃತ್ತಿ ಘೋಷಿಸಿದ್ದಾರೆ. 36 ವರ್ಷ ಹರೆಯದ ತರಂಗ, ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದರು. 2005ರಲ್ಲಿ ಭಾರತ ವಿರುದ್ಧದ ಟೆಸ್ಟ್‌ ಪಂದ್ಯದೊಂದಿಗೆ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಭಾರತ vs ಇಂಗ್ಲೆಂಡ್: ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!

ತಾನು ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸುತ್ತಿರುವ ಸಂಗತಿಯನ್ನು ಉಪುಲ್ ತರಂಗ ಟ್ವಿಟರ್ ಮೂಲಕ ಖಾತರಿಪಡಿಸಿದ್ದಾರೆ. 'ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಾನು ನಿರ್ಧರಿಸಿದ್ದೇನೆ,' ಎಂದು ತರಂಗ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ಎಲ್ಲಾ ಒಳ್ಳೆಯ ಸಂಗತಿಗಳಿಗೂ ಕೊನೆಯಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಮಯ ಇದಾಗಿದೆ ಎಂದು ನಾನು ನಂಬುತ್ತೇನೆ. ಚಂದದ ನೆನಪುಗಳೊಂದಿಗೆ ನಾನು ಮುನ್ನಡೆಯಲಿದ್ದೇನೆ. ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿದ್ದಕ್ಕೆ ಶ್ರೀಲಂಕಾ ಕ್ರಿಕೆಟ್‌ಗೆ ನನ್ನ ಧನ್ಯವಾದಗಳು,' ಎಂದು ತರಂಗ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ನಿರ್ಬಂಧ ಹೇರಿದ ಸಿಎ

ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ತರಂಗ, 31 ಟೆಸ್ಟ್ ಪಂದ್ಯಗಳಲ್ಲಿ 1754 ರನ್, 3 ಶತಕ, 235 ಏಕದಿನ ಪಂದ್ಯಗಳಲ್ಲಿ 6951 ರನ್, 15 ಶತಕ, 26 ಟಿ20ಐ ಪಂದ್ಯಗಳಲ್ಲಿ 407 ರನ್ ದಾಖಲೆ ಹೊಂದಿದ್ದಾರೆ. ತರಂಗ ಕಡೇ ಏಕದಿನ ಪಂದ್ಯ ಆಡಿದ್ದು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, February 23, 2021, 15:38 [IST]
Other articles published on Feb 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X