ಪಾಕ್ ಜೊತೆ ಕ್ರಿಕೆಟ್ ಸರಣಿ ಅಸಾಧ್ಯ, ಕಡ್ಡಿಮುರಿದಂತೆ ಹೇಳಿದ ಸುಷ್ಮಾ

Posted By:

ನವದೆಹಲಿ, ಜನವರಿ 01 : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಗೂ ಭಾರತ ನಡುವಿನ ಕ್ರಿಕೆಟ್ ಟೂರ್ನಿ ಇನ್ಮುಂದೆ ನಡೆಯುವುದೇ ಕನಸಿನ ಮಾತಾಗಿದೆ.

ಸೋಮವಾರ ಭದ್ರತಾ ಸಚಿವಾಲಯದ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವೆ ಸುಷ್ಮಾ ಸ್ವರಾಜ್, " ಪದೇ-ಪದೇ ಪಾಕಿಸ್ತಾನವು ಗಡಿ ನಿಯಂತ್ರಣ ಬಳಿ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಕ್ರಿಕೆಟ್ ಟೂರ್ನಿಗಳಿಲ್ಲ, ಭಯೋತ್ಪಾದಕ ರಾಷ್ಟ್ರದ ಜೊತೆ ಕ್ರಿಕೆಟ್ ಅಸಾಧ್ಯ ಎಂದು ಕಡ್ಡಿಮುರಿದಂತೆ ಹೇಳಿದರು.

Sushma Swaraj Rules Out India-Pak Series at Neutral Venue, Cites Ceasefire Violations

ಪಾಕ್ ಸೆರೆಯಲ್ಲಿರುವ ಕುಲಭೂಷಣ್ ಜಾದವ್ ಅವರ ತಾಯಿ ಹಾಗೂ ಪತ್ನಿಯನ್ನು ನಡೆಸಿಕೊಂಡ ರೀತಿ, ಹಾಗೂ ಪಾಕ್ ಪಡೆಗಳಿಂದ ಪದೆ-ಪದೆ ಗಡಿ ರೇಖೆ ಉಲ್ಲಂಘಸಿ ಸೈನಿಕರ ಮೇಲೆ ದಾಳಿ ನಡೆಸುತ್ತಿರುವುದು ಈ ಆಕ್ರೊಶಕ್ಕೆ ಕಾರಣವಾಗಿದೆ.

ಪಾಕಿಸ್ತಾನ 2012ರ ಡಿಸೆಂಬರ್ ನಲ್ಲಿ ಕಡೆಯ ಬಾರಿ ಭಾರತದಲ್ಲಿ 3 ಏಕದಿನ ಹಾಗೂ 2 ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿ ಆಡಿತ್ತು. ಇನ್ನು ಭಾರತ ತಂಡ ಪಾಕ್ ತವರಿನಲ್ಲಿ 2007ರಲ್ಲಿ ಆಡಿರುವುದು ಕೊನೆ ಸರಣಿ.

ಸುಷ್ಮಾ ಅವರ ಇಂದಿನ ಹೇಳಿಕೆಯನ್ನು ಗಮನಿಸಿದರೆ ಭಾರತ ಮತ್ತು ಪಾಕ್ ಕ್ರಿಕೆಟ್ ಸರಣಿ ಆಯೋಜನೆ ಕನಸಿನ ಮಾತು ಎಂಬಂತಾಗಿದೆ.

Story first published: Monday, January 1, 2018, 15:28 [IST]
Other articles published on Jan 1, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ