ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಪಂದ್ಯದ ವೇಳೆ ಕೋಪಗೊಂಡ ರಾಯುಡು, ಜಾಕ್ಸನ್ ನಡುವೆ ಜಗಳ; ವಿಡಿಯೋ

Syed Mushtaq Ali Trophy: Talk Fight Between Angry Ambati Rayudu and Sheldon Jackson During The Match

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಬುಧವಾರ (ಅಕ್ಟೋಬರ್ 12) ಅಂಬಾಟಿ ರಾಯುಡು ಮತ್ತು ಶೆಲ್ಡನ್ ಜಾಕ್ಸನ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕವರ್ಸ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಂಬಾಟಿ ರಾಯುಡು ಕಡೆಗೆ ಶೆಲ್ಡನ್ ಜಾಕ್ಸನ್ ಕೋಪದಿಂದ ನಡೆದುಕೊಂಡು ಬರುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಆಟಗಾರರನ್ನು ಅಂಪೈರ್‌ಗಳು ಮತ್ತು ಇತರ ಆಟಗಾರರು ತಡೆಯಬೇಕಾಯಿತು. ಇಲ್ಲದಿದ್ದರೆ ಅದು ದೈಹಿಕ ಜಗಳವಾಗುತ್ತಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಸೌರಾಷ್ಟ್ರ vs ಬರೋಡಾ ನಡುವಿನ ಪಂದ್ಯದ 9ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ.

ಈ ಇಬ್ಬರು ಆಟಗಾರರ ನಡುವಿನ ಘರ್ಷಣೆಗೆ ಕಾರಣವೇನು ಎಂಬುದರ ಕುರಿತು ಯಾವುದೇ ಅಪ್‌ಡೇಟ್ ಇಲ್ಲ. ಆದರೆ ಇಲ್ಲಿ ಸ್ಲೆಡ್ಜಿಂಗ್ ನಡೆದಿದೆ ಎಂದು ತೋರುತ್ತದೆ ಮತ್ತು ವರದಿಗಳ ಪ್ರಕಾರ ಅಂಬಾಟಿ ರಾಯುಡು ಏನನ್ನಾದರೂ ಹೇಳಿದ್ದಾರೆ. ಸೌರಾಷ್ಟ್ರ ಪರ ಆಡುತ್ತಿರುವ ಶೆಲ್ಡನ್ ಜಾಕ್ಸನ್ ಅದಕ್ಕೆ ಕೋಪಗೊಂಡು ಬರೋಡಾ ನಾಯಕ ರಾಯುಡುಗೆ ವಾಪಸ್ ಪ್ರತಿಕ್ರಿಯಿಸಿದ್ದಾರೆ. ಅವರು ಮಾತನಾಡಿದ್ದು ಮತ್ತು ಕೇಳಿದ್ದು ಸ್ಪಷ್ಟವಾಗಿಲ್ಲ.

Syed Mushtaq Ali Trophy: Talk Fight Between Angry Ambati Rayudu and Sheldon Jackson During The Match

ಅಂಬಾಟಿ ರಾಯುಡು ತಾಳ್ಮೆ ಕಳೆದುಕೊಂಡ ಇತಿಹಾಸವನ್ನು ಮರೆಯುವಂತಿಲ್ಲ. ಐಪಿಎಲ್ ಅಭಿಮಾನಿಗಳು ಹರ್ಭಜನ್ ಸಿಂಗ್ ಮತ್ತು ರಾಯುಡು ಅವರಿಬ್ಬರೂ ಮುಂಬೈ ಇಂಡಿಯನ್ಸ್‌ಗಾಗಿ ಆಡುತ್ತಿದ್ದ ಪಂದ್ಯದ ಸಮಯದಲ್ಲಿ ಅವರ ಜಗಳವನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ರಾಯುಡು ಅವರು ಕಾರಿನಲ್ಲಿ ಪ್ರಯಾಣಿಸುವಾಗ ರಸ್ತೆಯಲ್ಲಿ ಜಗಳವಾಡಿದ್ದಾರೆ. ದೇಶೀಯ ದೈತ್ಯ ಬ್ಯಾಟರ್ ಆಗಿರುವ ಶೆಲ್ಡನ್ ಜಾಕ್ಸನ್ ಅವರು ಕೂಲ್ ಆಟಗಾರ ಎಂದು ತಿಳಿದಿದ್ದರು, ಆದರೆ ಅವರು ಬುಧವಾರ ತಾಳ್ಮೆ ಕಳೆದುಕೊಂಡಂತಿತ್ತು.

ಇದಕ್ಕೂ ಮುನ್ನ ಬರೋಡಾ ತಂಡವನ್ನು ಸೌರಾಷ್ಟ್ರ ನಾಯಕ ಜಯದೇವ್ ಉನದ್ಕಟ್ ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದ್ದರು. ಅಂಬಾಟಿ ರಾಯುಡು ನೇತೃತ್ವದ ಬರೋಡಾ ನಿಗದಿತ 20 ಓವರ್‌ಗಳಲ್ಲಿ 175/4 ಗಳಿಸಿತು. ಬರೋಡಾ ಪರ ಮಿತೇಶ್ ಪಟೇಲ್ ಕೇವಲ 35 ಎಸೆತಗಳಲ್ಲಿ 60 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ವಿಷ್ಣು ಸೋಲಂಕಿ ಕೂಡ 33 ಎಸೆತಗಳಲ್ಲಿ 51 ರನ್ ಗಳಿಸಿ ಉತ್ತಮ ಆಟವಾಡಿದರು. ನಾಯಕ ರಾಯುಡು ಉನದ್ಕತ್ ಬೌಲಿಂಗ್‌ನಲ್ಲಿ ಗೋಲ್ಡನ್ ಡಕ್‌ಗೆ ಔಟಾದರು.

176 ರನ್‌ಗಳ ಗುರಿಯನ್ನು ಸೌರಾಷ್ಟ್ರ 19.4 ಓವರ್‌ಗಳಲ್ಲಿ ಬೆನ್ನಟ್ಟಿತು. ಕೇವಲ 51 ಎಸೆತಗಳಲ್ಲಿ ಕ್ರಮವಾಗಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 97 ರನ್ ಗಳಿಸಿದ ಸಮರ್ಥ್ ವ್ಯಾಸ್ ಸೌರಾಷ್ಟ್ರ ತಂಡದ ಪರ ಸ್ಟಾರ್ ಎನಿಸಿದರು. ಶೆಲ್ಡನ್ ಜಾಕ್ಸನ್ 17 ಎಸೆತಗಳಲ್ಲಿ 16 ರನ್ ಗಳಿಸಿದರೆ, ಚೇತೇಶ್ವರ ಪೂಜಾರ 18 ಎಸೆತಗಳಲ್ಲಿ ಕ್ರಮವಾಗಿ 1 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 14 ರನ್ ಗಳಿಸಿದರು.

Story first published: Wednesday, October 12, 2022, 21:53 [IST]
Other articles published on Oct 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X