ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎದೆ ನೋವಿನಿಂದ ಮೈದಾನದಿಂದ ಹೊರ ನಡೆದ ಸ್ಟಾರ್ ಕ್ರಿಕೆಟಿಗ: ಆಸ್ಪತ್ರೆಗೆ ದಾಖಲು

Kusal mendis

ಟೆಸ್ಟ್ ಪಂದ್ಯದ ವೇಳೆ ದಿಢೀರ್ ಎದೆನೋವು ಕಾಣಿಸಿಕೊಂಡು ಶ್ರೀಲಂಕಾದ ಪ್ರಮುಖ ಬ್ಯಾಟ್ಸ್ ಮನ್ ಕುಸಾಲ್ ಮೆಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ನಡೆದಿದೆ. ಬಾಂಗ್ಲಾದೇಶ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದೆ.

ಉಭಯ ತಂಡಗಳು ಕಠಿಣ ಸವಾಲು ಎದುರಿಸಿದ್ದರಿಂದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿತು. ಇಂದು 2ನೇ ಟೆಸ್ಟ್ ಪಂದ್ಯ ಆರಂಭವಾಗಿದೆ.

ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ

ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ

ಮೊದಲ ಟೆಸ್ಟ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬಳಿಕ , ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಪೈಪೋಟಿ ನಡುವೆ ಮನಕಲಕುವ ಘಟನೆಯೊಂದು ನಡೆದಿದೆ. ಪಂದ್ಯದ 23ನೇ ಓವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕುಸಾಲ್ ಮೆಂಡಿಸ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದರು.

ದ. ಆಪ್ರಿಕಾ ವಿರುದ್ಧ ಟಿ20 ಸರಣಿ: ಭಾರತದ ಸಂಭಾವ್ಯ ಪ್ಲೇಯಿಂಗ್ 11 ತಿಳಿಸಿದ ಆಕಾಶ್ ಚೋಪ್ರಾ

ಕೂಡಲೇ ಆಸ್ಪತ್ರೆಗೆ ದಾಖಲಾದ ಮೆಂಡೀಸ್

ಕೂಡಲೇ ಆಸ್ಪತ್ರೆಗೆ ದಾಖಲಾದ ಮೆಂಡೀಸ್

ಹೀಗಾಗಿ, ವೈದ್ಯಕೀಯ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದೆ. ಆದರೆ ನೋವಿನಿಂದ ಒದ್ದಾಡುತ್ತಿದ್ದ ಅವರನ್ನು ಕೂಡಲೇ ಅಲ್ಲಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಎದೆನೋವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ ಮತ್ತು ಅಜೀರ್ಣದಿಂದ ಅಡಚಣೆ ಉಂಟಾಗಿರಬಹುದು ಎಂದು ತಿಳಿದುಬಂದಿದೆ.

IPL 2023 ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಸೇರಲಿರುವ ಅಮೀರ್ ಖಾನ್!

Harshal Patel ನಾಳಿನ ಪಂದ್ಯವನ್ನು ಆಡ್ತಾರಾ? | OneIndia Kannada
ಶ್ರೀಲಂಕಾಕ್ಕೆ ಆಸರೆಯಾಗಿದ್ದ ಬ್ಯಾಟರ್

ಶ್ರೀಲಂಕಾಕ್ಕೆ ಆಸರೆಯಾಗಿದ್ದ ಬ್ಯಾಟರ್

ಈ ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್ ಆಸರೆಯಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅವರ 54 ಮತ್ತು 48 ಸ್ಕೋರ್ ಸಮಬಲಕ್ಕೆ ನೆರವಾಯಿತು. ಸದ್ಯ ಸ್ಟಾರ್ ಬ್ಯಾಟರ್ ಇಲ್ಲದೆ ಶ್ರೀಲಂಕಾ ಹೇಗೆ ಎದುರಿಸಲಿದೆ ಎಂಬ ಆತಂಕ ಅಭಿಮಾನಿಗಳಲ್ಲಿದೆ.

ಕುಸಾಲ್ ಮೆಂಡೀಸ್ ಬಿಟ್ಟರೆ ಈ ಸರಣಿಯಲ್ಲಿ ಮೈದಾನ ತೊರೆಯುತ್ತಿರುವ 3ನೇ ವ್ಯಕ್ತಿ ಇವರಾಗಿದ್ದಾರೆ. ಹಿಂದಿನ ದಿನದ ಆರಂಭದಲ್ಲಿ, ಅಂಪೈರ್ ರಿಚರ್ಡ್ ಕೆಟಲ್‌ಫಾರ್ಫ್ ಮಂಡಿರಜ್ಜು ಗಾಯದಿಂದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ತಮೀಮ್ ಇಕ್ಬಾಲ್ ಅವರು ಇದೇ ರೀತಿಯ ಸ್ನಾಯು ಸೆಳೆತದಿಂದ ನಿವೃತ್ತರಾದರು ಎಂಬುದು ಗಮನಾರ್ಹ.

Story first published: Tuesday, May 24, 2022, 9:16 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X