ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!

Suresh Raina Reveals Why He Retired Immediately After MS Dhoni Retirement

ಭಾರತ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಎಂಎಸ್ ಧೋನಿ ನಡುವಿನ ಸ್ನೇಹ ಎಂತಹದ್ದು ಎನ್ನುವುದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತು. ಆಗಸ್ಟ್ 15, 2020ರಂದು ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಧೋನಿ ಆ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿಲ್ಲವಾದ್ದರಿಂದ ಅದು ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅವರು ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು.

Ind vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳುInd vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳು

ಎಂಎಸ್ ಧೋನಿ ನಿವೃತ್ತಿಯ ನಿರ್ಧಾರದ ಬೆನ್ನಲ್ಲೇ ಸ್ಫೋಟಕ ಬ್ಯಾಟರ್ ಆಗಿದ್ದ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದ್ದರು. ತಮ್ಮ 33ನೇ ವಯಸ್ಸಿನಲ್ಲೇ ಅವರು ನಿವೃತ್ತರಾಗುವ ನಿರ್ಧಾರ ತೆಗೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಧೋನಿಯಂತೆ ಸುರೇಶ್ ರೈನಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.

ನಿವೃತ್ತಿಯಾದ ಎರಡೂವರೆ ವರ್ಷಗಳ ಬಳಿಕ ಸುರೇಶ್ ರೈನಾ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಸ್ಪೋರ್ಟ್ಸ್‌ ತಕ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ನಿವೃತ್ತಿಗೆ ಕಾರಣವೇನು ಎನ್ನುವುದರ ಬಗ್ಗೆ ರೈನಾ ತಿಳಿಸಿದ್ದಾರೆ.

Suresh Raina Reveals Why He Retired Immediately After MS Dhoni Retirement

ಧೋನಿಯ ನಂತರ ದೇಶಕ್ಕಾಗಿ ಆಡಿದ್ದೇನೆ

ಸ್ಪೋರ್ಟ್ಸ್‌ ತಕ್‌ಗೆ ನೀಡಿದ ಸಂದರ್ಶನಲ್ಲಿ, ಧೋನಿ ನಿವೃತ್ತಿಯ ಬಳಿಕ ತಾವು ನಿವೃತ್ತಿಯಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ಭಾರತಕ್ಕಾಗಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಾಗಿ ನಾವು ಒಟ್ಟಿಗೆ ಹಲವಾರು ಪಂದ್ಯಗಳನ್ನು ಆಡಿದ್ದೇವೆ. ಅವರೊಂದಿಗೆ ಆಡಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಅವರಿಂದ ನನಗೆ ಸಾಕಷ್ಟು ಪ್ರೀತಿ, ಪ್ರೋತ್ಸಾಹ ಸಿಕ್ಕಿದೆ. ನಾನು ಗಾಜಿಯಾಬಾದ್‌ನಿಂದ ಬಂದಿದ್ದೇನೆ ಮತ್ತು ಧೋನಿ ರಾಂಚಿಯಿಂದ ಬಂದಿದ್ದಾರೆ. ನಾನು ಮೊದಲು ಎಂಎಸ್ ಧೋನಿ ಪರವಾಗಿ ಆಡಿದ್ದೇನೆ, ನಂತರ ದೇಶಕ್ಕಾಗಿ ಆಡಿದ್ದೇವೆ. ಅದು ನಮ್ಮಿಬ್ಬರ ನಡುವೆ ಇರುವ ಸ್ನೇಹ. ನಾವಿಬ್ಬರು ಹಲವು ಫೈನಲ್ ಪಂದ್ಯಗಳನ್ನು ಆಡಿದ್ದೇವೆ, ನಾವು ವಿಶ್ವಕಪ್ ಗೆದ್ದಿದ್ದೇವೆ. ಎಂಎಸ್ ಧೋನಿ ಶ್ರೇಷ್ಠ ನಾಯಕ" ಎಂದು ರೈನಾ ಹೊಗಳಿದ್ದಾರೆ.

Suresh Raina Reveals Why He Retired Immediately After MS Dhoni Retirement

ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಜೋಡಿ

2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಎಂಎಸ್‌ ಧೋನಿ ನೇತೃತ್ವದ ಭಾರತ ತಂಡದಲ್ಲಿ ಸುರೇಶ್ ರೈನಾ ಕೂಡ ಇದ್ದರು. ಅಂದಿನಿಂದಲೂ ಧೋನಿ ಮತ್ತು ರೈನಾ ನಡುವೆ ಸಾಕಷ್ಟು ಉತ್ತಮ ಗೆಳೆತನ ಇತ್ತು.

ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. 2008 ರಿಂದ 2021ರವರೆಗೆ ಅವರು ಸಿಎಸ್‌ಕೆ ತಂಡದ ಪರವಾಗಿ ಆಡಿದ್ದರು. (2 ವರ್ಷ ಸಿಎಸ್‌ಕೆ ತಂಡವನ್ನು ನಿಷೇಧಿಸಿದ್ದಾಗ ಗುಜರಾತ್ ಲಯನ್ಸ್ ತಂಡಕ್ಕಾಗಿ ಆಡಿದ್ದರು.) ಸಿಎಸ್‌ಕೆ ತಂಡ 4 ಬಾರಿ ಕಪ್‌ ಗೆಲ್ಲುವಲ್ಲಿ ರೈನಾ ಕೊಡುಗೆ ಪ್ರಮುಖವಾಗಿದೆ. ರೈನಾ ಆಟಕ್ಕಾಗಿ ಅವರನ್ನು ಮಿಸ್ಟರ್ ಐಪಿಎಲ್‌ ಎಂದೇ ಕರೆಯಲಾಗುತ್ತದೆ.

Story first published: Sunday, February 5, 2023, 19:13 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X