ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಅಫ್ಘಾನಿಸ್ತಾನಕ್ಕೆ ಮತ್ತೊಂದು ಗೆಲುವು; ಭಾರತ, ನ್ಯೂಜಿಲೆಂಡ್‌ಗೆ ಹೆಚ್ಚಾಯ್ತು ತಲೆನೋವು

T20 World Cup 2021: Afghanistan won against Namibia by 62 runs

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 27ನೇ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಸೆಣಸಾಟ ನಡೆಸಿದವು. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಹೀಗೆ ಟಾಸ್ ಗೆದ್ದ ಅಫ್ಘಾನಿಸ್ಥಾನ ತಂಡದ ಪರ ಆರಂಭಿಕ ಆಟಗಾರರಾಗಿ ಬಂದ ಹಜರತುಲ್ಲಾ ಝಜೈ 33 ಮತ್ತು ಮೊಹಮ್ಮದ್ ಶಹಜಾದ್ 45 ರನ್ ಕಲೆ ಹಾಕುವುದರ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಇನ್ನುಳಿದಂತೆ ರಹಮಾನುಲ್ಲಾ ಗುರ್ಬಾಜ್ 4, ನಜಿಬುಲ್ಲಾ ಝದ್ರಾನ್ 7, ಅಸ್ಗರ್ ಅಫ್ಗಾನ್ 31, ಮೊಹಮ್ಮದ್ ನಬಿ ಅಜೇಯ 32 ಮತ್ತು ಗುಲ್ಬದಿನ್ ನೈಬ್ ಅಜೇಯ 1 ರನ್ ಕಲೆ ಹಾಕಿದರು. ಈ ಮೂಲಕ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು.

ಟಿ20 ವಿಶ್ವಕಪ್: ಫೈನಲ್‌ ಪ್ರವೇಶಿಸಲಿರುವ ತಂಡಗಳನ್ನು ಹೆಸರಿಸಿದ ಬೆನ್ ಸ್ಟೋಕ್ಸ್ಟಿ20 ವಿಶ್ವಕಪ್: ಫೈನಲ್‌ ಪ್ರವೇಶಿಸಲಿರುವ ತಂಡಗಳನ್ನು ಹೆಸರಿಸಿದ ಬೆನ್ ಸ್ಟೋಕ್ಸ್

ಅತ್ತ ಅಫ್ಘಾನಿಸ್ತಾನ ನೀಡಿದ 161 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತು. ಈ ಮೂಲಕ ಅಫ್ಘಾನಿಸ್ತಾನ 62 ರನ್‌ಗಳ ಗೆಲುವು ದಾಖಲಿಸಿದೆ. ಹೀಗಾಗಿ ಅಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು ಉತ್ತಮ ನೆಟ್ ರನ್ ರೇಟ್ ಕೂಡ ಪಡೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ಅಫ್ಘಾನಿಸ್ತಾನ 2 ಪಂದ್ಯಗಳಲ್ಲಿ ಜಯ ಗಳಿಸಿದ್ದು, 1 ಪಂದ್ಯದಲ್ಲಿ ಸೋಲುಂಡಿದೆ ಹಾಗೂ +3.097 ನೆಟ್ ರನ್ ರೇಟ್ ಹೊಂದಿದೆ. ಅಫ್ಘಾನಿಸ್ತಾನ ಇಷ್ಟು ದೊಡ್ಡ ಮಟ್ಟದ ನೆಟ್ ರನ್ ರೇಟ್ ಹೊಂದಿರುವುದು ಇದೀಗ ಇದೇ ಗುಂಪಿನ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್‌ಗೆ ಸೆಮಿಫೈನಲ್ ಪ್ರವೇಶಿಸುವಲ್ಲಿ ಅಂಡಿಯನ್ನುಂಟುಮಾಡಿದರೂ ಮಾಡಬಹುದು.

Story first published: Sunday, October 31, 2021, 20:27 [IST]
Other articles published on Oct 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X