ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿಯನ್ನು ಸತತ ಎರಡನೇ ಬಾರಿಗೆ ಕರ್ನಾಟಕ ತನ್ನ ಮುಡಿಗೇರಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಮಿಳುನಾಡಿಗೆ 181 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನತ್ತಿದ ತಮಿಳುನಾಡು ಉತ್ತಮ ಆಟವನ್ನು ಪ್ರದರ್ಶಿಸಿ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್‌ನಿಂದ ಶರಣಾಯಿತು . ಈ ಮೂಲಕ ಸರಣಿಯುದ್ದಕ್ಕೂ ಅದ್ಭುತ ಆಟ ಪ್ರದರ್ಶಿಸಿದ ಕರ್ನಾಟಕ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.
ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್- ಆಸಿಸ್ ವೇಗಿಯಿಂದ ವಿಶಿಷ್ಠ ಸಾಧನೆ
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಾಯಕ ಮನೀಶ್ ಪಾಂಡೆ ಅಜೇಯ 60 ರನ್(45 ಎಸೆತ) ನೆರವಿನಿಂದ 180ರನ್ ಗಳಿಸಿತು. ಕರ್ನಾಟಕದ ಪರವಾಗಿ ದೇವದತ್ ಪಡಿಕಲ್ 32ರನ್(23 ಎಸೆತ) ರೋಹನ್ ಕದಮ್ 35 (28) ಉತ್ತಮ ಕೊಡುಗೆಯನ್ನು ನೀಡಿದರು. ತಮಿಳುನಾಡಿ ಪರವಾಗಿ ಆರ್. ಅಶ್ವಿನ್ ಹಾಗೂ ಮುರುಗನ್ ಅಶ್ವಿನ್ ತಲಾ ಎರಡು ವಿಕೆಟ್ ಪಡೆದರು.
ಕರ್ನಾಟಕ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಿದ ತಮಿಳುನಾಡಿನ ಆರಂಭ ಉತ್ತಮವಾಗಿರಲಿಲ್ಲ. 12 ಎಸೆತಗಳಲ್ಲಿ 14 ರನ್ ಬಾರಿಸಿದ ಹರಿ ನಿಶಾಂತ್ ರೋನಿತ್ ಮೋರೆಗೆ ವಿಕೆಟ್ ಒಪ್ಪಸಿದರು. ಅದಾದ ಬಳಿಕ ಮತ್ತೋರ್ವ ಆರಂಭಿಕ ಆಟಗಾರ ಶಾರೂಖ್ ಖಾನ್ 11 ಎಸೆತಗಳಲ್ಲಿ 16 ರನ್ ಬಾರಿಸಿ ಶ್ರೇಯಸ್ ಗೋಪಾಲ್‌ಗೆ ವಿಕೆಟ್ ಒಪ್ಪಿಸಿದರು.
ಐಪಿಎಲ್ ಹರಾಜು: ಈ ಐವರು ಆರ್‌ಸಿಬಿಯಲ್ಲಿದ್ದರೆ ಈ ಬಾರಿ ಕಪ್ ನಮ್ದೇ!!
ಬಳಿಕ ಭರವಸೆ ಮೂಡಿಸಿದ ವಾಶಿಂಗ್ಟನ್ ಸುಂದರ್(24 ರನ್ 19ಎಸೆತ) ಹಾಗೂ ನಾಯಕ ದಿನೇಶ್ ಕಾರ್ತಿಕ್(24ರನ್ 19 ಎಸೆತ) ಕೂಡ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಕೃಷ್ಣಪ್ಪ ಗೌತಮ್ ವಾಶಿಂಗ್ಟನ್ ಸುಂದರ್ ಅವರನ್ನು ಬೌಲ್ಡ್ ಮಾಡಿದರೆ ಜಗದೀಶ್ ಸುಚಿತ್ ನಾಯಕ ದಿನೇಶ್ ಕಾರ್ತಿಕ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.
ಬಾಬಾ ಅಪರಾಜಿತ್ ಮತ್ತು ವಿಜಯ್ ಶಂಕರ್ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಈ ಮಾತ್ರವಲ್ಲ ಈ ಜೋಡಿ ತಂಡವನ್ನು ಗೆಲುವಿನ ಸನಿಹದವರೆಗೂ ತಲುಪಿಸಿದರು. ಪಂದ್ವನ್ನು ಮತ್ತಷ್ಟು ರೋಚಕವಾಗಿಸಿದರು. ಈ ಸಂದರ್ಭದಲ್ಲಿ 25 ಎಸೆತಗಳಲ್ಲಿ 40 ರನ್ ಗಳಿಸಿದ ಬಾಬಾ ಅಪರಾಜಿತ್ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರು.
ಬಳಿಕ ವಿಜಯ್ ಶಂಕರ್ ಜೊತೆಗೂಡಿದ ಆರ್ ಅಶ್ವಿನ್ ಗೆಲುವಿಗಾಗಿ ಅಂತಿಮ ಹಂತದ ವರೆಗೂ ಪ್ರಯತ್ನಿಸಿದರೂ ತಮಿಳುನಾಡನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಕರ್ನಾಟಕ ಕೇವಲ ಒಂದು ರನ್ ಅಂತರದಲ್ಲಿ ಗೆದ್ದು ಚಾಂಪಿಯನ್ ಆಗಿದೆ
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ