ಟಿ20 ವಿಶ್ವಕಪ್: ಅಫ್ಘಾನಿಸ್ತಾನ vs ನಮೀಬಿಯಾ ಟಾಸ್ ವರದಿ, ಆಡುವ ಬಳಗ ಮತ್ತು ಲೈವ್‌ ಸ್ಕೋರ್

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 27ನೇ ಪಂದ್ಯ ಇಂದು ನಮೀಬಿಯಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ನಡೆಯುತ್ತಿದೆ. ಇಂದು ಮಧ್ಯಾಹ್ನ ಭಾರತೀಯ ಕಾಲಮಾನದ ಪ್ರಕಾರ 3.30ಕ್ಕೆ ಆರಂಭವಾಗಿರುವ ಈ ಪಂದ್ಯ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಆಡುವ ಬಳಗಗಳು

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್: ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ ( ವಿಕೆಟ್ ಕೀಪರ್ ), ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ (ನಾಯಕ), ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಂ ಜನತ್, ಹಮೀದ್ ಹಸನ್, ನವೀನ್-ಉಲ್-ಹಕ್

ನಮೀಬಿಯಾ ಪ್ಲೇಯಿಂಗ್ ಇಲೆವೆನ್: ಕ್ರೇಗ್ ವಿಲಿಯಮ್ಸ್, ಮೈಕೆಲ್ ವ್ಯಾನ್ ಲಿಂಗೆನ್, ಜೇನ್ ಗ್ರೀನ್ (ವಿಕೆಟ್ ಕೀಪರ್‌), ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೈಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್

ಅಫ್ಘಾನಿಸ್ತಾನ vs ನಮೀಬಿಯಾ ಪಂದ್ಯದ ಲೈವ್‌ ಸ್ಕೋರ್:

1
51690

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯವನ್ನು ಸ್ಕಾಟ್ಲೆಂಡ್ ವಿರುದ್ಧ ಆಡಿದ ನಮೀಬಿಯಾ 4 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಅತ್ತ ಅಫ್ಘಾನಿಸ್ತಾನ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳ ಅಮೋಘ ಜಯವನ್ನು ಸಾಧಿಸಿತ್ತು ಹಾಗೂ ತನ್ನ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಿದ ಆಫ್ಘಾನಿಸ್ತಾನ ಸೋಲು ಕಂಡಿತ್ತು.

ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿರುವ ಅಫ್ಘಾನಿಸ್ತಾನ 1 ಪಂದ್ಯದಲ್ಲಿ ಗೆದ್ದಿದ್ದು ಮತ್ತೊಂದು ಪಂದ್ಯದಲ್ಲಿ ಸೋಲನುಭವಿಸಿ 2 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅತ್ತ ನಮೀಬಿಯಾ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ 1 ಪಂದ್ಯವನ್ನಾಡಿ ಗೆದ್ದಿದ್ದು 2 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ. ಹೀಗೆ ಗೆಲುವಿನಲ್ಲಿ ಸಮಬಲವನ್ನು ಸಾಧಿಸಿರುವ ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳ ನಡುವಿನ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, October 31, 2021, 15:28 [IST]
Other articles published on Oct 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X