ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ ಡಿಆರ್‌ಎಸ್

ಐಪಿಎಲ್ ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆಯೇ ಟಿ20 ವಿಶ್ವಕಪ್‌ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಪುರುಚರ ಚುಟುಕು ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಡಿಸಿಶನ್ ರಿವ್ಯೂ ಸಿಸ್ಟಮ್ ಬಳಸಿಕೊಳ್ಳಲು ಐಸಿಸಿ ನಿರ್ಧರಿಸಿದೆ. ಈ ಬಗ್ಗೆ ಐಸಿಸಿ ಭಾನುವಾರ ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ತಿಂಗಳ ಮಧ್ಯದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಡಿಸಿಶನ್ ರಿವ್ಯೂ ಸಿಸ್ಟಮ್‌ಅನ್ನು ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಕಮಿಟಿ ನಿರ್ಧರಿಸಿರುವುದಾಗಿ ಐಸಿಸಿಯ ನಿಯಮಾವಳಿಯಲ್ಲಿ ತಿಳಿಸಿದೆ.

ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್

ಟಿ20 ವಿಶ್ವಕಪ್‌ನ ನಿಯಮಾವಳಿಯನ್ನು ಐಸಿಸಿ ಬಿಡುಗಡೆಗೊಳಿಸಿದ್ದು ಇದರಲ್ಲಿ ಒಂದು ತಂಡಕ್ಕೆ ಒಂದು ಇನ್ನಿಂಗ್ಸ್‌ನಲ್ಲಿ ಎರಡು ರಿವ್ಯೂ ಪಡೆಯುವ ಅವಕಾಶವಿದೆ. 2016ರ ವರೆಗೂ ಟಿ20 ಕ್ರಿಕೆಟ್‌ಗೆ ಡಿಆರ್‌ಎಸ್ ಪರಿಚಯಿಸಿರಲಿಲ್ಲ. 2018ರಲ್ಲಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಡಿಆರ್‌ಎಸ್ ಬಳಸಿಕೊಳ್ಳಲಾಗಿತ್ತು. ನಂತರ 2020ರ ಮಹಿಳಾ ವಿಶ್ವಕಪ್‌ನಲ್ಲಿಯೂ ಡಿಆರ್‌ಎಸ್ ಬಳಸಿಕೊಂಡಿತ್ತು ಐಸಿಸಿ.

ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿ

ಆಗ ಪ್ರತಿ ತಂಡಗಳಿಗೂ ಒಂದು ಡಿಆರ್‌ಎಸ್ ನೀಡಲಾಗಿತ್ತು. ಆದರೆ ಕೋರೊನಾವೈರಸ್‌ನ ಬಳಿಕ ಅನುಭವಿ ಅಂಪಾಯರ್‌ಗಳ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ರಿವ್ಯೂ ಸಂಖ್ಯೆಯನ್ನು ಹೆಚ್ಚಳಗೊಳಿಸಲಾಗಿದೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿಯೂ ಎರಡು ಡಿಆರ್‌ಎಸ್ ನೀಡಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಈ ಹಿಂದೆ ಇದ್ದ ಡಿಆರ್‌ಎಸ್ ಪ್ರಮಾಣವನ್ನು ಎರಡರಿಂದ ಮೂರಕ್ಕೆ ಏರಿಸಲಾಗಿದ್ದರೆ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಒಂದರಿಂದ ಎರಡಕ್ಕೆ ಏರಿಕೆ ಮಾಡಲಾಗಿದೆ.

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್

ಮುಂದಿನ ಭಾನುವಾರದಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಮೊದಲಿಗೆ ಗ್ರೂಪ್ ಹಂತದ ಪಂದ್ಯಗಳು ನಡೆಯಲಿದ್ದು ಈ ಹಂತದಲ್ಲಿ ಮ ಪ್ರಧಾನ ಸುತ್ತಿಗೆ ಆಯ್ಕೆಯಾಗಲು 8 ತಂಡಗಳು ಕಾದಾಟವನ್ನು ನಡೆಸಲಿದೆ. ಇದರಲ್ಲಿ ಆಯ್ಕೆಯಾದ ನಾಲ್ಕು ತಂಡಗಳು ಸೂಪರ್ 12 ಸುತ್ತಿನಲ್ಲಿ ಉಳಿದ ತಂಡಗಳು ಜೊತೆಗೆ ಸೆಣೆಸಾಟವನ್ನು ನಡೆಸಲಿದೆ.

ಒಮಾನ್ ಮತ್ತು ಪಪುವಾ ನ್ಯೂಗಿನಿ ಮೊದಲ ಪಂದ್ಯದಲ್ಲಿ ಸೆಣೆಸಾಟವನ್ನು ಸೆಡೆಸಲಿದೆ. ಅದಾದ ಬಳಿಕ ಬಾಂಗ್ಲಾದೇಶ ಹಾಗೂ ಸ್ಕಾಟ್‌ಲೆಂಡ್ ತಂಡಗಳು ಕೂಡ ಸೆಣೆಸಾಡಲಿದೆ. ಒಮಾನ್, ಪಪುವಾ ನ್ಯೂಗಿನಿ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ತಂಡಗಳು ಗ್ರೂಪ್ 'ಬಿ'ಯಲ್ಲಿದ್ದರೆ ಗ್ರೂಫ್ ಎಯಲ್ಲಿ ಐರ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳಿವೆ. ಈ ಎರಡು ಗುಂಪುಗಳಿಂದ ತಲಾ 2ರಂತೆ ನಾಲ್ಕು ತಂಡಗಳೂ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.

ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!

ಸೂಪರ್ 12ರಲ್ಲಿಯೂ ಎರಡು ಗುಂಪಿಗಳಿದ್ದು ಅಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಮಡಗಳು ಒಂದು ಗುಂಪಿನಲ್ಲಿದ್ದರೆ ಭಾರತ, ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮತ್ತೊಂದು ಗುಂಪಿನಲ್ಲಿದೆ. ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿದೆ. ಎರಡು ಗುಂಪಿನಿಂದ ತಲಾ ಎರಡು ತಂಡಗಳು ಸೆಮಿಫೈನಲ್‌ಗೆ ಆಯ್ಕೆಯಾಗಲಿದ್ದು ನಂತರ ಪ್ರಶಸ್ತಿ ಸುತ್ತಿಗಾಗಿ ಹೋರಾಟವನ್ನು ನಡೆಸಲಿದೆ.

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ 5/6 ರನ್ ಬೇಕಿದ್ದಾಗ ಸಿಕ್ಸ್‌ ಚಚ್ಚಿದವರ ಪಟ್ಟಿ!ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ 5/6 ರನ್ ಬೇಕಿದ್ದಾಗ ಸಿಕ್ಸ್‌ ಚಚ್ಚಿದವರ ಪಟ್ಟಿ!

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದ ಎರಡನೇ ದಿನ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಬದ್ಧ ವೈರಿಗಳು ತಮ್ಮ ಮೊದಲ ಪಂದ್ಯದಲ್ಲಿಯೇ ಹಣಾಹಣಿ ನಡೆಸಲಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಹೀಗಾಗಿ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರಿಸುತ್ತುದ್ದಾರೆ. ಈ ಎರಡು ತಂಡಗಳು 2019ರ ಏಕದಿನ ವಿಶ್ವಕಪ್‌ನ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 18 - October 26 2021, 03:30 PM
ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್
Predict Now

For Quick Alerts
ALLOW NOTIFICATIONS
For Daily Alerts
Story first published: Sunday, October 10, 2021, 16:00 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X