ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಹುಲ್ ಚಹರ್

ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದ ಸದಸ್ಯರ ಬಳಗವನ್ನು ಬುಧವಾರ ರಾತ್ರಿ ಘೋಷಣೆ ಮಾಡಲಾಗಿದೆ. ಈ ತಂಡದಲ್ಲಿ ಭಾರತೀಯ ತಂಡದಲ್ಲಿ ಯುವ ಸ್ಪಿನ್ನರ್ ರಾಹುಲ್ ಚಹರ್ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಪಿಎಲ್ ಸಹಿತ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿರುವ ಚಹರ್‌ಗೆ ವಿಶ್ವಕಪ್‌ನಂತಾ ದೊಡ್ಡ ವೇದಿಕೆಯಲ್ಲಿ ಅವಕಾಶ ದೊರೆತಿದೆ.

ಐಪಿಎಲ್‌ನಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಸದ್ಯ ರಾಹುಲ್ ಚಹರ್ ಯುಎಇನಲ್ಲಿಯೇ ಇದ್ದು ಮುಂಬೈ ತಂಡದ ಜೊತೆಗೆ ಅಭ್ಯಾಸವನ್ನು ನಡೆಸಿತ್ತಿದ್ದಾರೆ. ತಂಡದ ಘೋಷಣೆಯಾದ ಸಂದರ್ಭದಲ್ಲಿಯೂ ರಾಹುಲ್ ಚಹರ್ ಅಭ್ಯಾಸವನ್ನು ನಡೆಸುತ್ತಿದ್ದು ಮೈದಾನದಲ್ಲಿ ಇತರ ಆಟಗಾರರೊಂದಿಗೆ ಇದ್ದರು. ಈ ಸಂದರ್ಭದಲ್ಲಿ ತಂಡದ ಎಲ್ಲಾ ಆಟಗಾರರು ಕೂಡ ರಾಹುಲ್ ಚಹರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

ಈ ಕ್ಷಣವನ್ನು ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂದರ್ಣದಲ್ಲಿ ಚಹರ್ ತಮ್ಮ ಸಂತಸವನ್ನು ಕ್ಯಾಮರಾ ಮುಂದೆ ಹಂಚಿಕೊಂಡಿದ್ದಾರೆ. "ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ವಿಶ್ವಕಪ್ ಎಂಬುದು ಬಹಳ ದೊಡ್ಡ ಸಂಗತಿಯಾಗಿದೆ. ಇಂತಾ ಸಂದರ್ಭದಲ್ಲಿ ನಿಮಗೆ ಕೆಲವೇ ಅವಕಾಶಗಳು ವಿಶ್ವಕಪ್‌ನಂತಾ ಟೂರ್ನಮೆಂಟ್‌ನಲ್ಲಿ ದೊರೆಯುತ್ತದೆ, ನಾನು ತುಂಬಾ ಉತ್ಸುಕನಾಗಿದ್ದು ಭಾವುಕನೂ ಆಗಿದ್ದೇನೆ" ಎಂದು ತಮ್ಮೊಳಗಿನ ಭಾವನೆಯನ್ನು ರಾಹುಲ್ ಚಹರ್ ಹಂಚಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಲೆಗ್ ಸ್ಪಿನ್ನರ್ ಚಹರ್ ಈ ಅವಕಾಶವನ್ನು ಪಡೆಯಲು ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಜೊತೆಗೆ ಪೈಪೋಟಿ ನಡೆಸಿ ಸ್ಥಾನ ಸಂಪಾದಿಸಿದ್ದಾರೆ. ಹೀಗಾಗಿ ಯುಎಇನಲ್ಲಿ ಮುಂದಿನ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ತಂಡದ ಭಾಗವಾಗಲಿದ್ದಾರೆ ಚಾಹರ್.

ರಾಹುಲ್ ಚಹರ್ ಭಾರತದ ಟಿ20 ತಂಡಕ್ಕೆ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದಾರೆ. ಇತ್ತೀಚಿನ ಐಪಿಎಲ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಚಹರ್ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

Chahal ಅವರನ್ನು ಕೈಬಿಡುವ ಹಿಂದಿನ ಅಸಲಿ ಕಾರಣ | Oneindia Kannada

ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರಿತ್ ಬೂಮ್ರ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 15:08 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X