ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾದ ವಿಶ್ವದ ನಂ.1 ಬ್ಯಾಟರ್ ಸೂರ್ಯಕುಮಾರ್!

Suryakumar Yadav Will Be Become 3rd Batter To Cross 900 Points in ICC T20 Rankings

ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಪ್ರಸ್ತುತ ಐಸಿಸಿ ಅಧಿಕೃತ ಶ್ರೇಯಾಂಕದಲ್ಲಿ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿದ್ದಾರೆ.

ಶನಿವಾರ (ಜನವರಿ 7) ಸೂರ್ಯಕುಮಾರ್ ಯಾದವ್ ರಾಜ್‌ಕೋಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಸರಣಿ ಗೆಲುವು ಸಾಧಿಸಲು ಕೇವಲ 45 ಎಸೆತಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದರು.

ಟಿ20 ವಿಶ್ವಕಪ್: ಹ್ಯಾರಿಸ್ ರೌಫ್‌ಗೆ ಕನಸಲ್ಲೂ ಕಾಡುತ್ತಿದೆ ವಿರಾಟ್ ಕೊಹ್ಲಿಯ ಆ 2 ಸಿಕ್ಸರ್‌ಗಳು!ಟಿ20 ವಿಶ್ವಕಪ್: ಹ್ಯಾರಿಸ್ ರೌಫ್‌ಗೆ ಕನಸಲ್ಲೂ ಕಾಡುತ್ತಿದೆ ವಿರಾಟ್ ಕೊಹ್ಲಿಯ ಆ 2 ಸಿಕ್ಸರ್‌ಗಳು!

ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಟೀಂ ಇಂಡಿಯಾ ಮೂರನೇ ಟಿ20 ಪಂದ್ಯವನ್ನು 91 ರನ್‌ಗಳಿಂದ ಗೆದ್ದು ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ 112 ರನ್ ಗಳಿಸಿದ ನಂತರ, ಸೂರ್ಯಕುಮಾರ್ ಯಾದವ್ ಅವರು ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ 900 ಅಂಕಗಳನ್ನು ದಾಟಿದ ಮೂರನೇ ಬ್ಯಾಟರ್ ಆಗಲಿದ್ದಾರೆ.

ಸೂರ್ಯಕುಮಾರ್ ಯಾದವ್ ಪ್ರಸ್ತುತ 883 ಪಾಯಿಂಟ್‌ ಹೊಂದಿದ್ದಾರೆ

ಸೂರ್ಯಕುಮಾರ್ ಯಾದವ್ ಪ್ರಸ್ತುತ 883 ಪಾಯಿಂಟ್‌ ಹೊಂದಿದ್ದಾರೆ

ಸೂರ್ಯಕುಮಾರ್ ಯಾದವ್ ಪ್ರಸ್ತುತ 883 ಪಾಯಿಂಟ್‌ಗಳನ್ನು ಹೊಂದಿದ್ದಾರೆ ಮತ್ತು ಈ ವಾರ ನವೀಕರಿಸಿದ ಪಾಯಿಂಟ್‌ಗಳ ಕೋಷ್ಟಕ ಬಿಡುಗಡೆಯಾದಾಗ ಖಂಡಿತವಾಗಿಯೂ ಏರಿಕೆಯಾಗಲಿದೆ.

ಸೂರ್ಯಕುಮಾರ್ ಯಾದವ್ ಅವರಿಗಿಂತ ಮೊದಲು ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಮಾತ್ರ ಟಿ20 ರ್‍ಯಾಂಕಿಂಗ್ ಇತಿಹಾಸದಲ್ಲಿ 900 ಪಾಯಿಂಟ್‌ಗಳನ್ನು ಮೀರಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಅಜೇಯ ಮೂರನೇ ಟಿ20 ಶತಕದೊಂದಿಗೆ ಸರಣಿ ದಾಖಲೆಗಳನ್ನು ಬರೆದರು. ಎದುರಿಸಿದ ಬಾಲ್‌ಗಳ ಪ್ರಕಾರ, ಟಿ20 ಸ್ವರೂಪದಲ್ಲಿ 1,500 ರನ್‌ಗಳನ್ನು ತಲುಪಿದ ವೇಗದ ಆಟಗಾರರಾದರು.

1,500 ರನ್‌ಗಳ ಗಡಿಯನ್ನು ತಲುಪಿದ ಮೂರನೇ ಅತಿ ವೇಗದ ಆಟಗಾರ

1,500 ರನ್‌ಗಳ ಗಡಿಯನ್ನು ತಲುಪಿದ ಮೂರನೇ ಅತಿ ವೇಗದ ಆಟಗಾರ

ಟಿ20 ಕ್ರಿಕೆಟ್‌ನಲ್ಲಿ ಈ ಹೆಗ್ಗುರುತನ್ನು ತಲುಪಲು ಸೂರ್ಯಕುಮಾರ್ ಯಾದವ್ ಕೇವಲ 843 ಎಸೆತಗಳನ್ನು ತೆಗೆದುಕೊಂಡರು ಮತ್ತು ಇದು ಎಲ್ಲಾ ಆಟಗಾರರಿಗಿಂತ ವೇಗವಾಗಿ ಬಾರಿಸಿದ್ದಾರೆ. ಇನ್ನಿಂಗ್ಸ್‌ಗೆ ಸಂಬಂಧಿಸಿದಂತೆ ಟಿ20 ಪಂದ್ಯಗಳಲ್ಲಿ 1,500 ರನ್‌ಗಳ ಗಡಿಯನ್ನು ತಲುಪಿದ ಮೂರನೇ ಅತಿ ವೇಗದ ಆಟಗಾರರಾಗಿದ್ದಾರೆ.

ಈ ಮೈಲುಗಲ್ಲನ್ನು ತಲುಪಿದ ವೇಗದ ಬ್ಯಾಟರ್‌ಗಳೆಂದರೆ ಭಾರತೀಯ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಆಸ್ಟ್ರೇಲಿಯಾದ ಅನುಭವಿ ಆರೋನ್ ಫಿಂಚ್ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರು ಟಿ20 ಪಂದ್ಯಗಳಲ್ಲಿ 1,500 ರನ್ ಗಳಿಸಲು 39 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ 43 ಇನ್ನಿಂಗ್ಸ್‌ಗಳಲ್ಲಿ 1,500 ರನ್

ಸೂರ್ಯಕುಮಾರ್ ಯಾದವ್ 43 ಇನ್ನಿಂಗ್ಸ್‌ಗಳಲ್ಲಿ 1,500 ರನ್

ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 42 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು ಮತ್ತು ಸೂರ್ಯಕುಮಾರ್ ಯಾದವ್ 43 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.

ಇದೇ ವೇಳೆ ಸ್ಫೋಟಕ ಸೂರ್ಯಕುಮಾರ್ ಯಾದವ್ 150 ಅಥವಾ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನೊಂದಿಗೆ 1,500 ರನ್ ಹೆಗ್ಗುರುತನ್ನು ತಲುಪಿದ ಮೊದಲ ಆಟಗಾರನಾದರು.

ಟಿ20 ಸ್ವರೂಪದಲ್ಲಿ ಮೂರು ಶತಕಗಳು ಮತ್ತು 13 ಅರ್ಧ ಶತಕ

ಟಿ20 ಸ್ವರೂಪದಲ್ಲಿ ಮೂರು ಶತಕಗಳು ಮತ್ತು 13 ಅರ್ಧ ಶತಕ

ಸೂರ್ಯಕುಮಾರ್ 45 ಪಂದ್ಯಗಳ 43 ಇನ್ನಿಂಗ್ಸ್‌ಗಳಲ್ಲಿ ಅವರು 46.41 ಸರಾಸರಿಯಲ್ಲಿ 180.34ರ ಸ್ಟ್ರೈಕ್‌ರೇಟ್‌ನೊಂದಿಗೆ 1,578 ರನ್ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಮೂರು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಬಾರಿಸಿದ್ದಾರೆ ಮತ್ತು ಅತ್ಯುತ್ತಮ ವೈಯಕ್ತಿಕ ಸ್ಕೋರ್ 117 ರನ್ ಆಗಿದೆ.

ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್‌ನಿಂದ ಎರಡನೇ ವೇಗದ ಶತಕವನ್ನು ಸಿಡಿಸಿದರು. ಕಡಿಮೆ ಸ್ವರೂಪದಲ್ಲಿ ಸೂರ್ಯಕುಮಾರ್ ತಮ್ಮ ಮೂರನೇ ಶತಕವನ್ನು ಬಾರಿಸಲು ಕೇವಲ 45 ಎಸೆತಗಳನ್ನು ತೆಗೆದುಕೊಂಡರು.

ಸೂರ್ಯಕುಮಾರ್ ಯಾದವ್ ಜಂಟಿ ಎರಡನೇ ಅತಿ ಹೆಚ್ಚು ಶತಕ

ಸೂರ್ಯಕುಮಾರ್ ಯಾದವ್ ಜಂಟಿ ಎರಡನೇ ಅತಿ ಹೆಚ್ಚು ಶತಕ

2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಅವರು ಟಿ20 ಪಂದ್ಯದಲ್ಲಿ ಭಾರತದ ಪರ ವೇಗದ ಶತಕ ದಾಖಲಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಈಗ ಟಿ20 ಪಂದ್ಯಗಳಲ್ಲಿ ಜಂಟಿ ಎರಡನೇ ಅತಿ ಹೆಚ್ಚು ಶತಕಗಳನ್ನು ಹೊಂದಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ನಾಲ್ಕು ಟಿ20 ಶತಕಗಳನ್ನು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಂತರ ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನ್ಯೂಜಿಲೆಂಡ್‌ನ ಕಾಲಿನ್ ಮುನ್ರೊ ತಲಾ ಮೂರು ಶತಕಗಳನ್ನು ಗಳಿಸಿದ್ದಾರೆ.

Story first published: Monday, January 9, 2023, 16:41 [IST]
Other articles published on Jan 9, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X