ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

Kevin Koththigoda's unorthodox bowling style goes Viral | Oneindia Kannada

ಕೊಲಂಬೋ, ನವೆಂಬರ್ 19: ಅನ್ ಆರ್ಥಡಾಕ್ಸ್ (ಅಸಾಂಪ್ರದಾಯಿಕ) ಬೌಲಿಂಗ್ ಶೈಲಿಯ ಶ್ರೇಷ್ಠ ಬೌಲರ್‌ಗಳನ್ನು ಹುಟ್ಟು ಹಾಕಿದ ಹಿರಿಮೆ ಶ್ರೀಲಂಕಾ ಕ್ರಿಕೆಟ್ ತಂಡದ್ದು. ಲಸಿತ್ ಮಾಲಿಂಗ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ವಿಚಿತ್ರ ಶೈಲಿಯ ಬೌಲರ್‌ಗಳ ಪಟ್ಟಿಯಲ್ಲಿ ಇತ್ತೀಚೆಗೆ 21ರ ಹರೆಯದ ಸ್ಪಿನ್ನರ್ ಕೆವಿನ್ ಕೊಥಿಗೋಡ ಗಮನ ಸೆಳೆಯುತ್ತಿದ್ದಾರೆ.

ಒಂದು ವರ್ಷ ಅಮಾನತಾದ ಆಸ್ಟ್ರೇಲಿಯನ್ ಕ್ರಿಕೆಟರ್

ಅಬು ಧಾಬಿಯಲ್ಲಿ ಭಾನುವಾರ (ನೆವಂಬರ್ 17) ನಡೆದ 10 ಲೀಗ್‌ನ ಬಾಂಗ್ಲಾ ಟೈಗರ್ಸ್ vs ಕರ್ನಾಟಕ ಟಸ್ಕರ್ಸ್ ನಡುವಣ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಪರ ಮೈದಾನಕ್ಕಿಳಿದಿದ್ದ ಕೊಥಿಗೋಡ ವೀಕ್ಷಕರ ಆಕರ್ಷಣೆಯ ಬಿಂದುವಾಗಿದ್ದರು. ಅವರ ವಿಚಿತ್ರ ಬೌಲಿಂಗ್ ಶೈಲಿ ಮೈದಾನದಲ್ಲಿ ಕುಳಿತ ಎಲ್ಲರ ಗಮನ ಸೆಳೆಯುವಂತಿತ್ತು.

ಅರ್ಧ ಶತಕ ಬಾರಿಸಿ ಹೃದಯಾಘಾತದಿಂದ ಮೃತಪಟ್ಟ ಕ್ರಿಕೆಟಿಗ

ದಕ್ಷಿಣ ಆಫ್ರಿಕಾ ಸ್ಪಿನ್ನರ್ ಪೌಲ್ ಆ್ಯಡಂ ಕೂಡ ಇದೇ ಶೈಲಿಯ ಬೌಲಿಂಗ್ ಮಾಡುತ್ತಿದ್ದರು. ಆ್ಯಡಂಗಿದ್ದ ನಿಕ್‌ ನೇಮ್‌ಗೆ ತಕ್ಕಂತೆ ಈ ಬೌಲಿಂಗ್ ಶೈಲಿಗೆ 'ಫ್ರಾಗ್‌ ಇನ್ ಅ ಬ್ಲೆಂಡರ್ 2.0' ಎಂದು ಕರೆಯಲಾಗುತ್ತಿತ್ತು. ಆದರೆ ತಾನು ಯಾವತ್ತೂ ಆ್ಯಡಂ ಬೈಲಿಂಗ್ ಶೈಲಿಯನ್ನು ನೋಡಿಲ್ಲ ಎನ್ನುತ್ತಾರೆ ಕೊಥಿಗೋಡ.

'ಆರಂಭದಿಂದಲೂ ನಾನು ಇದೇ ಶೈಲಿಯ ಬೌಲಿಂಗ್ ಮಾಡುತ್ತಿದ್ದೇನೆ. ಶ್ರೀಲಂಕಾದಲ್ಲಿ ಅಂಡರ್ 13, 15, 17, 19 ಕ್ರಿಕೆಟ್‌ ಆಡುವಾಗಲೂ ನಾನು ಯಾವತ್ತಿಗೂ ಈ ಶೈಲಿಯನ್ನು ಬದಲಿಸಿಲ್ಲ,' ಎಂದು ಕೊಥಿಗೋಡ ಹೇಳಿಕೊಂಡಿದ್ದಾರೆ. ಅಂದ್ಗಾಗೆ ಬಾಂಗ್ಲಾ ಟೈಗರ್ಸ್ ವಿರುದ್ಧ 2 ಓವರ್‌ ಎಸೆದಿದ್ದ ಕೊಥಿಗೋಡ 1 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ 5 ವಿಕೆಟ್ ಗೆಲುವನ್ನಾಚರಿಸಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, November 19, 2019, 12:06 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X