ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಚಾಲೆಂಜರ್ ಟ್ರೋಫಿ ತಂಡ ಪ್ರಕಟ, ಮಿಥಾಲಿ, ವೇದಾ, ದೀಪ್ತಿ ನಾಯಕಿಯರು

By Mahesh
T20 Challenger Trophy squads announced : Mithali, Deepti and Veda named as captains

ಬೆಂಗಳೂರು, ಆಗಸ್ಟ್ 02: ಮಹಿಳೆಯರ ಟಿ20 ಚಾಲಂಜರ್ಸ್ ಟ್ರೋಫಿ 2018ಕ್ಕಾಗಿ ಮಹಿಳೆಯರ ಮೂರು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಹೊರ ವಲಯದ ಆಲೂರು ಕ್ರೀಡಾಂಗಣದಲ್ಲಿ ಆಗಸ್ಟ್ 14 ರಿಂದ ಆಗಸ್ಟ್ 21ರ ತನಕ ನಡೆಯಲಿದೆ. ಇಂಡಿಯಾ ಬ್ಲೂ, ಗ್ರೀನ್ ಹಾಗೂ ರೆಡ್ ತಂಡಗಳನ್ನು ಮಹಿಳಾ ಆಯ್ಕೆ ಸಮಿತಿ ಪ್ರಕಟಿಸಿದೆ.

50 ಓವರ್ ಗಳ ಚಾಲೆಂಜರ್ಸ್ ಟ್ರೋಫಿ ಬದಲಿಗೆ ಟಿ20 ಮಾದರಿಯಲ್ಲಿ ಚಾಲೆಂಜರ್ಸ್ ಟ್ರೋಫಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಹಿರಿಯ ತಂಡ ಹಾಗೂ ಅಂಡರ್ 23ರ ಮಹಿಳೆಯರು ಈ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ.

ಪಾದಾರ್ಪಣೆ ಪಂದ್ಯದಲ್ಲೇ ಧೋನಿ ಸ್ಟೈಲ್‌ನಲ್ಲಿ ಫಿನಿಶ್ ಮಾಡಿದ ಕೌರ್ಪಾದಾರ್ಪಣೆ ಪಂದ್ಯದಲ್ಲೇ ಧೋನಿ ಸ್ಟೈಲ್‌ನಲ್ಲಿ ಫಿನಿಶ್ ಮಾಡಿದ ಕೌರ್

ನಾಯಕಿಯರು: ಮಿಥಾಲಿ ರಾಜ್, ದೀಪ್ತಿ ಶರ್ಮ ಹಾಗೂ ವೇದಾ ಕೃಷ್ಣಮೂರ್ತಿ ಅವರನ್ನು ನಾಯಕಿಯರನ್ನಾಗಿ ಕ್ರಮವಾಗಿ ಇಂಡಿಯಾ ಬ್ಲೂ, ಇಂಡಿಯಾ ರೆಡ್ ಹಾಗೂ ಇಂಡಿಯಾ ಗ್ರೀನ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಸ್ಟಾರ್ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ಅವರು ಇಂಗ್ಲೆಂಡಿನಲ್ಲಿ ಆಡುತ್ತಿರುವುದರಿಂದ ಅವರಿಬ್ಬರನ್ನು ಯಾವುದೇ ತಂಡಕ್ಕೆ ಪರಿಗಣಿಸಿಲ್ಲ.

ಕರ್ನಾಟಕ ಮೂಲದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಇಬ್ಬರು ಇಂಡಿಯಾ ಗ್ರೀನ್ ತಂಡದಲ್ಲೇ ಸ್ಥಾನ ಪಡೆದುಕೊಂಡಿದ್ದಾರೆ.

ತಂಡಗಳು ಇಂತಿವೆ:
ಇಂಡಿಯಾ ಬ್ಲೂ : ಮಿಥಾಲಿ ರಾಜ್ (ನಾಯಕಿ), ವನಿತಾ ವಿಆರ್, ಡಿ ಹೇಮಲತಾ, ನೇಹಾ ತನ್ವಾರ್, ಅನುಜಾ ಪಾಟೀಲ್, ಸೈಮಾ ಥಾಕೊರ್, ತನೀಯಾ ಭಾಟೀಯಾ (ವಿಕೆಟ್ ಕೀಪರ್), ರಾಧಾ ಯಾದವ್, ಪ್ರೀತಿ ಬೋಸ್, ಪೂನಮ್ ಯಾದವ್, ಕೀರ್ತಿ ಜೇಮ್ಸ್, ಮಾನ್ಸಿ ಜೋಶಿ, ಸುಮನ್ ಗೂಲಿಯಾ.

ಇಂಡಿಯಾ ರೆಡ್: ದೀಪ್ತಿ ಶರ್ಮ (ನಾಯಕಿ), ಪೂನಮ್ ರೌತ್, ದಿಶಾ ಕಸತ್, ಮೊನಾ ಮೇಶಮ್, ಹರ್ಲೆನೆ ಡಿಯೋಲ್, ತನುಶ್ರೀ ಸರ್ಕಾರ್, ಏಕ್ತಾ ಬಿಶ್ತ್, ತನುಜಾ ಕನ್ವೆರ್, ಶಿಖಾ ಪಾಂಡೆ, ಶಾಂತಿ ಕುಮಾರಿ, ರೀಮಾ ಲಕ್ಷ್ಮಿ ಎಕ್ಕ, ನುಜ್ವತ್ ಪರ್ವೀನ್ (ವಿಕೆಟ್ ಕೀಪರ್), ಅದಿತಿ ಶರ್ಮ

ಇಂಡಿಯಾ ಗ್ರೀನ್: ವೇದಾ ಕೃಷ್ಣಮೂರ್ತಿ(ನಾಯಕಿ), ಜೇಮಿಯಾ ರೋಡ್ರಿಗ್ರೇಜ್, ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಿಕಾ ದಾಸ್, ಅರುಂಧತಿ ರೆಡ್ಡಿ, ಸುಷ್ಮಾ ವರ್ಮ(ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಫಾತೀಮಾ ಜಾಫರ್, ಸುಶ್ರಿ ದಿವ್ಯಾದರ್ಶಿನಿ, ಸುಕನ್ಯಾ ಪರಿದಾ, ಝೂಲನ್ ಗೋಸ್ವಾಮಿ, ಸಜನಾ ಎಸ್.

Story first published: Thursday, August 2, 2018, 16:29 [IST]
Other articles published on Aug 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X