ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜನರ ಇಂತಹ ಕಾಮೆಂಟ್‌ಗಳು ನಿರಾಶೆ ಮಾಡಿವೆ; ಬಂಗಾಳ ಕ್ರಿಕೆಟ್ ತೊರೆದ ಬಗ್ಗೆ ವೃದ್ಧಿಮಾನ್ ಸಹಾ ಮಾತು

Such Comments By People Make Disappointing; Wriddhiman Saha Talks About Quitting Bengal Cricket

ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ ಅವರು ದೇಶೀಯ ಕ್ರಿಕೆಟ್‌ನಲ್ಲಿ 15 ವರ್ಷಗಳ ಕಾಲ ಬಂಗಾಳ ರಾಜ್ಯಕ್ಕಾಗಿ ಆಡಿದ ನಂತರ ಇದೀಗ ಬಂಗಾಳವನ್ನು ತ್ಯಜಿಸಲು ಸಿದ್ಧರಾಗಿದ್ದಾರೆ. ವೃದ್ಧಿಮಾನ್ ಸಹಾ ಈ ವರ್ಷದ ರಣಜಿ ಟ್ರೋಫಿಯ ಲೀಗ್ ಹಂತದಿಂದ ಹೊರಗುಳಿದಿದ್ದರು. ಆದರೆ ನಾಕೌಟ್ ಹಂತಗಳಿಗೆ ಅವರ ತಂಡದಲ್ಲಿ ಹೆಸರಿಸಲ್ಪಟ್ಟರು, ನಂತರ ಅವರು ಬಂಗಾಳವನ್ನು ತೊರೆಯಲು ಎನ್ಒಸಿ ಅನ್ನು ಕೋರಿದರು.

ವೃದ್ಧಿಮಾನ್ ಸಹಾ ಈಗ ತಮ್ಮ ನಿರ್ಗಮನದ ನಿರ್ಧಾರವನ್ನು ತೆರೆದಿದ್ದಾರೆ ಮತ್ತು ಅವರು ದೇಶೀಯ ತಂಡವನ್ನು ತೊರೆಯಲು ಮನಸ್ಸು ಮಾಡಿರುವುದಾಗಿ ಬಂಗಾಳದ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರಿಗೆ ತಿಳಿಸಿದ್ದಾರೆ. ಆದರೆ ಅವರನ್ನು ಭೇಟಿ ಮಾಡಿ ಔಪಚಾರಿಕ ಮಾತುಕತೆಗಳನ್ನು ಅಂತಿಮಗೊಳಿಸುವುದಾಗಿ ಹೇಳಿದರು.

ರಣಜಿ ಟ್ರೋಫಿ: ಬೆಂಗಾಲ್ ಕ್ರಿಕೆಟ್ ಸಂಸ್ಥೆ ತೊರೆಯಲು NOC ಕೋರಿದ ವೃದ್ಧಿಮಾನ್ ಸಹಾರಣಜಿ ಟ್ರೋಫಿ: ಬೆಂಗಾಲ್ ಕ್ರಿಕೆಟ್ ಸಂಸ್ಥೆ ತೊರೆಯಲು NOC ಕೋರಿದ ವೃದ್ಧಿಮಾನ್ ಸಹಾ

ವರ್ಷದ ಆರಂಭದಲ್ಲಿ ಬಂಗಾಳಕ್ಕೆ ಅವರ ಬದ್ಧತೆಯನ್ನು ಪ್ರಶ್ನಿಸುವ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಳ (CAB) ಜಂಟಿ ಕಾರ್ಯದರ್ಶಿ ದೇಬಬ್ರತ ದಾಸ್ ಅವರ ಹೇಳಿಕೆ‌ಗಳಿಂದ ತನಗೆ ನೋವಾಗಿದೆ ಎಂದು ವೃದ್ಧಿಮಾನ್ ಸಹಾ ಹೇಳಿದರು.

Such Comments By People Make Disappointing; Wriddhiman Saha Talks About Quitting Bengal Cricket

"ನನಗೂ ಸಹ, ಬಂಗಾಳಕ್ಕಾಗಿ ಇಷ್ಟು ದಿನ ಆಡಿದ ನಂತರ ನಾನು ಈ ರೀತಿಯದ್ದನ್ನು ಅನುಭವಿಸಬೇಕಾಗಿರುವುದು ತುಂಬಾ ದುಃಖದ ಭಾವನೆ," ಎಂದು ವೃದ್ಧಿಮಾನ್ ಸಹಾ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಳ (CAB) ಅಧಿಕಾರಿ ಮಾಡಿದ ಹೇಳಿಕೆಗಳ ಬಗ್ಗೆ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದರು.

"ಜನರು ಇಂತಹ ಕಾಮೆಂಟ್‌ಗಳನ್ನು ಮಾಡುವುದು ಮತ್ತು ನಿಮ್ಮ ಸಮಗ್ರತೆಯನ್ನು ಪ್ರಶ್ನಿಸುವುದು ನಿರಾಶಾದಾಯಕವಾಗಿದೆ. ಒಬ್ಬ ಆಟಗಾರನಾಗಿ, ನಾನು ಹಿಂದೆಂದೂ ಅಂತಹದನ್ನು ಎದುರಿಸಿರಲಿಲ್ಲ. ಆದರೆ ಈಗ ಅದು ಸಂಭವಿಸಿದೆ, ನಾನು ಮುಂದುವರಿಯಬೇಕು (ಬೇರೆ ನಿರ್ಧಾರ ತೆಗೆದುಕೊಳ್ಳಬೇಕು)," ಎಂದು ವೃದ್ಧಿಮಾನ್ ಸಹಾ ಹೇಳಿದರು.

ವೃದ್ಧಿಮಾನ್ ಸಹಾಗೆ ಬೆದರಿಕೆ: ಪತ್ರಕರ್ತ ಬೋರಿಯಾ ಮಜುಂದಾರ್‌ಗೆ ನಿಷೇಧ ಹೇರಿದ ಬಿಸಿಸಿಐವೃದ್ಧಿಮಾನ್ ಸಹಾಗೆ ಬೆದರಿಕೆ: ಪತ್ರಕರ್ತ ಬೋರಿಯಾ ಮಜುಂದಾರ್‌ಗೆ ನಿಷೇಧ ಹೇರಿದ ಬಿಸಿಸಿಐ

ಮುಂದಿನ ಋತುವಿನಲ್ಲಿ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದರ ಕುರಿತು ಗುಟ್ಟು ಬಿಟ್ಟುಕೊಡದ ವೃದ್ಧಿಮಾನ್ ಸಹಾ, "ನಾನು ಸಾಕಷ್ಟು ಜನರೊಂದಿಗೆ ಮಾತನಾಡಿದ್ದೇನೆ, ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಮುಂದಿನ ಸೀಸನ್‌ಗೆ ಇನ್ನೂ ಸಮಯವಿದೆ," ಎಂದರು.

ಅಷ್ಟೊಂದು ದಾಖಲೆ ಮಾಡಲು ಚಾನ್ಸ್ ಕೊಟ್ಟ IPL ಬಗ್ಗೆ Jos Butler ಗೆ ನಿರಾಸೆ ಆಗಿದ್ಯಾಕೆ? | OneIndia Kannada

ವೃದ್ಧಿಮಾನ್ ಸಹಾ ಇತ್ತೀಚೆಗೆ ಗುಜರಾತ್ ಟೈಟನ್ಸ್‌ನ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಮತ್ತು ಅವರು ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತುವಲ್ಲಿ ಸಹಾಯ ಮಾಡಿದರು. ವೃದ್ಧಿಮಾನ್ ಸಹಾ 11 ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳೊಂದಿಗೆ 317 ರನ್ ಗಳಿಸಿದರು.

Story first published: Saturday, June 4, 2022, 19:15 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X