ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

73 ವರ್ಷಗಳ ವಿಶ್ವದಾಖಲೆ ಮುರಿದ ಸ್ಟೀವ್ ಸ್ಮಿತ್, ಸೆಹ್ವಾಗ್‌ಗೆ 3ನೇ ಸ್ಥಾನ!

Steve Smith shatters 73-year-old record, becomes fastest to 7000 runs in Tests

ಅಡಿಲೇಡ್, ನವೆಂಬರ್ 30: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪೂರ್ವ ದಾಖಲೆಗಳನ್ನು ನಿರ್ಮಿಸುತ್ತ ಸಾಗುತ್ತಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ನಲ್ಲಿ ಅತೀವೇಗದಲ್ಲಿ 7,000 ರನ್ ಬಾರಿಸಿದ ವಿಶ್ವದ ಆಟಗಾರರ ಸಾಲಿನಲ್ಲಿ ಸ್ಮಿತ್‌ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಓ....ಮೈ... ಗಾಡ್... ಆರು ಬಾಲ್‌ಗೆ ಐದು ವಿಕೆಟ್ ಕಿತ್ತ ಕರ್ನಾಟಕದ ಅಭಿಮನ್ಯು!!ಓ....ಮೈ... ಗಾಡ್... ಆರು ಬಾಲ್‌ಗೆ ಐದು ವಿಕೆಟ್ ಕಿತ್ತ ಕರ್ನಾಟಕದ ಅಭಿಮನ್ಯು!!

ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ದ್ವಿತೀಯ ಟೆಸ್ಟ್‌ನಲ್ಲಿ ಸ್ಮಿತ್ 36 ರನ್‌ ಬಾರಿಸಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರಾದರೂ, ಅಷ್ಟರಲ್ಲಾಗಲೇ ಅವರ ಹೆಸರಿನಲ್ಲಿ ವಿಶ್ವದಾಖಲೆ ನಿರ್ಮಾಣವಾಗಿತ್ತು.

ಆಸ್ಟ್ರೇಲಿಯಾ vs ಪಾಕಿಸ್ತಾನ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
45881

ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಸುಮಾರು 73 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಟೆಸ್ಟ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

73 ವರ್ಷಗಳ ದಾಖಲೆ ಬದಿಗೆ

73 ವರ್ಷಗಳ ದಾಖಲೆ ಬದಿಗೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 7000 ರನ್‌ ದಾಖಲೆ ನಿರ್ಮಾಣವಾಗಿದ್ದು ಸುಮಾರು 73 ವರ್ಷಗಳ ಹಿಂದೆ. 1946ರಲ್ಲಿ ಇಂಗ್ಲೆಂಡ್ ಶ್ರೇಷ್ಠ ಕ್ರಿಕೆಟಿಗ ವಾಲಿ ಹ್ಯಾಮಂಡ್ ಅಂದು 134 ಇನ್ನಿಂಗ್ಸ್‌ಗಳಲ್ಲಿ 7000 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಸ್ಮಿತ್ ಇದೇ ಸಾಧನೆಗೆ ಕೇವಲ 126 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ.

ಬ್ರಾಡ್ಮನ್ ಹಿಂದಿಕ್ಕಿದ ಸ್ಮಿತ್

ಬ್ರಾಡ್ಮನ್ ಹಿಂದಿಕ್ಕಿದ ಸ್ಮಿತ್

ಅಡಿಲೇಡ್ ಸಾಧನೆಯೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚಿನ ರನ್ ಬಾರಿಸಿದ ಆಸ್ಟ್ರೇಲಿಯಾದ 11ನೇ ಬ್ಯಾಟ್ಸ್‌ಮನ್ ಆಗಿಯೂ ಸ್ಮಿತ್ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಟೆಸ್ಟ್‌ ರನ್‌ಗಾಗಿ ಆಸೀಸ್ ದಂತಕತೆ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿಸಿದ್ದಾರೆ. ಟೆಸ್ಟ್‌ನಲ್ಲಿ ಸ್ಮಿತ್ 7000 ರನ್ ಮಾಡಿಸಿದ್ದರೆ, ಬ್ರಾಡ್ಮನ್ 6,996 ರನ್ ದಾಖಲಿಸಿದ್ದಾರೆ. ಆದರೆ ಸ್ಮಿತ್ 70 ಟೆಸ್ಟ್ ಪಂದ್ಯಗಳಲ್ಲಿ 6,996+ ರನ್ ಮಾಡಿದ್ದಾರೆ. ಬ್ರಾಡ್ಮನ್ ಕೇವಲ 52 ಟೆಸ್ಟ್ ಪಂದ್ಯಗಳಲ್ಲಿ 6,996 ರನ್ ಬಾರಿಸಿದ್ದಾರೆ.

ವೀರೇಂದ್ರ ಸೆಹ್ವಾಗ್ 3ನೇ ಸ್ಥಾನಿ

ವೀರೇಂದ್ರ ಸೆಹ್ವಾಗ್ 3ನೇ ಸ್ಥಾನಿ

ಅತೀ ವೇಗದಲ್ಲಿ ಟೆಸ್ಟ್‌ 7000 ರನ್ ಬಾರಿಸಿದ ವಿಶ್ವದ ಆಟಗಾರರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ 3ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸ್ವೀವ್ ಸ್ಮಿತ್ (126 ಇನ್ನಿಂಗ್ಸ್‌), ವಾಲಿ ಹ್ಯಾಮಂಡ್ (131 ಇನ್ನಿಂಗ್ಸ್‌), ವೀರೇಂದ್ರ ಸೆಹ್ವಾಗ್ (134 ಇನ್ನಿಂಗ್ಸ್‌), ಸಚಿನ್ ತೆಂಡೂಲ್ಕರ್ (136 ಇನ್ನಿಂಗ್ಸ್‌) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.

ಡೇವಿಡ್ ವಾರ್ನರ್ ತ್ರಿಶತಕ

ಡೇವಿಡ್ ವಾರ್ನರ್ ತ್ರಿಶತಕ

ಅಡಿಲೇಡ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 335 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ವಾರ್ನರ್ ತ್ರಿಶತಕ, ಮಾರ್ನಸ್ ಲ್ಯಾಬುಸ್ಚಾಗ್ನೆ ಶತಕದೊಂದಿಗೆ (162 ರನ್) 127 ಓವರ್‌ಗೆ 3 ವಿಕೆಟ್ ಕಳೆದು 589 ರನ್ ಮಾಡಿ ಡಿಕ್ಲೇರ್ ಘೋಷಿಸಿತು.

Story first published: Saturday, November 30, 2019, 13:19 [IST]
Other articles published on Nov 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X