ಟಿ20 ವಿಶ್ವಕಪ್ ಈಗ ಅಪ್ರಸ್ತುತ ಎಂದ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕಿರಾನ್ ಪೊಲಾರ್ಡ್

ಮುಂಬೈ ಇಂಡಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಈ ಸಂದರ್ಭದಲ್ಲಿ ತಾನು ಟಿ20 ವಿಶ್ವಕಪ್‌ನ ಬಗ್ಗೆ ಯಾವುದೇ ರೀತಿಯಲ್ಲೂ ಚಿಂತಿಸುತ್ತಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ತಾನು ಐಪಿಎಲ್‌ನಲ್ಲಿ ಆಡುತ್ತಿರುವ ಕಾರಣದಿಂದಾಗಿ ಅದು ಅಪ್ರಸ್ತುತ ಎಂದಿದ್ದಾರೆ ಕಿರಾನ್ ಪೊಲಾರ್ಡ್. ನಾನು ಹೆಚ್ಚು ದೂರ ಚಿತ್ತ ಹರಿಸಲು ಬಯಸುವುದಿಲ್ಲ. ಐಪಿಎಲ್ ಮುಕ್ತಾಯದ ಬಳಿಕವೇ ಟಿ20 ವಿಶ್ವಕಪ್‌ನ ಬಗ್ಗೆ ಚಿಂತಿಸುವುದಾಗಿ ಕಿರಾನ್ ಪೊಲಾರ್ಡ್ ಹೇಳಿಕೊಂಡಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಕ್ಷಣದಲ್ಲಿ ವಿಶ್ವಕಪ್ ಬಗ್ಗೆ ಚಿಂಇಸುವುದು ನಿಜಕ್ಕೂ ಅಪ್ರಸ್ತುತ. ಯಾಕೆಂದರೆ ನಾವೀಗ ಐಪಿಎಲ್ ಟೂರ್ನಮೆಂಟ್ ಆಡುತ್ತಿದ್ದೇವೆ" ಎಂದು ಕಿರಾನ್ ಪೊಲಾರ್ಡ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಪೊಲಾರ್ಡ್ ಹೇಳಿಕೆ ನೀಡಿದ್ದಾರೆ.

ಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯ

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 15ರಂದು ಮುಕ್ತಾಯವಾಗಲಿದ್ದು ಅದಾದ ಎರಡು ದಿನಗಳ ನಂತರ ಟಿ20 ವಿಶ್ವಕಪ್ ಆರಂಭವಾಗಲಿದೆ. "ವೈಯಕ್ತಿಕವಾಗಿ ನೀವು ಒಮದು ಟೂರ್ನಮೆಂಟ್‌ನಲ್ಲಿ ಭಾಗಿಯಾಗಿದ್ದರೆ ನೀವು ಪ್ರಸ್ತುತ ವಿಚಾರವಾಗಿ ಮಾತ್ರವೇ ಚಿಂತಿಸಬೇಕಾಗುತ್ತದೆ. ಹೆಚ್ಚು ದೂರದ ಬಗ್ಗೆ ಆಲೋಚನೆಗಳನ್ನು ಮಾಡಲು ಸಾಧ್ಯವಿಲ್ಲ. ಈಗ ನಮ್ಮ ಮುಂದಿರುವುದು ಎಲ್ಲಾ ಆಟಗಾರರಲ್ಲಿಯೂ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಂಡದ ಸ್ಥಿತಿ ಉತ್ತಮವಾಗಲು ಯೋಜನೆಗಳನ್ನು ರೂಪಿಸಿಕೊಳ್ಳುವುದಾಗಿದೆ. ಈ ಆಟಗಾರರು ನಮಗಾಗಿ ಸಾಕಷ್ಟು ಕರ್ತವ್ಯಗಳನ್ನು ನಿಭಾಯಿಸಿದ್ದಾರೆ. ಹೊರಗಡೆಯಿಂದ ನೋಡುವವರಿಗೆ ಅದೆಲ್ಲಾ ಕಾಣಿಸಲು ಸಾಧ್ಯವಿಲ್ಲ" ಎಂದಿದ್ದಾರೆ ಕಿರಾನ್ ಪೊಲಾರ್ಡ್.

ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹೆಚ್ಚಿನ ಯಶಸ್ಸು ಸಾಧಿಸಲು ವಿಪಲವಾಗಿದೆ. ಅದರಲ್ಲೂ ಯುಎಇನಲ್ಲಿ ನಡೆದ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಕೇವಲ ಒಂದು ಗೆಲುವು ಸಾಧಿಸಲು ಮಾತ್ರವೇ ಯಶಸ್ವಿಯಾಗಿದೆ. ಅಂಕಪಟ್ಟಿಯಲ್ಲಿಯೂ ಕೆಳಕ್ಕೆ ಇಳಿದಿರುವ ಮುಂಬೈ ಸದ್ಯ 6ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್ ಹಂತಕ್ಕೇರುವುದು ಕೂಡ ಮುಂಬೈ ಪಾಲಿಗೆ ಕಠಿಣವಾದಂತೆ ತೊರುತ್ತಿದೆ. ಮುಂದಿನ ಎಲ್ಲಾ ಪಂದ್ಯಗಳನ್ನು ಕೂಡ ಗೆಲ್ಲುತ್ತಾ ಮುಂದುವರಿಯುವ ಅನಿವಾರ್ಯತೆಯೂ ಮುಂಬೈ ಇಂಡಿಯನ್ಸ್ ಮುಂದಿದೆ.

ಇನ್ನು ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಕಿರಾನ್ ಪೊಲಾರ್ಡ್. ಸದ್ಯ ಟಿ20 ವಿಶ್ವಕಪ್‌ನ ಹಾಲಿ ಚಾಂಪಿಯನ್ ಕೂಡ ಆಗಿರುವ ವೆಸ್ಟ್ ಇಂಡೀಸ್ ಈ ಬಾರಿಯ ಚುಟುಕು ವಿಶ್ವಕಪ್‌ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ. ಅಲ್ಲದೆ ಒಮಾನ್ ಹಾಗೂ ಯುಎಇನಲ್ಲಿ ಈ ಬಾರಿಯ ವಿಶ್ವಕಪ್ ನಡೆಯಲಿದ್ದು ಯುಎಇ ಮೈದಾನಗಳಲ್ಲಿ ವೆಸ್ಟ್ ಇಂಡೀಸ್‌ನ ಬಲಾಢ್ಯ ಬ್ಯಾಟಿಂಗ್ ಪಡೆ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆ

ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಬಿಗ್ ಹಿಟ್ಟರ್​ಗಳ ದಂಡೇ ಇದೆ. ಸ್ಪೋಟಕ ಬ್ಯಾಟ್ಸ್​ಮನ್​ಗಳಾಗಿ ನಿಕೋಲಸ್ ಪೂರನ್, ಕ್ರಿಸ್ ಗೇಲ್, ಕೀರನ್ ಪೊಲ್ಲಾರ್ಡ್, ಶಿಮ್ರಾನ್ ಹೆಟ್ಮೇಯರ್, ಎವಿನ್ ಲೂಯಿಸ್ ತಂಡದಲ್ಲಿದ್ದಾರೆ. ಹಾಗೆಯೇ ಸ್ಪೋಟಕ ಆಲ್​ರೌಂಡರ್​ಗಳಾಗಿ ಆಂಡ್ರೆ ರಸೆಲ್, ಡ್ವೇನ್ ಬ್ರಾವೊ, ಫ್ಯಾಬಿಯನ್ ಅಲೆನ್ ಸ್ಥಾನ ಪಡೆದಿದ್ದಾರೆ

ಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವುಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವು

ಟಿ20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್ ತಂಡ ಹೀಗಿದೆ:- ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್, ಕ್ರಿಸ್ ಗೇಲ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಶಿಮ್ರಾನ್ ಹೆಟ್ಮೇಯರ್, ಎವಿನ್ ಲೆವಿಸ್, ರವಿ ರಾಂಪಾಲ್, ಆಂಡ್ರೆ ರಸ್ಸೆಲ್, ಲೆಂಡಲ್ ಸಿಮನ್ಸ್ , ಹೇಡನ್ ವಾಲ್ಷ್, ಓಬೇಡ್ ಮೆಕಾಯ್ ಓಶಾನ್ ಥಾಮಸ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, September 29, 2021, 16:53 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X