ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿ

T20 world cup: Former Coach Ravi Shastri choose the bowler who should replace Jasprit Bumrah

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವುದು ಖಚಿತವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಭಾರತೀಯ ಆಗಟಾರರ ಪಡೆ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರೂ ಬೂಮ್ರಾಗೆ ಯಾರು ಬದಲಿ ಆಟಗಾರ ಎಂಬುದು ಖಚಿತವಾಗಿಲ್ಲ. ಆಸ್ಟ್ರೇಲಿಯಾಗೆ ತೆರಳಿದ ಒಂದು ವಾರಗಳ ಬಳಿಕ ಈ ನಿರ್ಧಾರವನ್ನು ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳಲಿದೆ.

ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಝಿ ಕೋಚ್ ರವಿ ಶಾಸ್ತ್ರಿ ಟೀಮ್ ಇಂಡಿಯಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಾಯದಿಂದ ಹೊರಬಿದ್ದಿರುವ ಜಸ್ಪ್ರೀತ್ ಬೂಮ್ರಾ ಬದಲಿಗೆ ಟೀಮ್ ಇಂಡಿಯಾದಲ್ಲಿ ಯಾವ ಆಟಗಾರನಿಗೆ ಅವಕಾಶ ನಿಡುವುದು ಸೂಕ್ತ ಎಂಬುದನ್ನು ರವಿ ಶಾಸ್ತ್ರಿ ಉಲ್ಲೇಖಿಸಿದ್ದು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಪರವಾಗಿ ಈ ಆಟಗಾರ ಖಂಡಿತಾ ಮಿಂಚುಹರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IND vs SA 2022 : ಮೊದಲನೆ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಮೂರು ದಾಖಲೆಗಳಿವುIND vs SA 2022 : ಮೊದಲನೆ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಮೂರು ದಾಖಲೆಗಳಿವು

ಯಾರು ಆ ವೇಗದ ಬೌಲರ್

ಯಾರು ಆ ವೇಗದ ಬೌಲರ್

ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬೂಮ್ರಾಗೆ ಬದಲಿಯಾಗಿ ಅದ್ಭುತವಾಗಿ ಮಿಂಚಬಲ್ಲ ಆಟಗಾರ ಎಂದು ರವಿ ಶಾಸ್ತ್ರಿ ಉಲ್ಲೇಖಿಸಿರುವುದು ಬೇರೆ ಯಾರನ್ನೂ ಅಲ್ಲ, ಹಿರಿಯ ಬೌಲರ್ ಮೊಹಮ್ಮದ್ ಶಮಿ ಅವರನ್ನು. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಭಾತ ತಂಡದ ಭಾಗವಾಗಿದ್ದ ಶಮಿ ಅದಾದ ಬಳಿಕ ಚುಟುಕು ಮಾದರಿಯ ತಂಡದಿಂದ ಹೊರಬಿದ್ದಿದ್ದರು. ಆದರೆ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಇಂಥಾ ಅನುಭವಿ ಆಟಗಾರನನ್ನು ಭಾರತದ ಚುಟುಕು ಮಾದರಿಗೆ ಪರಿಗಣಿಸದಿರುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದೀಗ ರವಿ ಶಾಸ್ತ್ರಿ ಕೂಡ ಮೊಹಮ್ಮದ್ ಶಮಿ ಬಗ್ಗೆ ಬ್ಯಾಟಿಂಗ್ ಮಾಡಿದ್ದು ವಿಶ್ವಕಪ್ ತಂಡದಲ್ಲಿ ಶಮಿ ಸೂಕ್ತ ಆಟಗಾರ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿನ ಅನುಭವ ನಿರ್ಣಾಯಕ

ಆಸ್ಟ್ರೇಲಿಯಾದಲ್ಲಿನ ಅನುಭವ ನಿರ್ಣಾಯಕ

"ನಿಶ್ಚಿತವಾಗಿಯೂ ಆಸ್ಟ್ರೇಲಿಯಾದ ಪರಿಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಅವರ ಅನುಭವ ತಂಡಕ್ಕೆ ದೊಡ್ಡ ಬಲವಾಗಲಿದೆ. ಕಳೆದ ಆರು ವರ್ಷಗಳಲ್ಲಿ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಭಾರೀ ಯಶಸ್ಸು ಸಾಧಿಸಿದೆ. ಭಾರತ ಯಶಸ್ಸು ಸಾಧಿಸಿದ ಆ ಪ್ರವಾಸದಲ್ಲಿ ಶಮಿ ತಂಡದ ಪ್ರಮುಖ ಭಾಗವಾಗಿದ್ದರು. ಹಾಗಾಗಿ ಆಸ್ಟ್ರೇಲಿಯಾ ನೆಲದಲ್ಲಿಯೇ ನಡೆಯುವ ಈ ಬಾರಿಯ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅವರ ಅನುಭವವನ್ನು ಪರಿಗಣಿಸಲೇಬೇಕಾಗುತ್ತದೆ" ಎಂದಿದ್ದಾರೆ ರವಿಶಾಸ್ತ್ರಿ

ಮೀಸಲು ಆಟಗಾರನಾಗಿದ್ದಾರೆ ಮೊಹಮ್ಮದ್ ಶಮಿ

ಮೀಸಲು ಆಟಗಾರನಾಗಿದ್ದಾರೆ ಮೊಹಮ್ಮದ್ ಶಮಿ

ಇನ್ನು ಟೀಮ್ ಇಂಡಿಯಾದ ವಿಶ್ವಕಪ್‌ನ ಪ್ರಾಥಮಿಕ ತಂಡದಲ್ಲಿ ಅನುಭವಿ ಶಮಿ ಮೊದಲಿಗೆ ಸ್ಥಾನವನ್ನು ಪಡೆದುಕೊಂಡಿಲ್ಲವಾದರೂ ಅವರನ್ನು ಮೀಸಲು ಆಟಗಾರನನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ವಿಶ್ವಕಪ್‌ಗೆ ಬೂಮ್ರಾ ಅಲಭ್ಯವಾಗಿರುವ ಕಾರಣ ಬೂಮ್ರಾ ವಿಶ್ವಕಪ್‌ನಲ್ಲಿ ಭಾಗವಹಿಸುವ ಅಂತಿಮ 15 ಆಟಗಾರರ ಬಳಗದಲ್ಲಿ ಶಮಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮೊಹಮ್ಮದ್ ಶಮಿ ಜೊತೆಗೆ ಮತ್ತೋರ್ವ ಪ್ರತಿಭಾವಂತ ವೇಗಿ ದೀಪಕ್ ಚಾಹರ್ ಕೂಡ ಮೀಸಲು ಆಟಗಾರನಾಗಿದ್ದು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯಾಗೆ ತೆರಳಿರುವ ಭಾರತ ತಂಡ ಅಲ್ಲಿನ ಪರಿಸ್ಥಿತಿಗೆ ಯಾರು ಸೂಕ್ತ ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿದ ಬಳಿಕ ಅಕ್ಟೋಬರ್ 15ರಂದು ಬದಲಿ ಆಟಗಾರನನ್ನು ಹೆಸರಿಸುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Friday, October 7, 2022, 20:44 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X