ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುರೇಶ್ ರೈನಾ ಮೆಚ್ಚುಗೆಗೆ ಪಾತ್ರವಾದ 3 ಯುವ ಆಟಗಾರರು ಇವರು: ಕನ್ನಡಿಗನಿಗೂ ಸ್ಥಾನ

Suresh Raina gives the names of three young Indian cricketers who have impressed him
Suresh Raina ಪ್ರಕಾರ ಇವರು ಭಾರತದ ಭವಿಷ್ಯ | Oneindia Kannada

ಭಾರತೀಯ ಕ್ರಿಕೆಟ್‌ನಲ್ಲಿ ಯುವ ಪ್ರತಿಭಾವಂತ ಕ್ರಿಕೆಟಿಗರ ಪಡೆಯೇ ಈಗ ಅವಕಾಶಕ್ಕಾಗಿ ಕಾದು ಕುಳಿತಿದಿದೆ. ದೇಶೀಯ ಕ್ರಿಕೆಟ್ ಆಗಿರಲಿ ಐಪಿಎಲ್ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಪಂದ್ಯಗಳೇ ಆಗಿರಲಿದೆ. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಯುವ ಆಟಗಾರರು ಬಳಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಮೂವರು ಯುವ ಆಟಗಾರರು ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆದರೆ ಈ ಪಟ್ಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿರುವ ರಿಷಭ್ ಪಂತ್‌ ಅವರನ್ನು ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಪಂತ್ ಟೀಮ್ ಇಂಡಿಯಾಗೆ ಹೊಸ ಆಟಗಾರನಲ್ಲ. ಆತ ಈಗ ಅನುಭವಿಗಳ ವಿಭಾಗಕ್ಕೆ ಸೇರಿಕೊಳ್ಳುತ್ತಾರೆ. ಆತ ಸಾಕಷ್ಟು ಬೆಳೆದಿದ್ದಾರೆ. ಈಗ ಆತ ಸಿಕ್ಸರ್ ಮಾತ್ರವಲ್ಲ ಬೌಂಡರಿಗಳನ್ನು ಕೂಡ ಸಿಡಿಸುತ್ತಾರೆ" ಎಮದು ತಮ್ಮ ವಿವರಣೆಯನ್ನು ನೀಡಿದ್ದಾರೆ.

ಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಹಾಗಾದರೆ ಸುರೇಶ್ ರೈನಾ ಅವರ ಹೃದಯವನ್ನು ಗೆದ್ದ ಮೂವರು ಯುವ ಆಟಗಾರರು ಯಾರು ಎಂಬುದನ್ನು ಮುಂದೆ ಓದಿ..

ರೈನಾ ಮೆಚ್ಚುಗೆಗೆ ಪಾತ್ರವಾದವರಲ್ಲಿ ಕನ್ನಡಿಗ

ರೈನಾ ಮೆಚ್ಚುಗೆಗೆ ಪಾತ್ರವಾದವರಲ್ಲಿ ಕನ್ನಡಿಗ

ತನ್ನ ಮೆಚ್ಚುಗೆಗೆ ಪಾತ್ರವಾದ ಆಟಗಾರರ ಬಗ್ಗೆ ಸುರೇಶ್ ರೈನಾ ಮಾತನಾಡಿದಾಗ ಮೂವರು ಯುವ ಆಟಗಾರರನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಕನ್ನಡಿಗ ಆಟಗಾರ ದೇವದತ್ ಪಡಿಕ್ಕಲ್ ಕೂಡ ಸೇರಿದ್ದಾರೆ. ಎರಡನೇ ಆಟಗಾರನಾಗಿ ಋತುರಾಜ್ ಗಾಯಕ್ವಾಡ್ ಹಾಗೂ ಮೂರನೇಯದಾಗಿ ಆಲ್‌ರೌಂಡರ್ ಅಕ್ಷರ್ ಪಟೇಕ್ ಅವರು ತನ್ನ ಮೆಚ್ಚುಗೆಯನ್ನು ಗಳಿಸಿದ ಮೂವರು ಯುವ ಆಟಗಾರರು ಎಂದು ಸುರೇಶ್ ರೈನಾ ತಿಳಿಸಿದ್ದಾರೆ.

ಮೆಚ್ಚುಗೆಯ ಮಾತುಗಳನ್ನಾಡಿದ ರೈನಾ

ಮೆಚ್ಚುಗೆಯ ಮಾತುಗಳನ್ನಾಡಿದ ರೈನಾ

ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ ಈ ಬಗ್ಗೆ ಮಾತನಾಡಿದ್ದಾರೆ. "ನನ್ನ ಮೆಚ್ಚುಗೆ ಗಳಿಸಿದವರಲ್ಲಿ ಆರಂಬದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್, ಮಹಾರಾಷ್ಟ್ರದ ಆಟಗಾರ ಋತುರಾಜ್ ಗಾಯಕ್ವಾಡ್. ಆತನೋರ್ವ ಗನ್ ಪ್ಲೇಯರ್. ಬಳಿಕ ಅಕ್ಷರ್ ಪಟೇಲ್. ಈತ ನಿಜಕ್ಕೂ ಕಠಿಣ ಪರಿಶ್ರಮವನ್ನು ಪಡುತ್ತಿದ್ದಾನೆ. ರವೀಂದ್ರ ಜಡೇಜಾ ಅವರ ಅಲಭ್ಯತೆಯಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನೀಡಿದ್ದಾರೆ" ಎಂದು ರೈನಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಸಿರಾಜ್ ಬಗ್ಗೆಯೂ ರೈನಾ ಪ್ರಶಂಸೆ

ಸಿರಾಜ್ ಬಗ್ಗೆಯೂ ರೈನಾ ಪ್ರಶಂಸೆ

ಇನ್ನು ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್ ಬಗ್ಗೆಯೂ ಸುರೇಶ್ ರೈನಾ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. "ಮೊಹಮ್ಮದ್ ಸಿರಾಜ್ ಕೂಡ ಅದ್ಭುತವಾಗಿ ಬೌಲಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ಬಹುಶಃ ಇದಕ್ಕೆಲ್ಲಾ ನಾವು ರಾಹುಲ್ ದ್ರಾವಿಡ್ ಅವರಿಗೆ ಶ್ರೇಯಸ್ಸನ್ನು ನೀಡಬೇಕಾಗುತ್ತದೆ ಎಂದು ಭಾವಿಸಯತ್ತೇನೆ. ಅಂಡರ್ 19 ಹಾಗೂ ಭಾರತ ಎ ತಂಡದಲ್ಲಿ ಅವರ ಮಾರ್ಗದರ್ಶನದಿಂದಾಗಿ ಯುವ ಆಟಗಾರರ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಯಿತು" ಎಂದಿದ್ದಾರೆ ಸುರೇಶ್ ರೈನಾ

ಶ್ರೀಲಂಕಾ ಪ್ರವಾಸದಲ್ಲಿ ಯುವ ತಂಡ

ಶ್ರೀಲಂಕಾ ಪ್ರವಾಸದಲ್ಲಿ ಯುವ ತಂಡ

ಇನ್ನು ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ಸಹಿತ ಯುವ ಆಟಗಾರನ್ನು ಒಳಗೊಂಡು ಭಾರತೀಯ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಶಿಖರ್ ಧವನ್ ನೇತೃತ್ವದ ತಂಡ ಸೀಮಿತ ಓವರ್‌ಗಳ ಸರಣಿಯನ್ನಾಡಲು ಶ್ರೀಲಂಕಾಗೆ ತೆರಳಿದೆ. ಈ ತಂಡ ಲಂಕಾ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Story first published: Monday, July 12, 2021, 17:51 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X