ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ಆಡಂ ಝಂಪಾ ಸಿದ್ಧ: ಆಷ್ಟನ್ ಅಗರ್ ಹೇಳಿಕೆ

T20 World Cup: Ashton Agar said Adam Zampa is feeling better he will play match against England

ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ನರ್ ಆಡಂ ಜಂಪಾ ಕೊರೊನಾವೈರಸ್ ಪಾಸಿಟಿವ್‌ಗೆ ಒಳಗಾಗಿದ್ದ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಝಂಪಾ ಚೇತರಿಸಿಕೊಂಡಿದ್ದು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಂಪೂರ್ಣವಾಗಿ ಸಿದ್ಧವಾಗಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಆಟಗಾರ ಆಷ್ಟನ್ ಅಗರ್ ಮಾಹಿತಿ ನೀಡಿದ್ದಾರೆ. ಮುಂದಿನ ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯದಲ್ಲಿ ಝಂಪಾ ಆಡಲಿದ್ದಾರೆ ಎಂದು ಆಗರ್ ಪ್ರತಿಕ್ರಿಯಿಸಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಪಂದ್ಯಕ್ಕೂ ಮುನ್ನ ಝಂಪಾ ಅವರ ಕೋವಿಡ್ ವರದಿ ಪಾಸಿಟಿವ್ ಎಂದು ಬಂದಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯಕ್ಕೂ ಮುನ್ನ ಝಂಪಾ ಅವರಲ್ಲಿ ಕೊರೊನಾವೈರಸ್‌ನ ಸಣ್ಣಪುಟ್ಟ ಲಕ್ಷಣಗಳು ಕಂಡುಬಂದಿರುವುದನ್ನು ಆಸ್ಟ್ರೇಲಿಯಾ ತಂಡದ ವಕ್ತಾರ ಮಾಹಿತಿ ನೀಡಿದ್ದರು.

IND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿIND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿ

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಝಂಪಾ ಬದಲಿಗೆ ಆಷ್ಟನ್ ಅಗರ್ ಕಣಕ್ಕಿಳಿದಿದ್ದರಿ. ಆದರೆ ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ದೊರೆಯುವ ಯಾವುದೇ ನಿರೀಕ್ಷೆಗಳು ಇಲ್ಲ ಆಷ್ಟನ್ ಅಗರ್ ಹೇಳಿದ್ದು ಮೊದಲ ಆಯ್ಕೆಯ ಪ್ಲೇಯಿಂಗ್ XIನಲ್ಲಿ ತಾನು ಸ್ಥಾನ ಪಡೆಯುವುದಿಲ್ಲ ಎಂದು ನೆರವಾಗಿ ಹೇಳಿಕೊಂಡಿದ್ದಾರೆ.

ಆಸಿಸ್ ಸ್ಪಿನ್ನರ್ ಆಡಂ ಝಂಪಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಸಿಸ್ ತಂಡ ಸೋಲು ಅನುಭವಿಸಿದ್ದರೂ ಝಂಪಾ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದರು. ಆಸ್ಟ್ರೇಲಿಯಾದ ಈ ವಿಶ್ವಕಪ್ ತಂಡದಲ್ಲಿ ಝಂಪಾ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಐಸಿಸಿಯ ನೂತನ ನಿಯಮದ ಪ್ರಕಾರ ಆಟಗಾರರಿಗೆ ಕೊವಿಡ್ ದೃಢಪಟ್ಟರೂ ಸಣ್ಣಪುಟ್ಟ ಲಕ್ಷಣಗಳು ಮಾತ್ರವೇ ಇದ್ದರೆ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಲಾಗುತ್ತದೆ.

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್: ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಫಿಲ್ ಸೈಮನ್ಸ್ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್: ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಫಿಲ್ ಸೈಮನ್ಸ್

ಶುಕ್ರವಾರ ನಡೆಯಲಿದೆ ಮಹತ್ವದ ಪಂದ್ಯ: ಶುಕ್ರವಾರದಂದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು ಎರಡು ತಂಡಗಳಿಗೂ ಈ ಪಂದ್ಯ ಮಹತ್ವವೆನಿಸಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಒಂದು ಸೋಲು ಹಾಗೂ ಒಂದು ಗೆಲುವು ಸಾಧಿಸಿದ್ದು ಈ ಪಂದ್ಯದ ಫಲಿತಾಂಶ ಈ ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು ಎರಡು ತಂಡಗಳಿಗೂ ಅತ್ಯಂತ ಮಹತ್ತರ ಪಾತ್ರವಹಿಸಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಇತ್ತಂಡಗಳು ತೀವ್ರ ಪೈಪೋಟಿ ನಡೆಸಲಿದೆ.

Story first published: Wednesday, October 26, 2022, 16:16 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X