ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ಆತ್ಮಸ್ಥೈರ್ಯ ಉತ್ತಮವಾಗಿದೆ: ಸತತ ಎರಡು ಸೋಲಿನ ಬಳಿಕ ಪಾಕ್ ಆಟಗಾರನ ಹೇಳಿಕೆ

T20 World Cup: Haris Rauf confident about match against Netherlands said Pakistan teams morale is good

ಟಿ20 ವಿಶ್ವಕಪ್‌ನಲ್ಲಿ ಭಾನುವಾರ ಪಾಕಿಸ್ತಾನ ಮೂರನೇ ಪಂದ್ಯವನ್ನಾಡಲಿದ್ದು ನೆದರ್ಲೆಂಡ್ಸ್ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಆಘಾತಕಾರಿ ರೀತಿಯಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಆಟಗಾರ ಹ್ಯಾರಿಸ್ ರೌಫ್ ಮಾತನಾಡಿದ್ದು ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕವೂ ತಂಡದ ಆತ್ಮಸ್ಥೈರ್ಯ ಚೆನ್ನಾಗಿದೆ ಎಂದಿದ್ದಾರೆ.

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯಗಳಲ್ಲಿ ಗೆಲುವಿನ ಸನಿಹಕ್ಕೆ ಬಂದು ಜಿಂಬಾಬ್ವೆ ಸೋಲು ಅನುಭವಿಸಿತ್ತು. ಈ ಮೂಲಕ ಗ್ರೂಪ್ 2ರ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಕಾಕಾರರ ಬಾಯ್ಮುಚ್ಚಿಸಲಿದ್ದೇವೆ ಎಂಬ ಮಾತು ಹೇಳಿದ್ದಾರೆ.

ಮಾತನಾಡುವುದು ಜನರ ಕೆಲಸ

ಮಾತನಾಡುವುದು ಜನರ ಕೆಲಸ

ಇನ್ನು ಪಾಕಿಸ್ತಾನದ ಪ್ರದರ್ಶನದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ ಹ್ಯಾರಿಸ್ ರೌಫ್ ಪ್ರತಿಕ್ರಿಯೆ ನೀಡಿದ್ದಾರೆ. "ಮಾತನಾಡುವುದು ಜನರ ಕೆಲಸ, ಹಾಗಾಗಿ ಅವರು ಮಾತನಾಡುತ್ತಾರೆ. ನೀವು ಆಡುವ ಯಾವುದೇ ಆಟವಾಗಲಿ ನೀವು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ನಾವಿಲ್ಲಿ ಟೂರ್ನಮೆಂಟ್ ಆಡಲು ಬಂದಿದ್ದೇವೆ. ನಮ್ಮ ಗುರಿ ಸಂಪೂರ್ಣವಾಗಿ ಅದರ ಮೇಲಿದೆ. ನಾವು ಅವರ ಮಾತುಗಳನ್ನು ಕೇಳಿಸಿಕೊಳ್ಳದಿರಲು ಪ್ರಯತ್ನಿಸುತ್ತೇವೆ. ಕೆಲ ಸಕಾರಾತ್ಮಕ ಮಾತುಗಳು ಕೂಡ ನಿಮಗೆ ನೋವುಂಡು ಮಾಡಬಹುದು ಅಥವಾ ಋಣಾಯತ್ಮಕ ಮಾತುಗಳು ಕೂಡ ನೋವುಂಟು ಮಾಡಬಹುದು" ಎಂದಿದ್ದಾರೆ ಹ್ಯಾರಿಸ್ ರೌಫ್.

ಬಯಸಿದ ಆರಂಭ ದೊರೆಯಲಿಲ್ಲ

ಬಯಸಿದ ಆರಂಭ ದೊರೆಯಲಿಲ್ಲ

ಇನ್ನು ಮುಂದುವರಿದು ಮಾತನಾಡಿದ ಹ್ಯಾರಿಸ್ ರೌಫ್ ಮೊದಲ ಎರಡು ಪಂದ್ಯಗಳಲ್ಲಿ ಸೋಲಿನ ಹೊರತಾಗಿಯೂ ತಂಡದ ಆತ್ಮಸ್ಥೈರ್ಯಕ್ಕೆ ಕೊರತೆಯುಂಟಾಗಿಲ್ಲ ಎಂದಿದ್ದಾರೆ. "ನಾವು ಬಯಸಿದ ರೀತಿಯ ಆರಂಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ತಂಡದ ಆತ್ಮಸ್ಥೈರ್ಯ ಉತ್ತಮವಾಗಿದೆ. ಸೋಲಿನಿಂದಾಗಿ ನೋವುಂಟಾಗಿದ್ದರೂ ಪರಸ್ಪರ ಆಟಗಾರರ ಸಾಮರ್ಥ್ಯದ ಬಗ್ಗೆ ನಮಗೆಲ್ಲಾ ನಂಬಿಕೆಯಿದೆ. ನಾವೆಲ್ಲಾ ಜೊತೆಯಾಗಿ ಕುಳಿತು ನಮ್ಮ ತಪ್ಪುಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ವಿಶ್ವಕಪ್‌ನಂತಾ ವೇದಿಕೆಯಲ್ಲಿ ದುರ್ಬಲ ಅಥವಾ ಪ್ರಬಲ ತಮಡಗಳು ಎಂಬುದು ಇರುವುದಿಲ್ಲ. ಎಲ್ಲರೂ ಬಂದಿರುವುದು ವಿಶ್ವಕಪ್ ಗೆಲುವಿಗಾಗಿ" ಎಂದಿದ್ದಾರೆ ಪಾಕ್ ವೇಗಿ ರೌಫ್.

ಪಾಕಿಸ್ತಾನದ ಸವಾಲಿಗೆ ಸಿದ್ಧ ಎಂದ ನೆದರ್ಲೆಂಡ್ಸ್ ಕೋಚ್

ಪಾಕಿಸ್ತಾನದ ಸವಾಲಿಗೆ ಸಿದ್ಧ ಎಂದ ನೆದರ್ಲೆಂಡ್ಸ್ ಕೋಚ್

ಇನ್ನು ಪಾಕಿಸ್ತಾನದ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ನೆದರ್ಲೆಂಡ್ಸ್ ತಂಡದ ಕೋಚ್ ರಿಯಾನ್ ಕುಕ್ ಹೇಳಿಕೆ ನೀಡಿದ್ದು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಪಾಖಿಸ್ತಾನ ತಂಡವನ್ನು ಮಣಿಸುವುದು ಸಾಧ್ಯ ಎಂಬುದು ನಮಗೆ ತಿಳಿದಿದೆ. ಕೆಲವೇ ಸಮಯಗಳ ಹಿಂದೆ ನಾವು ಅವರನ್ನು ವಿಶ್ವ ಸೂಪರ್ ಲೀಗ್‌ನಲ್ಲಿ ಎದುರಿಸಿದ್ದೆವು. ಆ ಪಂದ್ಯಗಳಲ್ಲಿ ನಾವು ಸಾಕಷ್ಟು ಪೈಪೋಟಿಯನ್ನು ನಿಡಲು ಸಾಧ್ಯವಿತ್ತು. ಈ ಬಾರಿ ನಾವು ಗೆಲುವಿನ ಗೆರೆ ದಾಟುವ ಪ್ರಯತ್ನ ನಡೆಸಲಿದ್ದೇವೆ" ಎಂದಿದ್ದಾರೆ ನೆದರ್ಲೆಂಡ್ಸ್ ತಂಡದ ಕೋಚ್ ರಿಯಾನ್ ಕುಕ್.

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಪಾಕಿಸ್ತಾನ ಸಂಭಾವ್ಯ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೇನ್
ನೆದರ್ಲೆಂಡ್ಸ್ ಸಂಭಾವ್ಯ ಆಡುವ ಬಳಗ: ಸ್ಟೀಫನ್ ಮೈಬರ್ಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡ್, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್

Story first published: Sunday, October 30, 2022, 11:41 [IST]
Other articles published on Oct 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X